ಮೈಸೂರು/ದಾವಣಗೆರೆ: ಮೈಸೂರಿನಲ್ಲಿರುವ ಕೇಂದ್ರ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್ – CSTS) 2026-27ನೇ ಸಾಲಿನ ವಿವಿಧ ಉದ್ಯೋಗಾಧಾರಿತ ಡಿಪ್ಲೊಮಾ ಕೋರ್ಸ್‌ಗಳಿಗೆ ಮತ್ತು ಉಚಿತ ಅಲ್ಪಾವಧಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಭಾರತ ಸರ್ಕಾರದ ರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಸಂಸ್ಥೆಯು ಪಾಲಿಮರ್ ಮತ್ತು ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಪರಿಣಿತ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುತ್ತಿದೆ.
ಲಭ್ಯವಿರುವ ಕೋರ್ಸ್‌ಗಳು:
ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT): 3 ವರ್ಷಗಳ ಅವಧಿ.
ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (DPMT): 3 ವರ್ಷಗಳ ಅವಧಿ.
ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ: 3 ರಿಂದ 6 ತಿಂಗಳ ಅವಧಿಯ ವಿವಿಧ ತಾಂತ್ರಿಕ ಕೋರ್ಸ್‌ಗಳು (PMKVY ಮತ್ತು ಕರ್ನಾಟಕ ಕೌಶಲ್ಯ ಯೋಜನೆ ಅಡಿ).
ಅರ್ಹತೆ ಮತ್ತು ಸೌಲಭ್ಯಗಳು:
ಎಸ್‌ಎಸ್‌ಎಲ್‌ಸಿ (SSLC) ಅಥವಾ ಪಿಯುಸಿ (PUC) ಪರೀಕ್ಷೆ ಬರೆದವರು ಅಥವಾ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ಉಚಿತ ಕೌಶಲ್ಯ ತರಬೇತಿಗೆ ಆಯ್ಕೆಯಾದವರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು.
ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಕ್ಯಾಂಪಸ್ ನೇಮಕಾತಿ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಆನ್‌ಲೈನ್ ಮೂಲಕ https://cipet26.onlineregistrationform.org/CIPET/ ವೆಬ್‌ಸೈಟ್‌ನಲ್ಲಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480253024 / 9791431827 ಅನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.





Leave a comment