SUDDIKSHANA KANNADA NEWS/ DAVANAGERE/ DATE:11-11-2024
ಮಡಿಕೇರಿ: ಕೊಡಗು ಜಿಲ್ಲೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಮಹದೇವಪೇಟೆ, ಮಡಿಕೇರಿ ಇಲ್ಲಿ ಆಯುಷ್ಮತಿ ಕ್ಲಿನಿಕ್ ಅನ್ನು ತೆರೆಯಲು ಸರ್ಕಾರದ ಮಾರ್ಗಸೂಚಿಯಂತೆ ಅನುಮೋದನೆ ದೊರೆತಿದ್ದು, ಅದರಂತೆ ಆಸಕ್ತಿ ಇರುವ ಖಾಸಗಿ ತಜ್ಞ ವೈದ್ಯರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಫಿಜಿಷಿಯನ್, ಮೂಳೆ ಮತ್ತು ಕೀಲು ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಇತರ ತಜ್ಞರು(ಕಿವಿ, ಮೂಗು, ಗಂಟಲು ತಜ್ಞರು, ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮಾನಸಿಕ ರೋಗ ತಜ್ಞರು, ದಂತ ತಜ್ಞರು ಹಾಗೂ ಇತರೆ ಯಾವುದೇ) ತಜ್ಞತೆಯ ಸೇವೆಯನ್ನು ಎಕ್ಸ್‍ಪ್ರೆಸನ್ ಆಫ್ ಇಂಟ್ರೆಸ್ಟ್ ಮೂಲಕ ಸೇವೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸೇವೆ ನೀಡಲು ಇಚ್ಚಿಸುವ ಒಬ್ಬ ತಜ್ಞ ವೈದ್ಯರು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ 3 ಗಂಟೆಯ ಅವಧಿಯ ಸೇವೆ ಕರ್ತವ್ಯ ನಿರ್ವಹಿಸಬೇಕು. ಸಂಬಂಧಪಟ್ಟ ಆಡಳಿತ ವೈದ್ಯಾಧಿಕಾರಿಗಳೊಂದಿಗೆ ಸೇವೆ ನೀಡುವ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು. ಪ್ರತೀ ರೋಗಿಯ ತಪಾಸಣೆಗೆ ರೂ.150 ಗಳ ಗೌರವಧನವನ್ನು ಪಾವತಿಸಲಾಗುವುದು.
ತಜ್ಞರು ಲಭ್ಯವಿರುವ ಸಮಯವನ್ನು ಆರೋಗ್ಯ ಕೇಂದ್ರದಲ್ಲಿ ಪ್ರದರ್ಶಿಸಬೇಕಾಗಿರುತ್ತದೆ. ಆಸಕ್ತಿ ಇರುವ ತಜ್ಞ ವೈದ್ಯರು ನವೆಂಬರ್, 20 ರೊಳಗೆ ವಿವರಗಳೊಂದಿಗೆ ಜಿಲ್ಲಾ ಆರ್‍ಸಿಎಚ್ ಅಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಆರ್‍ಸಿಎಚ್ ಅಧಿಕಾರಿಗಳನ್ನು ಖುದ್ದಾಗಿ ಅಥವಾ ಮೊಬೈಲ್ ಸಂಖ್ಯೆ 9449843203 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.