SUDDIKSHANA KANNADA NEWS/ DAVANAGERE/ DATE:19-08-2023
ದಾವಣಗೆರೆ: ಪತ್ನಿಯನ್ನು ಹತ್ಯೆ ಮಾಡಿ ಪತಿ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾದ ಘಟನೆ ಚನ್ನಗಿರಿ ತಾಲೂಕಿನಸಂತೇಬೆನ್ನೂರು (Santhebennur) ಗ್ರಾಮದಲ್ಲಿ ನಡೆದಿದೆ.
48 ವರ್ಷದ ನಾಗರಾಜ್ ಪೊಲೀಸರಿಗೆ ಶರಣಾದ ಆರೋಪಿ. ಸಂತೇಬೆನ್ನೂರು (Santhebennur) ಗ್ರಾಮದ ನಾಗರಾಜ್ ಎಂಬಾತ ತನ್ನ ಪತ್ನಿಯಾದ ಸುಲೋಚನಮ್ಮ ಅವರನ್ನು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಮೃತನ ಪುತ್ರ ಮಧು ದೂರು ಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ:
Channagiri: ಜನರ ಕೆಲಸ ಮಾಡದ ಪಿಡಿಒನನ್ನು ನನ್ನ ಕ್ಷೇತ್ರದಿಂದ ಹೊರ ಹಾಕಿ: ಚನ್ನಗಿರಿ ಶಾಸಕ ಬಸವರಾಜ್ ವಿ. ಶಿವಗಂಗಾ ಕೆಂಡಾಮಂಡಲ
ಗಂಡ ಹೆಂಡತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ನಾಗರಾಜ್ ಸಿಟ್ಟಿಗೆದ್ದು ತನ್ನ ಪತ್ನಿ ಸುಲೋಚನಮ್ಮರಿಗೆ ಮಚ್ಚಿನಿಂದ ಹೊಡೆದಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಸುಲೋಚನಮ್ಮ ಸಾವನ್ನಪ್ಪಿದ್ದಾರೆ. ಹತ್ಯೆಗೈದ ನಂತರ ನೇರವಾಗಿ ಸಂತೇಬೆನ್ನೂರು (Santhebennur)ಪೊಲೀಸ್ ಠಾಣೆಗೆ ನಾಗರಾಜ್ ಹೋಗಿದ್ದಾರೆ. ಆ ಬಳಿಕ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.