SUDDIKSHANA KANNADA NEWS/ DAVANAGERE/ DATE:14-08-2023
ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಚನ್ನಗಿರಿ (Channagiri) ಉಪನೋಂದಣಿ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಚನ್ನಗಿರಿ (Channagiri) ನಗರ, ಮತ್ತು ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಹಾಗೂ ಕೃಷಿಯೇತರ ಆಸ್ತಿಗಳ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಿಸುವ ಸಲುವಾಗಿ ಸಭೆ ನಡೆಸಲಾಯಿತು.
ಈ ಸುದ್ದಿಯನ್ನೂ ಓದಿ:
Sulekere Big Story: ಕುಡಿಯಲು ಯೋಗ್ಯವಲ್ಲ ಸೂಳೆಕೆರೆ ನೀರು: ಜೀವಜಲಚರ, ಕೃಷಿಗೆ ಕಂಟಕನಾ? ಆತಂಕದಲ್ಲಿ ಮತ್ಸ್ಯ ಪ್ರಿಯರು, ರೈತಾಪಿ ವರ್ಗ…!
ತಹಶೀಲ್ದಾರ್ ಹಾಗೂ ತಾಲ್ಲೂಕು ಮೌಲ್ಯಮಾಪನ ಉಪಸಮಿತಿ, ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಆವರಣದಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಸರ್ಕಾರಿ ಅಂದಾಜು ಮಾರ್ಗಸೂಚಿ ಬೆಲೆಗಳನ್ನು 2023-24ನೇ ಸಾಲಿನಲ್ಲಿ ಪರಿಷ್ಕರಿಸುವ ಸಂಬಂಧ ಚರ್ಚಿಸಿ, ಸರ್ವ ಸದಸ್ಯರ ಅಭಿಪ್ರಾಯದಂತೆ ಚಾಲ್ತಿ ಇರುವ ಮಾರ್ಗ ಸೂಚಿಬೆಲೆ 2019-20ನೇ ಸಾಲಿನಲ್ಲಿ ಪರಿಷ್ಕೃತಗೊಂಡಿದ್ದು ನಂತರದಲ್ಲಿ ಪರಿಷ್ಕರಣೆಗೊಂಡಿರುವುದಿಲ್ಲ.
ಆದ್ದರಿಂದ ಚಾಲ್ತಿ ಇರುವ ದರಗಳ ಪರಿಷ್ಕರಣೆ ಮಾಡುವುದು ಸೂಕ್ತವೆಂದು ತೀರ್ಮಾನಿಸಿ ಆಗಸ್ಟ್ 12 ರಿಂದ 15 ದಿವಸಗಳೊಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳನ್ನು ದಾಖಲಾತಿಗಳ ಆಧಾರಗಳ ಮೇಲೆ ಸಕಾರಣಗಳೊಂದಿಗೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ತಹಸೀಲ್ದಾರ್ ಹಾಗೂ ಉಪನೋಂದಣಾಧಿಕಾರಿಗಳು ಚನ್ನಗಿರಿ (Channagiri) ಅವರಿಗೆ ಸಲ್ಲಿಸುವಂತೆ ಕೋರಲಾಗಿದೆ.