Home ದಾವಣಗೆರೆ ದಾವಣಗೆರೆ ದಕ್ಷಿಣದಲ್ಲಿ “ಸ್ವಾಮಿ ನಿಷ್ಠೆ”ಗಿಂತ “ಪಕ್ಷ ನಿಷ್ಠೆ” ಹೊಂದಿರುವ ಕಾರ್ಯಕರ್ತರಿಗೆ ಮನ್ನಣೆ ಸಿಗಬೇಕು: ‘ಕುಟುಂಬ ರಾಜಕಾರಣ’ ವಿರುದ್ಧ ಸಿಡಿತ!
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣದಲ್ಲಿ “ಸ್ವಾಮಿ ನಿಷ್ಠೆ”ಗಿಂತ “ಪಕ್ಷ ನಿಷ್ಠೆ” ಹೊಂದಿರುವ ಕಾರ್ಯಕರ್ತರಿಗೆ ಮನ್ನಣೆ ಸಿಗಬೇಕು: ‘ಕುಟುಂಬ ರಾಜಕಾರಣ’ ವಿರುದ್ಧ ಸಿಡಿತ!

Share
ದಾವಣಗೆರೆ
Share

ದಾವಣಗೆರೆ: ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಕಳೆ ಏರಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಚಾರವು ಈಗ ‘ನಿಷ್ಠಾವಂತ ಕಾರ್ಯಕರ್ತರು ವರ್ಸಸ್ ಕುಟುಂಬ ರಾಜಕಾರಣ’ ಎಂಬ ಸ್ವರೂಪ ಪಡೆದುಕೊಂಡಿದೆ.

ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ. ಚಮನ್ ಸಾಬ್ ಮತ್ತು ಕೆಲವು ಮಾಜಿ ಸದಸ್ಯರ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಸಿರಾಜ್, ಅಬ್ದುಲ್ ಘನಿ, ಶಾಜ್ ನವಾಜ್ ಖಾನ್, ರಿಯಾಜ್ ಸಾಬ್, ಇನಾಯತ್ ಅಲಿ ಖಾನ್ ಸೇರಿದಂತೆ ಹಲವು ಮುಖಂಡರು ಪಕ್ಷವು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇತಿಹಾಸದ ತಿರುಚುವಿಕೆ:

1978ರಿಂದ ಕಾಂಗ್ರೆಸ್ ಪಕ್ಷವೇ ಈ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತಿದೆ ಎಂಬ ವಾದವನ್ನು ಕಾರ್ಯಕರ್ತರು ಅಲ್ಲಗಳೆದಿದ್ದಾರೆ. 1978ರಲ್ಲಿ ಖಾಜಾ ಮೊಹಿದ್ದೀನ್, 1983ರಲ್ಲಿ ಎಚ್. ಇಕ್ಬಾಲ್ ಸಾಬ್ (ಪಕ್ಷೇತರರು), 1994ರಲ್ಲಿ ಕೆ.ಎಚ್. ಆತಾವುಲ್ಲಾ ಖಾನ್ (ಕೆಸಿಪಿ) ಮತ್ತು 1999ರಲ್ಲಿ ಅಮಾನುಲ್ಲಾ ಖಾನ್ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದನ್ನು ಉಲ್ಲೇಖಿಸಿದ್ದಾರೆ. ಹಾಗಾದರೆ ಇವರ ಸೋಲಿಗೆ ಕಾರಣ ಯಾರು ಎಂದು ಪ್ರಶ್ನಿಸಿದರು.

ಅಹಿಂದ ಮತ್ತು ಅಲ್ಪಸಂಖ್ಯಾತರಿಗೆ ಆದ್ಯತೆ:

ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಮತ್ತು ಅಹಿಂದ ವರ್ಗದವರಿಗೆ ಈ ಬಾರಿ ಅವಕಾಶ ನೀಡಬೇಕು. “ಸ್ವಾಮಿ ನಿಷ್ಠೆ”ಗಿಂತ “ಪಕ್ಷ ನಿಷ್ಠೆ” ಹೊಂದಿರುವ ಕಾರ್ಯಕರ್ತರಿಗೆ ಮನ್ನಣೆ ಸಿಗಬೇಕು ಎಂಬುದು ನಮ್ಮ ವಾದ ಎಂದು ತಿಳಿಸಿದರು.

ಕುಟುಂಬ ರಾಜಕಾರಣಕ್ಕೆ ವಿರೋಧ:

ಶಾಮನೂರು ಕುಟುಂಬದ ಸದಸ್ಯರಿಗೆ ಮತ್ತೆ ಟಿಕೆಟ್ ನೀಡುವುದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡುವ ಅಪಮಾನ ಎಂದು ಅಭಿಪ್ರಾಯಪಟ್ಟರು.

“ಟಿಕೆಟ್ ಕೇಳುವುದು ನಮ್ಮ ಹಕ್ಕು:

ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ. ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದರೂ, ಸ್ಥಳೀಯ ಜನರ ಧ್ವನಿಯನ್ನು

Share

Leave a comment

Leave a Reply

Your email address will not be published. Required fields are marked *