Home ಕ್ರೈಂ ನ್ಯೂಸ್ “ನನಗೆ ತ್ರಿಶಾ ಕಂಡರೆ ಆಗಲ್ಲ”: ವಿಜಯ್ ಪತ್ನಿ ಮತ್ತು ಪೋಷಕರಿಂದ ದೂರವಾಗಲು ತ್ರಿಶಾ ಕೃಷ್ಣನ್ ಕಾರಣವೇ? ಸಿಂಗರ್ ಸುಚಿತ್ರಾ ಹೇಳಿಕೆಯಿಂದ ಶುರುವಾಯ್ತು ಹೊಸ ಕಿಚ್ಚು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುಸಿನಿಮಾ

“ನನಗೆ ತ್ರಿಶಾ ಕಂಡರೆ ಆಗಲ್ಲ”: ವಿಜಯ್ ಪತ್ನಿ ಮತ್ತು ಪೋಷಕರಿಂದ ದೂರವಾಗಲು ತ್ರಿಶಾ ಕೃಷ್ಣನ್ ಕಾರಣವೇ? ಸಿಂಗರ್ ಸುಚಿತ್ರಾ ಹೇಳಿಕೆಯಿಂದ ಶುರುವಾಯ್ತು ಹೊಸ ಕಿಚ್ಚು!

Share
ತ್ರಿಶಾ ಕೃಷ್ಣನ್
Share

ಚೆನ್ನೈ: ಕಾಲಿವುಡ್ ಅಂಗಳದ ಹಾಟ್ ಟಾಪಿಕ್ ಆಗಿರುವ ನಟ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ನಡುವಿನ ಸಂಬಂಧದ ಬಗ್ಗೆ ಗಾಯಕಿ ಸುಚಿತ್ರಾ ರಾಮದುರೈ ನೀಡಿರುವ ಹೇಳಿಕೆ ಈಗ ಭಾರೀ ಸಂಚಲನ ಮೂಡಿಸಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸುಚಿತ್ರಾ, ತ್ರಿಶಾ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಪರೋಪಜೀವಿ (Parasite) ಎಂದು ಕರೆದ ಸುಚಿತ್ರಾ: “ಯಶಸ್ವಿ ವ್ಯಕ್ತಿಗಳು ತಮ್ಮ ಜೀವನದಲ್ಲಿ ಒಂಟಿಯಾದಾಗ ಅವರ ಬಳಿ ಪರೋಪಜೀವಿಗಳು (Parasites) ಸುಳಿಯುತ್ತವೆ” ಎಂದು ಸುಚಿತ್ರಾ ಹೇಳಿದ್ದಾರೆ. ವಿಜಯ್ ಈಗ ತಮ್ಮ ಪತ್ನಿ ಸಂಗೀತಾ ಮತ್ತು ಪೋಷಕರಿಂದ ದೂರವಾಗಿದ್ದಾರೆ, ಅವರು ಒಂಟಿಯಾಗಿದ್ದಾರೆ. ಇಂತಹ ಸಮಯದಲ್ಲಿ ಅವರ ಜೀವನಕ್ಕೆ ತ್ರಿಶಾ ಅಂತಹವರು ಪ್ರವೇಶಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ನನಗೆ ತ್ರಿಶಾ ಇಷ್ಟವಿಲ್ಲ: “ನನಗೆ ತ್ರಿಶಾ ಅವರನ್ನು ಕಂಡರೆ ಕಿಂಚಿತ್ತೂ ಇಷ್ಟವಿಲ್ಲ. ಆದರೆ ವಿಜಯ್ ಅಂದ್ರೆ ತುಂಬಾ ಗೌರವವಿದೆ. ವಿಜಯ್ ಈಗ ರಾಜಕೀಯಕ್ಕೆ ಬಂದಿದ್ದಾರೆ, ಈ ಹಂತದಲ್ಲಿ ಅವರಿಗೆ ತಂದೆ ಎಸ್.ಎ. ಚಂದ್ರಶೇಖರ್ ಅವರ ಮಾರ್ಗದರ್ಶನ ಅತಿ ಅಗತ್ಯ. ಅದನ್ನು ಬಿಟ್ಟು ಇಂತಹ ಡಿಸ್ಟ್ರಾಕ್ಷನ್‌ಗಳು (ಗೊಂದಲಗಳು) ಅವರ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ” ಎಂದು ಸುಚಿತ್ರಾ ಎಚ್ಚರಿಸಿದ್ದಾರೆ.

ಹಿನ್ನೆಲೆ: ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ತ್ರಿಶಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಅದಕ್ಕೆ ಪೂರಕವೆಂಬಂತೆ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿರುವ ಬೆನ್ನಲ್ಲೇ ಸುಚಿತ್ರಾ ಅವರ ಈ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Share

Leave a comment

Leave a Reply

Your email address will not be published. Required fields are marked *