Home ದಾವಣಗೆರೆ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಆರ್ಥಿಕ ಶಕ್ತಿ ನೀಡಿವೆ: ಸಮರ್ಥ್ ಶಾಮನೂರು
ದಾವಣಗೆರೆಬೆಂಗಳೂರುವಾಣಿಜ್ಯ

ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಆರ್ಥಿಕ ಶಕ್ತಿ ನೀಡಿವೆ: ಸಮರ್ಥ್ ಶಾಮನೂರು

Share
ಗ್ಯಾರಂಟಿ
Share

ದಾವಣಗೆರೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳ ಮೂಲಕ ಮಹಿಳೆಯರು, ಯುವಕರು ಮತ್ತು ಬಡ ಕುಟುಂಬಗಳಿಗೆ ನೇರವಾಗಿ ಆರ್ಥಿಕ ಸಹಾಯ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಹೇಳಿದರು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಾದ ನಾಗಮ್ಮ ಕೇಶವ ಬಡಾವಣೆ, ನಾಗನೂರು, ಶಿರಮಗೊಂಡನಹಳ್ಳಿ, ಶಿರಮಗೊಂಡನಹಳ್ಳಿ ಕ್ಯಾಂಪ್, ಮಹಾದೇವಿಪುರ, ಆರನೇಕಲ್ಲು ಬಡಾವಣೆ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಏಪ್ರಿಲ್ 9 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು ಮನವಿ ಮಾಡಿದರು.

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜಾತಿ, ಧರ್ಮ, ಪ್ರದೇಶ ಭೇದವಿಲ್ಲದೆ ಎಲ್ಲಾ ವರ್ಗದ ಜನರಿಗೆ ನೆರವು ನೀಡಲಾಗುತ್ತಿದೆ. ನುಡಿದಂತೆ ನಡೆದ ಪಕ್ಷ ಎಂದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ ಎಂದರು.

ನಮ್ಮ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪಿದೆ‌.ನಮ್ಮ ಸರ್ಕಾರ ನಿಜವಾದ ರೀತಿಯಲ್ಲಿ ಜನಸೇವೆ ಮಾಡುತ್ತಿದೆ. ನಾನು ಕೂಡ ಜನಸೇವೆ ಮಾಡುವ ಮೂಲಕ ಜನರಿಗೆ ನೆಮ್ಮದಿಯ ಜೀವನ ಕಲ್ಪಿಸಲು ಮುಂದಾಗುತ್ತೇನೆ ನನಗೆ ಒಂದು ಅವಕಾಶ ನೀಡಿ ಎಂದರು.

ಈ ವೇಳೆ ಗ್ರಾಮೀಣ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

Share

Leave a comment

Leave a Reply

Your email address will not be published. Required fields are marked *