Home ಉದ್ಯೋಗ ವಾರ್ತೆ RRB ALP ನೇಮಕಾತಿ 2026: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

RRB ALP ನೇಮಕಾತಿ 2026: 11,127 ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share
ನೇಮಕಾತಿ
Share

ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿಯು (RRB) 2026ನೇ ಸಾಲಿನ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

ಒಟ್ಟು 11,127 ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ವಿವರಗಳು:

ಹುದ್ದೆಯ ಹೆಸರು: ಸಹಾಯಕ ಲೋಕೋ ಪೈಲಟ್ (Assistant Loco Pilot – ALP)

ಒಟ್ಟು ಹುದ್ದೆಗಳು: 11,127

ವೇತನ: ತಿಂಗಳಿಗೆ ₹19,900 (ಲೆವೆಲ್ 2) ಆರಂಭಿಕ ವೇತನದೊಂದಿಗೆ ಇತರ ಭತ್ಯೆಗಳು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: 15 ಮೇ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2026

ಅರ್ಹತೆಗಳು:

ವಯೋಮಿತಿ: 01-07-2026ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ (ಮೀಸಲಾತಿ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ).

ಆಧಾರ್ ಕಾರ್ಡ್: ಅಭ್ಯರ್ಥಿಯ ಹೆಸರು ಮತ್ತು ಜನ್ಮ ದಿನಾಂಕವು 10ನೇ ತರಗತಿಯ ಅಂಕಪಟ್ಟಿಗೆ ಅನುಗುಣವಾಗಿ ಆಧಾರ್‌ನಲ್ಲಿ ಇರಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಜೂನ್ 14ರ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯಾ ವಲಯದ RRB ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.

Share

Leave a comment

Leave a Reply

Your email address will not be published. Required fields are marked *