ಬೆಂಗಳೂರು: ಭಾರತೀಯ ಪವರ್ ಗ್ರಿಡ್ ಕಾರ್ಪೊರೇಶನ್ ಲಿಮಿಟೆಡ್ (POWERGRID) 2026ನೇ ಸಾಲಿನ ವಿವಿಧ ಪ್ರಶಿಕ್ಷಣಾರ್ಥಿ (Apprentice) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 188 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ಈ ನೇಮಕಾತಿಯು ಎಲೆಕ್ಟ್ರಿಷಿಯನ್ (ITI), ಡಿಪ್ಲೊಮಾ (ಸಿವಿಲ್/ಎಲೆಕ್ಟ್ರಿಕಲ್), ಪದವಿ (ಸಿವಿಲ್/ಎಲೆಕ್ಟ್ರಿಕಲ್), ಎಚ್‌ಆರ್ ಎಕ್ಸಿಕ್ಯೂಟಿವ್, ಸಿಎಸ್‌ಆರ್ ಎಕ್ಸಿಕ್ಯೂಟಿವ್ ಮತ್ತು ರಾಜಭಾಷಾ ಅಸಿಸ್ಟೆಂಟ್ ಹುದ್ದೆಗಳನ್ನು ಒಳಗೊಂಡಿದೆ. ಕರ್ನಾಟಕ ಮತ್ತು ತಮಿಳುನಾಡು ಒಳಗೊಂಡ ದಕ್ಷಿಣ ವಲಯ-II ರಲ್ಲಿ ಒಟ್ಟು 15 ಹುದ್ದೆಗಳಿವೆ.
ಅರ್ಹತೆಗಳು:
ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಐಟಿಐ, ಡಿಪ್ಲೊಮಾ ಅಥವಾ ಬಿ.ಇ/ಬಿ.ಟೆಕ್ ಪದವಿ ಹೊಂದಿರಬೇಕು.
ಅಭ್ಯರ್ಥಿಗಳು ಕಳೆದ ಎರಡು ವರ್ಷಗಳೊಳಗೆ (12-03-2024 ರಿಂದ 11-03-2026) ಉತ್ತೀರ್ಣರಾಗಿರಬೇಕು.
ಕನಿಷ್ಠ ವಯೋಮಿತಿ 18 ವರ್ಷಗಳು.
ವೇತನ (ಸ್ಟೈಫಂಡ್):
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹13,500 ರಿಂದ ₹17,500 ವರೆಗೆ ಸ್ಟೈಫಂಡ್ ನೀಡಲಾಗುವುದು. ಕಂಪನಿಯ ವಸತಿ ಸೌಲಭ್ಯವಿಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ₹2,500 ಮನೆ ಬಾಡಿಗೆ ಭತ್ಯೆ (HRA) ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ (Merit Basis) ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 02-03-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-03-2026
ಅಧಿಕೃತ ವೆಬ್ ಸೈಟ್: https://www.powergrid.in




Leave a comment