Home ಕ್ರೈಂ ನ್ಯೂಸ್ ‘ಸೌರಭ್ ಸಿಂಗ್’ ಹೆಸರಲ್ಲಿ ಹಿಂದೂ ಯುವತಿಯರಿಗೆ ಗಾಳ ಹಾಕಿ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್: ಮತಾಂತರಕ್ಕೆ ಒತ್ತಾಯಿಸುತ್ತಿದ್ದ ಸಲೂನ್ ಮಾಲೀಕ ಶೋಯೆಬ್ ಅಖ್ತರ್ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ಸೌರಭ್ ಸಿಂಗ್’ ಹೆಸರಲ್ಲಿ ಹಿಂದೂ ಯುವತಿಯರಿಗೆ ಗಾಳ ಹಾಕಿ ಆಕ್ಷೇಪಾರ್ಹ ವಿಡಿಯೋ ರೆಕಾರ್ಡ್: ಮತಾಂತರಕ್ಕೆ ಒತ್ತಾಯಿಸುತ್ತಿದ್ದ ಸಲೂನ್ ಮಾಲೀಕ ಶೋಯೆಬ್ ಅಖ್ತರ್ ಅರೆಸ್ಟ್!

Share
ಹಿಂದೂ
Share

ಲಕ್ನೋ: ಹಿಂದೂ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ಸೃಷ್ಟಿಸಿ, ಯುವತಿಯರನ್ನು ಪ್ರೇಮಜಾಲಕ್ಕೆ ಕೆಡವಿ, ಲೈಂಗಿಕ ಶೋಷಣೆ ಹಾಗೂ ಮತಾಂತರಕ್ಕೆ ಯತ್ನಿಸುತ್ತಿದ್ದ ಸಲೂನ್ ಮಾಲೀಕನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಗೊಂಡಾ ನಿವಾಸಿ ಶೋಯೆಬ್ ಅಖ್ತರ್ ಎಂದು ಗುರುತಿಸಲಾಗಿದೆ.

ಈತ ಇನ್‌ಸ್ಟಾಗ್ರಾಮ್‌ನಲ್ಲಿ ‘ಸೌರಭ್ ಸಿಂಗ್’ ಎಂಬ ಹೆಸರಿನಿಂದ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದನು. ಈ ಮೂಲಕ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ನಂತರ ಅವರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಒಬ್ಬ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಈ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯು ತನ್ನ ನಿಜವಾದ ಗುರುತನ್ನು ಮರೆಮಾಚಿ ಬಾಲಕಿಯನ್ನು ಪ್ರೀತಿಸುವಂತೆ ನಟಿಸಿದ್ದಲ್ಲದೆ, ವಿಡಿಯೋಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದನು.

ಪೊಲೀಸರು ಆರೋಪಿಯ ಮೊಬೈಲ್ ವಶಪಡಿಸಿಕೊಂಡಿದ್ದು, ಅದರಲ್ಲಿ ಹಲವು ಆಕ್ಷೇಪಾರ್ಹ ದೃಶ್ಯಗಳು ಪತ್ತೆಯಾಗಿವೆ. ಪ್ರಸ್ತುತ ಈತನ ಮೇಲೆ POCSO ಕಾಯ್ದೆ, ಐಟಿ ಕಾಯ್ದೆ ಮತ್ತು ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles