Home ಕ್ರೈಂ ನ್ಯೂಸ್ ಭೋಪಾಲ್‌ನಲ್ಲಿ ನವವಿವಾಹಿತೆ ಆತ್ಮಹತ್ಯೆ: ನಿವೃತ್ತ ನ್ಯಾಯಾಧೀಶರ ಕುಟುಂಬದ ವಿರುದ್ಧ ಕಿರುಕುಳದ ಆರೋಪ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಭೋಪಾಲ್‌ನಲ್ಲಿ ನವವಿವಾಹಿತೆ ಆತ್ಮಹತ್ಯೆ: ನಿವೃತ್ತ ನ್ಯಾಯಾಧೀಶರ ಕುಟುಂಬದ ವಿರುದ್ಧ ಕಿರುಕುಳದ ಆರೋಪ!

Share
ಆತ್ಮಹತ್ಯೆ
Share

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ 31 ವರ್ಷದ ನವವಿವಾಹಿತೆ ಟ್ವಿಶಾ ಶರ್ಮಾ ಅವರ ಶಂಕಾಸ್ಪದ ಸಾವು ಸಂಚಲನ ಮೂಡಿಸಿದೆ. ನಿವೃತ್ತ ನ್ಯಾಯಾಧೀಶರ ಕುಟುಂಬಕ್ಕೆ ಸೇರಿದ ಮನೆಯಲ್ಲಿ ಟ್ವಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಅತ್ತೆ-ಮಾವನ ವಿರುದ್ಧ ಗಂಭೀರ ಕಿರುಕುಳದ ಆರೋಪಗಳು ಕೇಳಿಬಂದಿವೆ.

ಭೋಪಾಲ್ ನಲ್ಲಿ ನವವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದರೂ, ಆಕೆಯ ಕುಟುಂಬಸ್ಥರು ಗಂಡ, ಆತನ ಅಪ್ಪ ಮತ್ತು ಅಮ್ಮನ ವಿರುದ್ಧ ಆರೋಪಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಟ್ವಿಶಾ ಶರ್ಮಾ ಮೂಲತಃ ನೋಯ್ಡಾದವರಾಗಿದ್ದು, ಒಂದು ವರ್ಷದ ಹಿಂದೆ ಭೋಪಾಲ್ ಮೂಲದ ವಕೀಲ ಸಮರ್ಥ್ ಶರ್ಮಾ ಅವರನ್ನು ವಿವಾಹವಾಗಿದ್ದರು. ಟ್ವಿಶಾ ಅವರ ಮಾವ ನಿವೃತ್ತ ನ್ಯಾಯಾಧೀಶರಾಗಿದ್ದರೆ, ಅತ್ತೆ ಕೂಡ ಮಾಜಿ ನ್ಯಾಯಾಂಗ ಅಧಿಕಾರಿಯಾಗಿದ್ದಾರೆ. ಮದುವೆಯ ನಂತರ ಕೆಲಸ ಬಿಟ್ಟಿದ್ದ ಟ್ವಿಶಾಗೆ ಮತ್ತೆ ಕೆಲಸಕ್ಕೆ ಸೇರುವಂತೆ ಮತ್ತು ಅನ್ ಪ್ಲಾನ್ಡ್ ಗರ್ಭಧಾರಣೆಯ ವಿಷಯವಾಗಿ ಮಾನಸಿಕ ಒತ್ತಡ ಹೇರಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾವಿಗೂ ಮುನ್ನ ಟ್ವಿಶಾ ನೋಯ್ಡಾಕ್ಕೆ ಮರಳಲು ರೈಲು ಟಿಕೆಟ್ ಬುಕ್ ಮಾಡಿದ್ದರು ಎನ್ನಲಾಗಿದ್ದು, ಈ ಸಂಬಂಧ ಭೋಪಾಲ್ ಪೊಲೀಸ್ ಕಮಿಷನರ್ ಸಂಜಯ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *