SUDDIKSHANA KANNADA NEWS
DATE:24-03-2023
ದಾವಣಗೆರೆ: ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಊದಲು ಮಾರ್ಚ್ 25ಕ್ಕೆ ದಾವಣಗೆರೆ (DAVANAGERE)ಗೆ ಆಗಮಿಸುತ್ತಿರುವ ನರೇಂದ್ರ ಮೋದಿ (NARENDRA MODI)ಅವರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಣ್ಣೆನಗರಿ ತುಂಬೆಲ್ಲಾ ಬಿಜೆಪಿ ಫ್ಲೆಕ್ಸ್ (BJP FLEX), ಬಾವುಟ, ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ನಗರವು ಕೇಸರಿಮಯವಾಗಿದೆ.
ನಗರದ ಜಿಎಂಐಟಿ (GMIT) ಸಮೀಪದ 400 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಪೆಂಡಾಲ್ (PENDAL) ಹಾಕಲಾಗಿದೆ. 2 ಲಕ್ಷ ಖುರ್ಚಿಗಳನ್ನು ಹಾಕಲಾಗಿದ್ದು, 10 ಲಕ್ಷಕ್ಕೂ ಹೆಚ್ಚಿನ ಜನರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ನಿರೀಕ್ಷೆ ಇದೆ. ಸಂಸದ ಜಿ. ಎಂ. ಸಿದ್ದೇಶ್ವರ (G.M, SIDDESHWARA), ಶಾಸಕ ಎಂ. ಪಿ. ರೇಣುಕಾಚಾರ್ಯ (M.P. RENUKACHARYA), ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ (RAJANAHALLI SHIVAKUMAR), ಯುವ ಮುಖಂಡ ಶಿವನಗೌಡ ಪಾಟೀಲ್ (SHIVANAGOWDA PATIL)ಸೇರಿದಂತೆ ಬಿಜೆಪಿ ಮುಖಂಡರು (BJP LEADERS) ಸಿದ್ಧತೆ ಪರಿಶೀಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳು ಎಲ್ಲಾ ಕಡೆಗಳಲ್ಲಿ ಅಳವಡಿಸಲಾಗಿದೆ. ಪಿ. ಬಿ. ರಸ್ತೆ (P. B. ROAD), ಜಯದೇವ ವೃತ್ತ, ಶಾಮನೂರು ರಸ್ತೆ (SHAMANURU ROAD)ಸೇರಿದಂತೆ ಎತ್ತ ಕಣ್ಣಾಯಿಸಿದರೂ ಮೋದಿ (MODI) ಫೋಟೋಗಳು ಕಾಣಸಿಗುತ್ತಿವೆ. ಜೊತೆಗೆ ಬಿಜೆಪಿ (BJP) ಮುಖಂಡರು, ಟಿಕೆಟ್ ಆಕಾಂಕ್ಷಿಗಳು ಸಹ ಫ್ಲೆಕ್ಸ್ ಹಾಕಿದ್ದಾರೆ.
ನಗರದಾದ್ಯಂತ ಬಿಜೆಪಿ (BJP)ಧ್ವಜಗಳನ್ನು ಕಟ್ಟಲಾಗಿದೆ. ಪಿ. ಬಿ. ರಸ್ತೆಯುದ್ದಕ್ಕೂ ಸುಮಾರು ಏಳೆಂಟು ಕಿಲೋಮೀಟರ್ ವರೆಗೆ ಈ ರೀತಿಯ ವಾತಾವರಣ ಕಂಡು ಬರುತ್ತಿದೆ. ಮೋದಿ (MODI) ಅವರ ಬೇರೆ ಬೇರೆ ಭಾವಚಿತ್ರಗಳನ್ನು ಅಳವಡಿಸಲಾಗಿದ್ದು, ಮೋದಿ ಮೇನಿಯಾ ಶುರುವಾಗಿದೆ.
ವೇದಿಕೆ ಪೂರ್ಣ:
ಜಿಎಂಐಟಿ ಸಮೀಪದಲ್ಲಿರುವ 400ಕ್ಕೂ ಹೆಚ್ಚು ಎಕರೆಯಲ್ಲಿ ದೊಡ್ಡ ಪೆಂಡಾಲ್ (PENDAL) ಹಾಕಲಾಗಿದೆ. ವೇದಿಕೆ (STAGE) ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಪ್ರಧಾನ ವೇದಿಕೆಯ ಎಡ ಮತ್ತು ಬಲಭಾಗದಲ್ಲಿಯೂ ವೇದಿಕೆ ನಿರ್ಮಾಣ ಕಾರ್ಯ ಮುಗಿದಿದೆ. ಮೋದಿ ಆಗಮನಕ್ಕೆ ಸರ್ವರೀತಿಯಲ್ಲಿ ಸನ್ನದ್ಧವಾಗಿರುವ ದಾವಣಗೆರೆಯಲ್ಲಿ ಬಿಜೆಪಿ (BJP)ಉತ್ಸಾಹ ಹೆಚ್ಚಾಗಿದೆ.
ಪ್ರಧಾನಿಯವರೇ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಸಚಿವರು, ಶಾಸಕರು ಇಲ್ಲಿಗೆ ದೌಡಾಯಿಸಿ ಬರುತ್ತಿದ್ದಾರೆ. ಮೋದಿ ಅವರು ಆಗಮಿಸುವ ವೇದಿಕೆಯಲ್ಲಿ 100 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ (BJP)
ರಾಜ್ಯಾಧ್ಯಕ್ಷ (PRESIDENT) ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಹುತೇಕ ನಾಯಕರು ಈ ವೇದಿಕೆಯಲ್ಲಿ ಆಸೀನರಾಗಲಿದ್ದಾರೆ. ಕೇಂದ್ರದ ಕೆಲ ಸಚಿವರು,
ಬಿಜೆಪಿ ಮುಖಂಡರು ಕೂಡ ವೇದಿಕೆಯಲ್ಲಿ ಕೂರುವ ಸಾಧ್ಯತೆ ಇದೆ.
ಖಾಕಿ ಭದ್ರಕೋಟೆ:
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಖಾಕಿ ಭದ್ರಕೋಟೆ ಕಣ್ಗಾವಲು ಇದೆ. ವೇದಿಕೆ ಮುಂಭಾಗ, ಪ್ರಮುಖ ರಸ್ತೆಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಕಾರ್ಯಕ್ರಮ ನಡೆಯುವ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋಣ್ (DRONE) ಬಳಕೆ ನಿಷೇಧಿಸಲಾಗಿದೆ. ಮೂವರು ಎಸ್ಪಿ (SP), ಇಪ್ಪತ್ತೈದಕ್ಕೂ ಹೆಚ್ಚು ಡಿವೈಎಸ್ಪಿಗಳು (DYSP) ಸೇರಿದಂತೆ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಜಿಎಂಐಟಿ ಹೆಲಿಪ್ಯಾಡ್ ಗೆ ಮೋದಿ:
ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು ಶಿವಮೊಗ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (SHIVAMOGGA AIR PORT) ಕ್ಕೆ ಬಂದು ಅಲ್ಲಿಂದ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ಗೆ ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಹೆಲಿಪ್ಯಾಡ್ ನಿಂದ ಕಾರಿನಲ್ಲಿ ಬರುವ ಮೋದಿ ಅವರು, ಪೆಂಡಾಲ್ ಹಾಕಿರುವ ಜಾಗದಿಂದ ವಿಶೇಷ ವಾಹನದಲ್ಲಿ ಜನರತ್ತ ಕೈ ಬೀಸುವ ಮೂಲಕ ವೇದಿಕೆಗೆ ಬರಲಿದ್ದಾರೆ. ಆದ್ರೆ, ಕಾರಿನ ಮೂಲಕ ತೆರೆದ ವಾಹನದಲ್ಲಿ ಬರುತ್ತಾರೋ ಅಥವಾ ಇಲ್ಲವೋ ಎಂಬುದು ನಾಳೆ ಬೆಳಿಗ್ಗೆ ಖಚಿತವಾಗಲಿದೆ. ಎನ್ ಎಸ್ ಜಿ (N S G) ಅನುಮತಿ ನೀಡಿದರೆ ಈ ಕಾರ್ಯಕ್ರಮ ಇರುತ್ತದೆ. ಇಲ್ಲದಿದ್ದರೆ ನೇರವಾಗಿ ವೇದಿಕೆಗೆ ಬರಲಿರುವ ಮೋದಿ ಅವರು, ಲಕ್ಷಾಂತರ ಮಂದಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕರ್ತರಲ್ಲಿ ರಣೋತ್ಸವ:
ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಚುನಾವಣಾ ರಣೋತ್ಸಾಹ ಕಂಡು ಬರುತ್ತಿದೆ. ದಾವಣಗೆರೆ ಜಿಲ್ಲೆಯಿಂದಲೇ 3 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಗದಗ, ತುಮಕೂರು ಸೇರಿದಂತೆ
ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಬರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬಾಣಸಿಗರ ಆಗಮನ:
ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರು ಉಪಾಹಾರ ಮತ್ತು ಮಧ್ಯಾಹ್ನದ ತಿಂಡಿ ತಿನಿಸು ಮಾಡಲು ಆಗಮಿಸಿದ್ದು, ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನಕ್ಕೆ ಗೋಧಿ ಪಾಯಸ, ಪಲಾವ್, ಮೊಸರನ್ನಕ್ಕೆ ತಯಾರಿ
ಮಾಡಿಕೊಳ್ಳಲಾಗುತ್ತಿದೆ. ಹತ್ತು ಲಕ್ಷ ಮಜ್ಜಿಗೆ ಪ್ಯಾಕೆಟ್ ಗಳು, ನೀರಿನ ಬಾಟೆಲ್ ಗಳನ್ನು ತಂದಿಡಲಾಗಿದೆ.