Home ದಾವಣಗೆರೆ ಸಿಎಂ ವಿಜಯ್ ಬಗ್ಗೆ ಸೂಪರ್ ಸ್ಟಾರ್ ಹೇಳಿದ್ದೇನು? ಸ್ಟಾಲಿನ್ ಭೇಟಿ ಬಗ್ಗೆ ರಜನಿಕಾಂತ್ ಬಿಚ್ಚಿಟ್ಟ ಅಸಲಿ ಸತ್ಯ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಸಿಎಂ ವಿಜಯ್ ಬಗ್ಗೆ ಸೂಪರ್ ಸ್ಟಾರ್ ಹೇಳಿದ್ದೇನು? ಸ್ಟಾಲಿನ್ ಭೇಟಿ ಬಗ್ಗೆ ರಜನಿಕಾಂತ್ ಬಿಚ್ಚಿಟ್ಟ ಅಸಲಿ ಸತ್ಯ!

Share
ರಜನಿಕಾಂತ್
Share

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ತಮಿಳು ಚಿತ್ರರಂಗದ ಹಿರಿಯ ನಟ ರಜನಿಕಾಂತ್ ಅವರು ಭಾನುವಾರ ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇತ್ತೀಚೆಗೆ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬಳಿಕ ಎದ್ದಿದ್ದ ರಾಜಕೀಯ ಟೀಕೆಗಳು ಮತ್ತು ತಮ್ಮ ನಿಲುವಿನ ಕುರಿತು ಅವರು ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ.

ವಿಜಯ್ ಸಿಎಂ ಆಗಿದ್ದಕ್ಕೆ ಆಶ್ಚರ್ಯವಾಯಿತು!

ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದನ್ನು ಕೇಳಿ ನನಗೆ “ತೀವ್ರ ಆಘಾತ (ಶಾಕ್)” ಉಂಟಾಯಿತು ಎಂದು ರಜನಿಕಾಂತ್ ಹೇಳಿದ್ದಾರೆ. “ನಾನು ಯಾವುದೇ ರಾಜಕೀಯದಲ್ಲಿಲ್ಲ. ರಾಜಕೀಯದಿಂದ ದೂರ ಸರಿದು ಹಲವು ದಿನಗಳೇ ಕಳೆದಿವೆ. ನನಗೂ ವಿಜಯ್‌ಗೂ 28 ವರ್ಷಗಳ ವಯಸ್ಸಿನ ವ್ಯತ್ಯಾಸವಿದೆ. ಆದರೆ, ವಿಜಯ್ ಇಲ್ಲಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳ (DMK-AIADMK) ವಿರುದ್ಧ ಒಂಟಿಯಾಗಿ ನಿಂತು, ಸ್ವಂತ ಶಕ್ತಿಯಿಂದ ಈ ದೊಡ್ಡ ಮಟ್ಟದ ಗುರುತಿಸಿಕೊಳ್ಳುವಿಕೆ ಮತ್ತು ಯಶಸ್ಸನ್ನು ಸಾಧಿಸಿದ್ದಾರೆ” ಎಂದು ವಿಜಯ್ ಅವರ ಐತಿಹಾಸಿಕ ವಿಜಯವನ್ನು ರಜನಿಕಾಂತ್ ಶ್ಲಾಘಿಸಿದರು.

ಮೌನ ಮುರಿದಿದ್ದೇಕೆ ರಜನಿ?

ಚುನಾವಣೆಯ ಫಲಿತಾಂಶ ಬಂದಾಗಿನಿಂದ ತಮ್ಮ ರಾಜಕೀಯ ನಿಲುವು ಮತ್ತು ನಡೆಗಳ ಬಗ್ಗೆ ನಿರಂತರವಾಗಿ ಟೀಕೆಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಮಾತನಾಡಿದ ಅವರು, “ನನ್ನ ಚುನಾವಣಾ ನಿಲುವಿನ ಬಗ್ಗೆ ಅನೇಕ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ನಾನು ಈಗಲೇ ಪ್ರತಿಕ್ರಿಯಿಸದಿದ್ದರೆ, ಸುಳ್ಳುಗಳೇ ಸತ್ಯ ಎಂದು ಜನರು ನಂಬಿಬಿಡುತ್ತಾರೆ. ಅದಕ್ಕಾಗಿಯೇ ನಾನು ಈ ಪತ್ರಿಕಾಗೋಷ್ಠಿ ಕರೆದಿದ್ದೇನೆ” ಎಂದರು.

ರಾಜಕೀಯ ಮೀರಿದ್ದು ಸ್ಟಾಲಿನ್ ಸ್ನೇಹ!

ಚುನಾವಣಾ ಫಲಿತಾಂಶದ ನಂತರ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಸಮರ್ಥಿಸಿಕೊಂಡ ಸೂಪರ್ ಸ್ಟಾರ್, “ನಮ್ಮ ಸ್ನೇಹ ರಾಜಕೀಯವನ್ನು ಮೀರಿದ್ದು. ಕೊಳತ್ತೂರು ಕ್ಷೇತ್ರದಲ್ಲಿ ಎಂ.ಕೆ. ಸ್ಟಾಲಿನ್ ಅವರು ಸೋಲನ್ನನುಭವಿಸಿದ್ದು ನನಗೆ ತೀವ್ರ ಬೇಸರ ತರಿಸಿತು. ಕೇವಲ ರಾಜಕೀಯದ ಕಾರಣಕ್ಕಾಗಿ ಅನಗತ್ಯವಾಗಿ ಮಾತನಾಡುವಷ್ಟು ರಜಿನಿ ಅಗ್ಗದ ಅಥವಾ ಕೆಳಮಟ್ಟದ ವ್ಯಕ್ತಿಯಲ್ಲ” ಎಂದು ಟೀಕಾಕಾರರಿಗೆ ಖಾರವಾಗಿ ಉತ್ತರಿಸಿದ್ದಾರೆ.

ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಅಧಿಕಾರ ಹಿಡಿದು ಹೊಸ ರಾಜಕೀಯ ಇತಿಹಾಸ ಬರೆದಿರುವ ಬೆನ್ನಲ್ಲೇ, ಚಿತ್ರರಂಗದ ದಿಗ್ಗಜರು ಹಾಗೂ ರಾಜಕೀಯ ಪಕ್ಷಗಳ ನಡುವಿನ ಸಮೀಕರಣಗಳ ಕುರಿತುತಮಿಳುನಾಡಿನಲ್ಲಿ ಈಗ ಭಾರಿ ಚರ್ಚೆ ಆರಂಭವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles