ಬೊಂಗಾವ್: ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಢ ಟಿಎಂಸಿ (TMC) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂದೇಶ್‌ಖಾಲಿಯ ಸಂತ್ರಸ್ತೆ ರೇಖಾ ಪಾತ್ರಾ ಮತ್ತು ಆರ್.ಜಿ. ಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನ ದೇವನಾಥ್ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಮಹಿಳೆಯರ ಸುರಕ್ಷತೆಗೆ ನಮ್ಮ ಪಕ್ಷ ನೀಡುವ ಆದ್ಯತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
“ಬಂಗಾಳದ ಮಹಿಳೆಯರನ್ನು ಪೀಡಿಸುವ ಗೂಂಡಾಗಳಿಗೆ ಟಿಎಂಸಿ ಆಶ್ರಯ ನೀಡುತ್ತಿದೆ. ಆದರೆ ಮೇ 4ರ ಫಲಿತಾಂಶದ ನಂತರ ಈ ಎಲ್ಲಾ ಅಪರಾಧಿಗಳನ್ನು ಕಾನೂನಿನ ಮುಂದೆ ನಿಲ್ಲಿಸಲಾಗುವುದು,” ಎಂದು ಮೋದಿ ಭರವಸೆ ನೀಡಿದರು.
ಇದೇ ವೇಳೆ ಏಪ್ರಿಲ್ 29ರೊಳಗೆ ಅತಿಕ್ರಮಣಕಾರರು ದೇಶ ಬಿಟ್ಟು ಹೊರ ಹೋಗಬೇಕು, ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಟುವಾ ಸಮುದಾಯದ ಭದ್ರಕೋಟೆಯಾದ ಠಾಕುರ್‌ನಗರದಲ್ಲಿ ಮಾತನಾಡಿದ ಅವರು, ಸಿಎಎ (CAA) ಮೂಲಕ ನಿರಾಶ್ರಿತರಿಗೆ ಪೌರತ್ವ ನೀಡುವುದಾಗಿ ಪುನರುಚ್ಚರಿಸಿದರು.






Leave a comment