ದಾವಣಗೆರೆ: ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4ನೇ ವಾರ್ಡ್ ನ ಎಸ್.ಜೆ.ಎಂ. ಹಾಗೂ ಎಸ್.ಎಂ. ಕೃಷ್ಣ ನಗರದ ಕಾಂಗ್ರೆಸ್ ಮುಖಂಡರು ಮಾಜಿ ಕೇಂದ್ರ ಸಚಿವರಾದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಂ. ಚಂದ್ರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು.
ನಗರದ ಜಿ.ಎಂ.ಐ.ಟಿ. ಅತಿಥಿ ಗೃಹದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4ನೇ ವಾರ್ಡ್ ನ ಎಸ್.ಎಂ. ಕೃಷ್ಣ ನಗರ ಮತ್ತು ಎಸ್.ಜೆ.ಎಂ. ನಗರದ ಭೋವಿ ಸಮಾಜದ ಕಾಂಗ್ರೆಸ್ ಮುಖಂಡರಾದ ನಾಗರಾಜಪ್ಪ ಮತ್ತು ಮಂಜಪ್ಪನವರು ತಮ್ಮ ಸಮಾಜದ ಅಪಾರ ಮುಖಂಡರು ಹಾಗೂ ಬೆಂಬಲಿಗರು ಸೇರಿದಂತೆ ಇನ್ನೂ ಅನೇಕರು ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಕುಟುಂಬ ರಾಜಕೀಯಕ್ಕೆ ಬೇಸತ್ತು ಬಿಜೆಪಿ ಸೇರ್ಪಡೆಗೊಂಡರು.
ದಕ್ಷಿಣ ಕ್ಷೇತ್ರದ ಅಭಿವೃದ್ಧಿಯ ಚಿಂತನೆಯೊಂದಿಗೆ ಈ ಬಾರಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಮಾಜಿ ಕೇಂದ್ರ ಸಚಿವರಾದ ಡಾ. ಜಿ.ಎಂ. ಸಿದ್ದೇಶ್ವರ ಹಾಗೂ ಹೊಳಲ್ಕೆರೆ ಶಾಸಕರಾದ ಎಂ. ಚಂದ್ರಪ್ಪನವರ ನೇತೃತ್ವದಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ವೀರಭದ್ರಪ್ಪ ಮಾಜಿ ಜಿ.ಪಂ. ಸದಸ್ಯರು, ಮೋಹನ್ ಕುಮಾರ್ ಚಿಕ್ಕಜಾಜೂರು, ಶಿವಾನಂದ್ ಮಹಾನಗರ ಪಾಲಿಕೆ ಮಾಜಿ ಸದಸ್ಯರು, ರಾಮಮೂರ್ತಿ, ತಿಪ್ಪೇಸ್ವಾಮಿ, ಬಸವರಾಜು ಸೇರಿದಂತೆ ಇನ್ನೂ ಆನೇಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





Leave a comment