Home ಕ್ರೈಂ ನ್ಯೂಸ್ NEET-UG ಪೇಪರ್ ಲೀಕ್ ಪ್ರಕರಣದ ಮಾಸ್ಟರ್ ಮೈಂಡ್ ಪುಣೆಯ ಬಯಾಲಜಿ ಅಧ್ಯಾಪಕಿ ಮನೀಶಾ ಮಂಢಾರೆಯನ್ನು ಬಂಧಿಸಿದ CBI
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

NEET-UG ಪೇಪರ್ ಲೀಕ್ ಪ್ರಕರಣದ ಮಾಸ್ಟರ್ ಮೈಂಡ್ ಪುಣೆಯ ಬಯಾಲಜಿ ಅಧ್ಯಾಪಕಿ ಮನೀಶಾ ಮಂಢಾರೆಯನ್ನು ಬಂಧಿಸಿದ CBI

Share
NEET-UG
Share

ನವದೆಹಲಿ: NEET-UG 2026 ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ.

ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಸಮಿತಿಯಲ್ಲಿದ್ದ ಪುಣೆಯ ಮಾಡರ್ನ್ ಕಾಲೇಜಿನ ಸಸ್ಯಶಾಸ್ತ್ರ (Botany) ಉಪನ್ಯಾಸಕಿ ಮನೀಶಾ ಮಂಢಾರೆ ಬಂಧಿತ ಆರೋಪಿಯಾಗಿದ್ದಾರೆ.

ರಹಸ್ಯ ಕೋಚಿಂಗ್ ಕ್ಲಾಸ್ ಮೂಲಕ ಲೀಕ್:

ಕಳೆದ 5-6 ವರ್ಷಗಳಿಂದ NTA ಪರವಾಗಿ ನೀಟ್ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಮನೀಶಾ ತೊಡಗಿಸಿಕೊಂಡಿದ್ದರು. ಈ ಬಾರಿ ಅವರಿಗೆ ಬಾಟನಿ ಮತ್ತು ಜೂಲಾಜಿ ಪ್ರಶ್ನೆ ಪತ್ರಿಕೆಗಳ ಸಂಪೂರ್ಣ ಪ್ರವೇಶವಿತ್ತು.

ಇದರ ದುರುಪಯೋಗ ಪಡಿಸಿಕೊಂಡ ಅವರು, ಮೇ 3 ರಂದು ನಡೆದ ಪರೀಕ್ಷೆಗೂ ಮುನ್ನವೇ, ಅಂದರೆ ಏಪ್ರಿಲ್ 2026 ರಲ್ಲಿ ಪುಣೆಯ ತಮ್ಮ ನಿವಾಸದಲ್ಲಿ ರಹಸ್ಯ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸಿ ಆಯ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಹಾಗೂ ಉತ್ತರಗಳನ್ನು ಬರೆಸಿದ್ದರು. ಇದಕ್ಕೆ ಪ್ರತಿಯಾಗಿ ಅವರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ ಎಂದು ಸಿಬಿಐ ತಿಳಿಸಿದೆ.

ಕಿಂಗ್‌ಪಿನ್ ವಿಚಾರಣೆ ವೇಳೆ ಬಯಲಾದ ಸತ್ಯ:

ಈಗಾಗಲೇ ಬಂಧನಕ್ಕೊಳಗಾಗಿರುವ ಪ್ರಕರಣದ ಕಿಂಗ್‌ಪಿನ್, ನಿವೃತ್ತ ಕೆಮಿಸ್ಟ್ರಿ ಪ್ರೊಫೆಸರ್ ಪಿ.ವಿ. ಕುಲಕರ್ಣಿ ಮತ್ತು ಮನೀಶಾ ವಾಗ್ಮಾರೆ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮನೀಶಾ ಮಂಢಾರೆ ಅವರ ಹೆಸರು ಬೆಳಕಿಗೆ ಬಂದಿದೆ.

ಮನೀಶಾ ವಾಗ್ಮಾರೆ ಎಂಬಾಕೆ ಇಬ್ಬರಿಗೂ ವಿದ್ಯಾರ್ಥಿಗಳನ್ನು ಸೆಳೆಯಲು ಸಹಾಯ ಮಾಡುತ್ತಿದ್ದಳು. ಸದ್ಯ ಈ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ, ಪುಣೆ, ಜೈಪುರ ಮತ್ತು ಗುರುಗ್ರಾಮ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಒಟ್ಟು 9 ಜನರನ್ನು ಸಿಬಿಐ ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles