ಮೇಘಾಲಯ: ಮೇಘಾಲಯದಲ್ಲಿ ನಡೆದ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ‘ಹನಿಮೂನ್ ಹತ್ಯೆ’ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
ತನ್ನ ಪತಿ ರಾಜಾ ರಘುವಂಶಿಯನ್ನು ಹನಿಮೂನ್ ವೇಳೆ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಸೋನಮ್ ರಘುವಂಶಿಗೆ ಶಿಲ್ಲಾಂಗ್ ನ್ಯಾಯಾಲಯವು ಜಾಮೀನು ನೀಡಿದೆ.
ಸೋನಮ್ ಬಿಡುಗಡೆಯಾದ ಬೆನ್ನಲ್ಲೇ, ಈ ಕೃತ್ಯದ ಎರಡನೇ ಪ್ರಮುಖ ಆರೋಪಿ ಹಾಗೂ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಕೂಡ ಬುಧವಾರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ.
ಹಿನ್ನೆಲೆ:
2025ರ ಮೇ ತಿಂಗಳಲ್ಲಿ ಈ ಘಟನೆ ನಡೆದಿತ್ತು. ತನ್ನ ಕುಟುಂಬದ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ ರಾಜ್ ಕುಶ್ವಾಹ ಜೊತೆ ಸೇರಿ ಸೋನಮ್, ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.
ಪ್ರವಾಸಿ ತಾಣವಾದ ‘ವೇ ಸಾವ್ಡಾಂಗ್’ ಜಲಪಾತದ ಬಳಿ ಬಾಡಿಗೆ ಹಂತಕರ ಮೂಲಕ ಪತಿಯನ್ನು ಹತ್ಯೆ ಮಾಡಿ, ಶವವನ್ನು ಪ್ರಪಾತಕ್ಕೆ ಎಸೆಯಲಾಗಿತ್ತು.
ತನಿಖೆಯ ವೇಳೆ ಸೋನಮ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಇದೀಗ 10 ತಿಂಗಳ ಜೈಲುವಾಸದ ನಂತರ, ಚಾರ್ಜ್ಶೀಟ್ನಲ್ಲಿನ ತಾಂತ್ರಿಕ ದೋಷದ (Clerical Error) ಲಾಭ ಪಡೆದು ಸೋನಮ್ ಹೊರಬಂದಿದ್ದು, ಅದೇ ಆಧಾರದ ಮೇಲೆ ರಾಜ್ ಕೂಡ ಬಿಡುಗಡೆಗೆ ಯತ್ನಿಸುತ್ತಿದ್ದಾನೆ.





Leave a comment