ದಾವಣಗೆರೆ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಅಭಿಯಾನದ ಅಡಿಯಲ್ಲಿ ಇದೇ ಬರುವ ಮಾರ್ಚ್ 01, 2026 ರಂದು ನಗರದಲ್ಲಿ ಬೃಹತ್ ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿದೆ. ಡ್ರಗ್ಸ್ ಮುಕ್ತ ದಾವಣಗೆರೆ, ಸೈಬರ್ ಸುರಕ್ಷತೆ, ಮಹಿಳಾ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ., ಐಪಿಎಸ್ ರವರ ನೇತೃತ್ವದಲ್ಲಿ ನಡೆಯಲಿರುವ ಈ ಸ್ಪರ್ಧೆಗೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ರವರು ಬೆಳಿಗ್ಗೆ 06:00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ವರಿಷ್ಠಾಧಿಕಾರಿ ಹೆಚ್. ಟಿ. ಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಮುಖ ಮಾಹಿತಿಗಳು:
ವಿಭಾಗಗಳು:
10 ಕಿ.ಮೀ ಮತ್ತು 5 ಕಿ.ಮೀ ಓಟ.
ಅರ್ಹತೆ:
18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು, ವಿದ್ಯಾರ್ಥಿಗಳು ಮತ್ತು ಕ್ರೀಡಾಪಟುಗಳು ಭಾಗವಹಿಸಬಹುದು.
ಬಹುಮಾನ:
10 ಕಿ.ಮೀ ವಿಜೇತರಿಗೆ ₹20,000 ವರೆಗೆ ಹಾಗೂ 5 ಕಿ.ಮೀ ವಿಜೇತರಿಗೆ ₹10,000 ವರೆಗೆ ನಗದು ಬಹುಮಾನ ನೀಡಲಾಗುತ್ತದೆ.
ನೋಂದಣಿ:
ಆಸಕ್ತರು ಫೆಬ್ರವರಿ 28ರ ಮಧ್ಯಾಹ್ನ 3:00 ಗಂಟೆಯೊಳಗೆ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳುವುದು ಕಡ್ಡಾಯ.
ಪ್ರಮುಖ ವಿವರಗಳು:
ದಿನಾಂಕ: 01-03-2026 (ಭಾನುವಾರ)
ಸಮಯ: ಬೆಳಿಗ್ಗೆ 06:00 ಗಂಟೆಗೆ
ಸ್ಥಳ: ಜಿಲ್ಲಾ ಕ್ರೀಡಾಂಗಣ, ದಾವಣಗೆರೆ.
ಚಾಲನೆ ನೀಡುವವರು: ಡಾ. ಬಿ.ಆರ್. ರವಿಕಾಂತೇಗೌಡ ಐಪಿಎಸ್ (ಮಾನ್ಯ ಐಜಿಪಿ, ಪೂರ್ವ ವಲಯ).
ನೇತೃತ್ವ: ಶೇಖರ್ ಹೆಚ್.ಟಿ. ಐಪಿಎಸ್ (ಪೊಲೀಸ್ ಅಧೀಕ್ಷಕರು, ದಾವಣಗೆರೆ).
ಬಹುಮಾನದ ವಿವರಗಳು (ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ)
| ವಿಭಾಗ | ಪ್ರಥಮ ಬಹುಮಾನ | ದ್ವಿತೀಯ ಬಹುಮಾನ | ತೃತೀಯ ಬಹುಮಾನ |
| 10 ಕಿ.ಮೀ (ಪುರುಷ/ಮಹಿಳೆ) | ₹ 20,000 | ₹ 10,000 | ₹ 5,000 |
| 5 ಕಿ.ಮೀ (ಪುರುಷರು) | ₹ 10,000 | ₹ 5,000 | ₹ 3,000 |
| 5 ಕಿ.ಮೀ (ವಿಶೇಷ ಮಹಿಳಾ ವಿಭಾಗ) | ₹ 10,000 | ₹ 5,000 | ₹ 3,000 |
ನೋಂದಣಿ ಮಾಹಿತಿ
ಅರ್ಹತೆ: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಯುವಕ-ಯುವತಿಯರು ಮತ್ತು ನಾಗರಿಕರು.
ಕೊನೆಯ ದಿನಾಂಕ: 28-02-2026 (ಮಧ್ಯಾಹ್ನ 03:00 ಗಂಟೆಯೊಳಗೆ).
ನೋಂದಣಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಓಟದ ಮಾರ್ಗಗಳು (Route Map)
10 ಕಿ.ಮೀ ಮಾರ್ಗ:
ಜಿಲ್ಲಾ ಕ್ರೀಡಾಂಗಣ ➡️ ಡೆಂಟಲ್ ಕಾಲೇಜ್ ರಸ್ತೆ ➡️ ಗುಂಡಿ ವೃತ್ತ ➡️ ಶಾಮನೂರು ರಸ್ತೆ ➡️ ಲಕ್ಷ್ಮಿ ಫ್ಲೋರ್ ಮಿಲ್ ವೃತ್ತ ➡️ ಬಾಪೂಜಿ ಬ್ಯಾಂಕ್ ಸಮುದಾಯ ವೃತ್ತ ➡️ ಶಾರದಾಂಭ ವೃತ್ತ ➡️ ಕ್ಲಾಕ್ ಟವರ್ ವೃತ್ತ ➡️ ಸಂಗೊಳ್ಳಿ ರಾಯಣ್ಣ ವೃತ್ತ (ಬಲ ತಿರುವು) ➡️ ಹಳೆ ಪಿಬಿ ರಸ್ತೆ ➡️ ಅರುಣ ವೃತ್ತ (ಚೆನ್ನಮ್ಮ ವೃತ್ತ) ➡️ ಎಂ.ಜಿ ವೃತ್ತ (ಬಲ ತಿರುವು) ➡️ ಜಯದೇವ ವೃತ್ತ ➡️ ವಿದ್ಯಾರ್ಥಿ ಭವನ ಜಂಕ್ಷನ್ ➡️ ಬಾಪೂಜಿ ಬ್ಯಾಂಕ್ (ಬಲ ತಿರುವು) ➡️ ಜಿಲ್ಲಾ ಕ್ರೀಡಾಂಗಣದ ಮುಖ್ಯದ್ವಾರ.
5 ಕಿ.ಮೀ ಮಾರ್ಗ:
ಜಿಲ್ಲಾ ಕ್ರೀಡಾಂಗಣ ➡️ ಹದಡಿ ರಸ್ತೆ ➡️ ಎ ಆರ್ ಜಿ ಕಾಲೇಜ್ ರಸ್ತೆ ➡️ ಯುಬಿಡಿಟಿ ಕಾಲೇಜ್ ಬಳಿ ತಿರುವು ➡️ ಡೆಂಟಲ್ ಕಾಲೇಜ್ ರಸ್ತೆ ➡️ ಮಡೆಕಲ್ ಹಾಸ್ಟೇಲ್ ರಸ್ತೆ ➡️ ಆಂಜನೇಯ ಬಡಾವಣೆ ➡️ ಥೀಮ್ ಪಾರ್ಕ್ ➡️ ನೂತನ ಕಾಲೇಜು ರಸ್ತೆ ➡️ ವಿದ್ಯಾನಗರ ಕಾಫಿ ಡೇ (ಬಲ ತಿರುವು) ➡️ ವಿದ್ಯಾನಗರ 2ನೇ ಬಸ್ ನಿಲ್ದಾಣ (ಎಡ ತಿರುವು) ➡️ ಹದಡಿ ರಸ್ತೆ ಮೂಲಕ ಪುನಃ ಕ್ರೀಡಾಂಗಣ.
ನೋಂದಣಿ ಲಿಂಕ್ (Registration Link)
ಇಲ್ಲಿ ಕ್ಲಿಕ್ ಮಾಡಿ ನೋಂದಾಯಿಸಿ (Google Forms)
- 10K Marathon Davanagere
- 10ಕೆ ಮ್ಯಾರಥಾನ್
- 5K Run
- 5ಕೆ ಮ್ಯಾರಥಾನ್
- Cyber Safe City
- Davanagere District Police
- Davanagere Marathon 2026
- Davanagere Sports Stadium
- Fitness for All
- Namma Police Namma Hemme
- Registration Link Marathon.
- Run with Police
- ಜಿಲ್ಲಾ ಕ್ರೀಡಾಂಗಣ ದಾವಣಗೆರೆ
- ಜಿಲ್ಲಾ ಪೊಲೀಸ್ ದಾವಣಗೆರೆ
- ಡ್ರಗ್ಸ್ ಮುಕ್ತ ದಾವಣಗೆರೆ
- ದಾವಣಗೆರೆ ಮ್ಯಾರಥಾನ್ 2026
- ನಮ್ಮ ಪೊಲೀಸ್ ನಮ್ಮ ಹೆಮ್ಮೆ
- ಪೊಲೀಸರೊಂದಿಗೆ ಓಟ
- ರವಿಕಾಂತೇಗೌಡ ಐಪಿಎಸ್.
- ಶೇಖರ್ ಹೆಚ್ ಟಿ ಐಪಿಎಸ್





Leave a comment