Home ಕ್ರೈಂ ನ್ಯೂಸ್ ವರ್ಷಗಳ ಕಾಲ ದೈಹಿಕ ದೌರ್ಜನ್ಯ, ಅತ್ಯಾಚಾರ; ಲಿವ್-ಇನ್ ಪಾಲುದಾರನ ಗುಂಡಿಕ್ಕಿ ಕೊಂದ ಮಹಿಳೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ವರ್ಷಗಳ ಕಾಲ ದೈಹಿಕ ದೌರ್ಜನ್ಯ, ಅತ್ಯಾಚಾರ; ಲಿವ್-ಇನ್ ಪಾಲುದಾರನ ಗುಂಡಿಕ್ಕಿ ಕೊಂದ ಮಹಿಳೆ!

Share
ಮಹಿಳೆ
Share

ಬಿಜ್ನೋರ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಸತತ ದೈಹಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಲಿವ್-ಇನ್ ಪಾಲುದಾರನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಏಪ್ರಿಲ್ 29 ರಂದು ಜುಲಾಪುರ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಅನುಜ್ ಕುಮಾರ್ ಎಂಬುವವರ ಮೃತದೇಹ ಪತ್ತೆಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ತನಿಖೆಯ ವೇಳೆ ಮೃತನ ಪಾಲುದಾರ ಶೋಭಾ ರಾಣಿ ತಪ್ಪೊಪ್ಪಿಕೊಂಡಿದ್ದಾರೆ. ಶೋಭಾ ಅವರ ಹೇಳಿಕೆಯ ಪ್ರಕಾರ, ಅನುಜ್ ಕಳೆದ ಎರಡು ವರ್ಷಗಳಿಂದ ಆಕೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ, ಆಕೆಯ ಆಕ್ಷೇಪಾರ್ಹ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದನು.

ಘಟನೆಯ ಹಿಂದಿನ ರಾತ್ರಿ (ಏಪ್ರಿಲ್ 28) ಅನುಜ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದರಿಂದ ಮತ್ತು ತನ್ನ 10 ವರ್ಷದ ಮಗಳ ಮೇಲೂ ಕೆಟ್ಟ ದೃಷ್ಟಿ ಹೊಂದಿದ್ದರಿಂದ ಅನಿವಾರ್ಯವಾಗಿ ಆತನದ್ದೇ ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾಗಿ ಶೋಭಾ ಪೊಲೀಸರ ಮುಂದೆ ತಿಳಿಸಿದ್ದಾರೆ.

ಸದ್ಯ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *