Home ಕ್ರೈಂ ನ್ಯೂಸ್ AIADMK ಇಬ್ಬಾಗ? ವಿಜಯ್ ಪಾರ್ಟಿ ಜೊತೆ ಮೈತ್ರಿ ಗೊಂದಲ: ಇಪಿಎಸ್ ರಾಜೀನಾಮೆಗೆ ಸಿ.ವಿ. ಷಣ್ಮುಗಂ ಬಣ ಪಟ್ಟು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

AIADMK ಇಬ್ಬಾಗ? ವಿಜಯ್ ಪಾರ್ಟಿ ಜೊತೆ ಮೈತ್ರಿ ಗೊಂದಲ: ಇಪಿಎಸ್ ರಾಜೀನಾಮೆಗೆ ಸಿ.ವಿ. ಷಣ್ಮುಗಂ ಬಣ ಪಟ್ಟು!

Share
ವಿಜಯ್
Share

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ AIADMK (ಎಐಎಡಿಎಂಕೆ) ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಹಿರಿಯ ನಾಯಕ ಸಿ.ವಿ. ಷಣ್ಮುಗಂ ನೇತೃತ್ವದ ಸುಮಾರು 30ಕ್ಕೂ ಹೆಚ್ಚು ಶಾಸಕರ ಗುಂಪು, ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.

ಸತತ ನಾಲ್ಕು ಚುನಾವಣೆಗಳಲ್ಲಿ ಪಕ್ಷ ಹಿನ್ನಡೆ ಅನುಭವಿಸಿರುವುದು ಮತ್ತು ನಟ ವಿಜಯ್ ಅವರ TVK (ತಮಿಳಗ ವೆಟ್ರಿ ಕಳಗಂ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಉಂಟಾದ ಗೊಂದಲ ಈ ಬಂಡಾಯಕ್ಕೆ ಪ್ರಮುಖ ಕಾರಣವಾಗಿದೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯ್ ಅವರ TVK ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸಿ.ವಿ. ಷಣ್ಮುಗಂ ಬಣವು ಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರವಿಡಲು ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಉತ್ಸುಕವಾಗಿದೆ.

ಆದರೆ, ಇಪಿಎಸ್ ಈ ಪ್ರಸ್ತಾವನೆಯನ್ನು ವಿರೋಧಿಸುತ್ತಿರುವುದು ಪಕ್ಷದೊಳಗೆ ಬಿರುಕು ಮೂಡಿಸಿದೆ. ಪ್ರಸ್ತುತ ಶಾಸಕರು ಪುದುಚೇರಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ‘ರೆಸಾರ್ಟ್ ರಾಜಕೀಯ’ ಮತ್ತೆ ಮುನ್ನೆಲೆಗೆ ಬಂದಿದೆ.

Share

Leave a comment

Leave a Reply

Your email address will not be published. Required fields are marked *