ದಾವಣಗೆರೆ: ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗಳು ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಅಲ್ಲ. ನಾವು ಹಿಂದೆಯೂ ಒಟ್ಟಾಗಿ ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು, ಮುಂದೆಯೂ ಅಧಿಕಾರಕ್ಕೆ ತರುತ್ತೇವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಜತೆಗೆ ಎಲ್ಲಾ ಕಾರ್ಯಕರ್ತರು, ಪಕ್ಷದ ಸದಸ್ಯತ್ವ ಪಡೆದ 78 ಲಕ್ಷ ಸದಸ್ಯರು ಇದ್ದಾರೆ. ಎಲ್ಲರೂ ಯೋಧರಂತೆ ಬಂದು ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದು ನನ್ನ ಒಬ್ಬನ ಸರ್ಕಾರವಲ್ಲ, ಸಿದ್ದರಾಮಯ್ಯ ಅವರೊಬ್ಬರ ಸರ್ಕಾರವಲ್ಲ ಎಂದು ಹೇಳಿದರು.
ಎಲ್ಲಾ ಶಾಸಕರು ಶಿಸ್ತಿನ ಸಿಪಾಯಿಗಳಂತೆ ಶ್ರಮಿಸುತ್ತಿದ್ದಾರೆ. ಸಾವಿರಾರು ಜನ ಕಾರ್ಯಕರ್ತರು ದುಡಿಯುತ್ತಿದ್ದಾರೆs ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
ದಾವಣಗೆರೆಯಲ್ಲಿ ಗೆದ್ದರೆ ಲಿಂಗಾಯತರು ಕಾರಣ, ಸೋತರೆ ಮುಸಲ್ಮಾನರು ಕಾರಣ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನಮಗೆ ಲಿಂಗಾಯತರು, ಮುಸಲ್ಮಾನರು ಎಂಬುದಲ್ಲ. ನಮ್ಮದು ಕಾಂಗ್ರೆಸ್ ಪಕ್ಷ, ಇಲ್ಲಿ ಎಲ್ಲಾ ಸಮುದಾಯಗಳು ಇವೆ. ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ” ಎಂದು ತಿಳಿಸಿದರು.
- Caste Politics vs Policy
- Congress Unity
- Davanagere Byelection
- Disciplined Soldiers
- DK Shivakumar
- DK Shivakumar Statement.
- Karnataka Politics
- Samarth Victory
- Siddaramaiah
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಒಗ್ಗಟ್ಟು
- ಡಿ. ಕೆ. ಶಿವಕುಮಾರ್
- ಡಿ.ಕೆ ಶಿವಕುಮಾರ್ ಹೇಳಿಕೆ
- ದಾವಣಗೆರೆ ಉಪಚುನಾವಣೆ
- ಲಿಂಗಾಯತ ಮುಸ್ಲಿಂ ರಾಜಕಾರಣ
- ಶಿಸ್ತಿನ ಸಿಪಾಯಿಗಳು
- ಸಮರ್ಥ್ ಗೆಲುವು
- ಸಿದ್ದರಾಮಯ್ಯ





Leave a comment