Home ದಾವಣಗೆರೆ ಬಿಜೆಪಿಗೆ ಶಾಕ್ ಕೊಟ್ಟ ಶಿವಸೇನಾ: ಶಿವಸೇನಾ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಘೋಷಣೆ!
ದಾವಣಗೆರೆಬೆಂಗಳೂರು

ಬಿಜೆಪಿಗೆ ಶಾಕ್ ಕೊಟ್ಟ ಶಿವಸೇನಾ: ಶಿವಸೇನಾ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಘೋಷಣೆ!

Share
ಶಿವಸೇನಾ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಗೆ ಶಿವಸೇನಾ ಪಕ್ಷದಿಂದ ಜೆ ಆರ್ ಅರುಣ್ ಕುಮಾರ್ (ಜಡಿಮಠ) ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.

ಶಿವಸೇನಾ ಪಕ್ಷದ ರಾಜ್ಯಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರ ಅಪ್ಪಣೆ ಮತ್ತು ರಾಜ್ಯ ಪದಾಧಿಕಾರಿಗಳ ನಿರ್ಧಾರದಂತೆ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ಮತ್ತು ರಾಜ್ಯ ಕಾರ್ಯದರ್ಶಿ ಎಂ ಎಸ್ ಹರೀಶ್ ಸಮ್ಮುಖದಲ್ಲಿ ಆಯ್ಕೆ ನಡೆದಿದೆ.

ಕ್ಷೇತ್ರದ ಅಭಿವೃದ್ಧಿ ಮತ್ತು ಹಿಂದುತ್ವದ ಅಜೆಂಡಾ ಮೇಲೆ ಪಕ್ಷ ಚುನಾವಣೆಯನ್ನು ಎದುರಿಸಲಿದೆ. ಜಾತಿ ರಾಜಕಾರಣದಲ್ಲಿ ತೊಡಗಿರುವ ರಾಜಕಾರಣಿಗಳಿಗೆ ಈ ಚುನಾವಣೆ ತಕ್ಕ ಪಾಠ ಕಲಿಸಲಿದೆ. ಅಭಿವೃದ್ಧಿಯೇ ಪಕ್ಷದ ಮೂಲ ಮಂತ್ರವಾಗಿದ್ದು, ವಿವಿಧ ಪಕ್ಷಗಳಿಂದ ಹತಾಶೆಗೆ ಒಳಗಾಗಿರುವ ಕಾರ್ಯಕರ್ತರಿಗೆ ಶಿವಸೇನಾ ದಾರಿದೀಪವಾಗಲಿದೆ. ದಾವಣಗೆರೆಯಲ್ಲಿ ಪಕ್ಷವನ್ನು ಗಟ್ಟಿಯಾಗಿ ಬೆಳೆಸಲು ಈ ಉಪ ಚುನಾವಣೆ ಅತ್ಯಗತ್ಯವಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಚುನಾವಣೆಯಲ್ಲಿ ಜನರು ಶಿವಸೇನಾ ಜೊತೆಗಿದ್ದು, ಹೆಚ್ಚಿನ ಮತಗಳನ್ನು ನೀಡುವ ಮೂಲಕ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಎಂ ಎಸ್ ಹರೀಶ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles