ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಲಯವು (RRC Western Railway) 2025-26ನೇ ಸಾಲಿಗೆ ಒಟ್ಟು 5,349 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಐಟಿಐ (ITI) ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.
ನೇಮಕಾತಿ ಪ್ರಮುಖ ವಿವರಗಳು:
ಹುದ್ದೆಯ ಹೆಸರು: ಅಪ್ರೆಂಟಿಸ್ (ವಿವಿಧ ಟ್ರೇಡ್‌ಗಳು)
ಒಟ್ಟು ಹುದ್ದೆಗಳು: 5,349
ವಿದ್ಯಾರ್ಹತೆ:
10ನೇ ತರಗತಿ (ಕನಿಷ್ಠ 50% ಅಂಕಗಳೊಂದಿಗೆ) ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ITI ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ:
15 ರಿಂದ 24 ವರ್ಷಗಳು (SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಗೆ 3 ವರ್ಷ ಸಡಿಲಿಕೆ ಇರುತ್ತದೆ).
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 21, 2026
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 23, 2026 (ಸಂಜೆ 5:00 ರವರೆಗೆ)
ಆಯ್ಕೆ ವಿಧಾನ:
ಯಾವುದೇ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. 10ನೇ ತರಗತಿ ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರು ಅಧಿಕೃತ ವೆಬ್‌ಸೈಟ್ www.rrc-wr.com ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕವಿದ್ದು, SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.





Leave a comment