ಬೆಂಗಳೂರು: ರಾಜ್ಯ ಸರ್ಕಾರವು ಡಿಜಿಟಲ್ ರೂಪಾಂತರ, ಮೂಲಸೌಕರ್ಯ ಮತ್ತು ತಾಯಿ-ಮಗು ಆರೈಕೆಯ ಮೇಲೆ ಕೇಂದ್ರೀಕರಿಸುವ ಸಮಗ್ರ ಆರೋಗ್ಯ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಸಿಎಂ ಸಿದ್ದರಾಮಯ್ಯರು ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
ಮೂಲಸೌಕರ್ಯ ಮತ್ತು ಉದ್ಯೋಗ:
ಪ್ರಾಥಮಿಕ ಮತ್ತು ತಾಲ್ಲೂಕು ಆಸ್ಪತ್ರೆಗಳ ಅಭಿವೃದ್ಧಿಗೆ ₹900 ಕೋಟಿ ಅನುದಾನ ಹಾಗೂ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿಗೆ ಕ್ರಮ.
ತಾಯಿ ಮತ್ತು ಶಿಶು ಆರೋಗ್ಯ:
ತಾಯಂದಿರ ಮರಣ ಪ್ರಮಾಣದಲ್ಲಿ ಶೇ. 24ರಷ್ಟು ಇಳಿಕೆಯಾದ ಹಿನ್ನೆಲೆಯಲ್ಲಿ, “ಶೂನ್ಯ ಮರಣ” ಅಭಿಯಾನವನ್ನು ಬಲಪಡಿಸಲಾಗುವುದು. ಟೈಪ್-1 ಮಧುಮೇಹವಿರುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಇನ್ಸುಲಿನ್ ಪೆನ್ ನೀಡಲಾಗುವುದು.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ:
ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲಾಗಿದ್ದು, ಇದಕ್ಕಾಗಿ ₹400 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ.
ಡಿಜಿಟಲ್ ಆರೋಗ್ಯ:
‘ಸಮಸ್ತ’ ಮೊಬೈಲ್ ಆ್ಯಪ್ ಬಿಡುಗಡೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಯುಪಿಐ (UPI) ಮೂಲಕ ಶುಲ್ಕ ಪಾವತಿ ಮತ್ತು ಟೆಲಿ-ರೇಡಿಯಾಲಜಿ ಸೌಲಭ್ಯ ಜಾರಿ.
ವಿಶೇಷ ಚಿಕಿತ್ಸೆ:
ದೀರ್ಘಕಾಲದ ಕಾಯಿಲೆ ಇರುವವರಿಗೆ ಕೇರಳ ಮಾದರಿಯ ಮನೆ-ಆಧಾರಿತ ಉಪಶಮನ ಆರೈಕೆ ಮತ್ತು ವಾರ್ಷಿಕ 1.35 ಲಕ್ಷ ಡಯಾಲಿಸಿಸ್ ಸೇವೆ ಒದಗಿಸಲು ನಿರ್ಧಾರ
ಪ್ರಮುಖ ಮುಖ್ಯಾಂಶಗಳು (Highlights):
ತಾಯಿ ಮತ್ತು ಶಿಶು ಮರಣ ತಡೆ: ತಾಯಂದಿರ ಮರಣ ಪ್ರಮಾಣವನ್ನು ಶೇ. 24ರಷ್ಟು ಇಳಿಕೆ ಮಾಡಲಾಗಿದ್ದು, ಇದನ್ನು ಶೂನ್ಯಕ್ಕೆ ತರುವ ಗುರಿ ಹೊಂದಲಾಗಿದೆ. ಹೆಚ್ಚುವರಿಯಾಗಿ 63 ತಾಲ್ಲೂಕುಗಳಲ್ಲಿ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳನ್ನು (NRC) ಸ್ಥಾಪಿಸಲು ₹6 ಕೋಟಿ ಮೀಸಲಿಡಲಾಗಿದೆ.
ರಕ್ತಹೀನತೆ ಮುಕ್ತ ಕರ್ನಾಟಕ: 52 ಲಕ್ಷ ಮಕ್ಕಳ ತಪಾಸಣೆ ನಡೆಸಿ, ಅದರಲ್ಲಿ ರಕ್ತಹೀನತೆ ಕಂಡಬಂದ 11.7 ಲಕ್ಷ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಸೌಕರ್ಯ ಅಭಿವೃದ್ಧಿ: ಆಸ್ಪತ್ರೆಗಳ ನಿರ್ಮಾಣ ಮತ್ತು ಆಧುನೀಕರಣಕ್ಕಾಗಿ ₹900 ಕೋಟಿ ಹಾಗೂ ಜಿಲ್ಲಾ/ತಾಲ್ಲೂಕು ಆಸ್ಪತ್ರೆಗಳ ‘ಟ್ರಾಮಾ ಕೇರ್’ (Trauma Care) ಮೇಲ್ದರ್ಜೆಗೇರಿಸಲು ₹45 ಕೋಟಿ ಅನುದಾನ ನೀಡಲಾಗಿದೆ.
ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ: ಚಿಕಿತ್ಸಾ ಪ್ಯಾಕೇಜ್ ದರಗಳನ್ನು (HBP-2022) ಪರಿಷ್ಕರಿಸಲಾಗಿದ್ದು, ಇದಕ್ಕಾಗಿ ಹೆಚ್ಚುವರಿಯಾಗಿ ₹400 ಕೋಟಿ ಒದಗಿಸಲಾಗಿದೆ.
ಹೊಸ ಆರೋಗ್ಯ ಉಪಕ್ರಮಗಳು:
ಟೈಪ್-1 ಮಧುಮೇಹ: 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಇನ್ಸುಲಿನ್ ಪೆನ್ ವಿತರಣೆ.
ಡಯಾಲಿಸಿಸ್ ಸೇವೆ: 50 ಕೇಂದ್ರಗಳಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಳ, ವಾರ್ಷಿಕ 1.35 ಲಕ್ಷ ಸೇವೆಗಳ ಗುರಿ.
ಉಪಶಮನ ಆರೈಕೆ (Palliative Care): ಕೇರಳ ಮಾದರಿಯಲ್ಲಿ ಗೃಹಾಧಾರಿತ ಸೇವೆ ನೀಡಲು ಕ್ರಮ.
ಡಿಜಿಟಲ್ ಆರೋಗ್ಯ: ‘ಸಮಸ್ತ’ ಆ್ಯಪ್ ಬಳಕೆ, ಸಂಪೂರ್ಣ ಗಣಕೀಕೃತ ನೋಂದಣಿ, ಯುಪಿಐ ಪಾವತಿ ಮತ್ತು ಟೆಲಿ-ರೇಡಿಯಾಲಜಿ ಸೌಲಭ್ಯಗಳ ಜಾರಿ





Leave a comment