ದಾವಣಗೆರೆ: ಏನೋ ಸಣ್ಣ ವಿಷಗಳಿಗೆ. ಸ್ವಲ್ಪ ಯಡವಟ್ಟು ಆಗಿತ್ತು. ಎಲ್ಲವೂ ಸರಿ ಹೋಗಿದೆ. ನಾನು ಮತ್ತು ಜಮೀರ್ ಅಹ್ಮದ್ ತುಂಬಾ ಒಳ್ಳೆಯ ಸ್ನೇಹಿತರು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸ್ಪಷ್ಟಪಡಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್ ನ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜಮೀರ್ ಅಹ್ಮದ್ ಜೊತೆ ಮಾತನಾಡಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ನಾವಿಬ್ಬರೂ ಆತ್ಮೀಯರು. ಎಲ್ಲಾ ಸ್ನೇಹದ ರೀತಿಯಲ್ಲಿ ನಡೆದುಕೊಂಡಿದ್ದೆವು. ಆದರೆ ಅದು ಬೇರೆ ರೀತಿಯ ಸ್ವರೂಪ ಪಡೆದಿತ್ತು. ಎಲ್ಲವೂ ಸರಿಹೋಗಿದೆ. ನಾವಿಬ್ಬರೂ ಜೊತೆಗಿದ್ದೇವೆ. ಮುಂದೆಯೂ ಆತ್ಮೀಯರಾಗಿರುತ್ತೇವೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು.
ಸುದ್ದಿಯ ಮುಖ್ಯಾಂಶಗಳು
ಸ್ನೇಹದ ಸ್ಪಷ್ಟನೆ: ಸಣ್ಣಪುಟ್ಟ ವಿಚಾರಗಳಿಗೆ ಉಂಟಾಗಿದ್ದ ಗೊಂದಲಗಳು ಪರಿಹಾರವಾಗಿದ್ದು, ಜಮೀರ್ ಮತ್ತು ತಾವು ಆತ್ಮೀಯ ಸ್ನೇಹಿತರು ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಚುನಾವಣಾ ತಂತ್ರ: ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಜಮೀರ್ ಅಹ್ಮದ್ ಆಗಮನದಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ.
ಅಸಮಾಧಾನಕ್ಕೆ ಬ್ರೇಕ್: ಮುಸ್ಲಿಂ ಸಮುದಾಯದಲ್ಲಿದ್ದ ಸಣ್ಣಪುಟ್ಟ ಬೇಸರಗಳನ್ನು ಜಮೀರ್ ಅಹ್ಮದ್ ಸರಿಪಡಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಜಮೀರ್ ಅಹ್ಮದ್ ಅವರು ಆಗಮಿಸಿದ್ದು ಮತ್ತಷ್ಟು ಶಕ್ತಿ ತಂದಿದೆ. ನಮ್ಮ ಸ್ನೇಹದ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ನನಗೆ ಮತ್ತು ಜಮೀರ್ ಅಹ್ಮದ್ ಗೆ ಯಾವುದೇ ಅಸಮಾಧಾನ ಇಲ್ಲ. ನಾವಿಬ್ಬರೂ ತುಂಬಾ ಚೆನ್ನಾಗಿಯೇ ಇದ್ದೇವೆ. ಯಾವ ರೀತಿಯ ಭಿನ್ನಾಭಿಪ್ರಾಯವಾಗಲೀ, ಭಿನ್ನಮತವಾಗಲಿ ಇಲ್ಲ. ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಸ್ಲಿಂ ಸಮುದಾಯದ ಸಿಟ್ಟು ಶಮನವವಾಗಿದೆ. ಜಮೀರ್ ಅಹ್ಮದ್ ಬಂದಿರುವುದರಿಂದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಎಸ್. ಎಸ್. ಮಲ್ಲಿಕಾರ್ಜುನ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
- Clarification
- Congress Party
- Davanagere Politics
- Davanagere South Constituency.
- Karnataka Elections.
- Mallikarjun-Zameer Friendship
- Muslim Community support.
- SS Mallikarjun
- Zameer Ahmed Khan
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ವಿಧಾನಸಭಾ ಚುನಾವಣೆ
- ಕಾಂಗ್ರೆಸ್
- ಜಮೀರ್ ಅಹ್ಮದ್ ಖಾನ್
- ದಾವಣಗೆರೆ ದಕ್ಷಿಣ ಕ್ಷೇತ್ರ ಅನುದಾನ
- ದಾವಣಗೆರೆ ರಾಜಕೀಯ
- ಭಿನ್ನಾಭಿಪ್ರಾಯ ಶಮನ.
- ಮಲ್ಲಿಕಾರ್ಜುನ್ ಜಮೀರ್ ಸ್ನೇಹ
- ಮುಸ್ಲಿಂ ಸಮುದಾಯ





Leave a comment