ದಾವಣಗೆರೆ: ನಗರದ ಜನರ ಆರಾಧ್ಯದೈವ ಹಾಗೂ ಜನಮಾನಸದಲ್ಲಿ ನೆಲೆಸಿರುವ ದಾವಣಗೆರೆ ದುಗ್ಗಮ್ಮನ ದೇವಸ್ಥಾನದಲ್ಲಿ ಕೆಲ ಭಕ್ತರು ದೇವಸ್ಥಾನದ ಒಳಭಾಗದಲ್ಲಿ ಚಪ್ಪಲಿ ಬಿಟ್ಟು ಅಮಂಗಲ ಮಾಡಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನವು ಪವಿತ್ರ ಸ್ಥಳ ಎಂಬ ಅರಿವಿಲ್ಲದೆ ಉತ್ಸವ ಮೂರ್ತಿಯ ಮುಂಭಾಗದಲ್ಲಿಯೇ ರಾಶಿ ರಾಶಿ ಚಪ್ಪಲಿ ಬಿಟ್ಟು ಅಶುದ್ಧಗೊಳಿಸಿರುವುದು ಲಕ್ಷಾಂತರ ಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದು ಹೊರಟ್ಟಿ ದುರ್ಗಮ್ಮ ದೇವಸ್ಥಾನ ಸಮಿತಿ ಬೇಸರ ವ್ಯಕ್ತಪಡಿಸಿದೆ.
ಧಾರ್ಮಿಕ ಕ್ಷೇತ್ರದಲ್ಲಿ ನಡೆದ ಈ ಅಚಾತುರ್ಯದಿಂದ ಅಪವಿತ್ರವಾಗಿರುವ ಉತ್ಸವ ಮೂರ್ತಿಯನ್ನು ಪುನಃ ಪಾವಿತ್ರ್ಯಗೊಳಿಸಲು ದಾವಣಗೆರೆ ಗಾಂಧಿನಗರದ ಹೊರಟ್ಟಿ ದುರ್ಗಮ್ಮ ದೇವಸ್ಥಾನ ಸಮಿತಿ ಹಾಗೂ ಗಾಂಧಿನಗರದ ಭಕ್ತರು ವಿಶೇಷ ನಿರ್ಧಾರ ಕೈಗೊಂಡಿದ್ದಾರೆ.
ಇದರ ಅಂಗವಾಗಿ ಮಾರ್ಚ್ 25ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಹೊರಟ್ಟಿ ದುರ್ಗಾಂಬಿಕಾ ದೇವಸ್ಥಾನದಿಂದ ದಾವಣಗೆರೆ ದುಗ್ಗಮ್ಮ ದೇವಿ ದೇವಸ್ಥಾನದವರೆಗೆ ನೂರಾರು ಭಕ್ತರು ಮೆರವಣಿಗೆಯ ಮೂಲಕ ಸಾಗಿ, ದೇವಿಗೆ 101 ಲೀಟರ್ ಹಾಲು ಮತ್ತು ತುಪ್ಪದ ಅಭಿಷೇಕ ನೆರವೇರಿಸಲಿದ್ದಾರೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ ತಿಳಿಸಿದ್ದಾರೆ.
ಈ ಪುಣ್ಯ ಕಾರ್ಯಕ್ಕೆ ಭಕ್ತರು ತಮ್ಮ ಶಕ್ತಿಯನುಸಾರ ಹಾಲು ಮತ್ತು ತುಪ್ಪವನ್ನು ದಾನವಾಗಿ ನೀಡಬಹುದಾಗಿದೆ. ಈ ಶುದ್ಧೀಕರಣ ಕಾರ್ಯದಲ್ಲಿ ಗಾಂಧಿನಗರದ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೊರಟ್ಟಿ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸಮಿತಿಯ ಎಲ್ಲಾ ಸದಸ್ಯರು ಮನವಿ ಮಾಡಿದ್ದಾರೆ.
- B.H. Veerabhadrappa.
- Davanagere Duggamma Devi
- DAVANAGERE NEWS
- Horatti Durgamma Temple
- Milk and Ghee Abhisheka
- Purification Ritual
- Religious Sanctity
- Temple Desecration News
- ಚಪ್ಪಲಿ ವಿವಾದ
- ದಾವಣಗೆರೆ ದುಗ್ಗಮ್ಮ ದೇವಿ
- ದಾವಣಗೆರೆ ಸುದ್ದಿ
- ಧಾರ್ಮಿಕ ಪಾವಿತ್ರ್ಯತೆ.
- ಬಿ.ಹೆಚ್. ವೀರಭದ್ರಪ್ಪ
- ಶುದ್ಧೀಕರಣ ಕಾರ್ಯಕ್ರಮ
- ಹಾಲು ತುಪ್ಪದ ಅಭಿಷೇಕ
- ಹೊರಟ್ಟಿ ದುರ್ಗಮ್ಮ ದೇವಸ್ಥಾನ





Leave a comment