Home ಉದ್ಯೋಗ ವಾರ್ತೆ ಆಧಾರ್ ಸೇವಾ ಕೇಂದ್ರ ನೇಮಕಾತಿ 2026: 253 ಸೂಪರ್ ವೈಸರ್ ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಆಧಾರ್ ಸೇವಾ ಕೇಂದ್ರ ನೇಮಕಾತಿ 2026: 253 ಸೂಪರ್ ವೈಸರ್ ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share
ಆಧಾರ್
Share

ಬೆಂಗಳೂರು: ಆಧಾರ್ ಸೇವಾ ಕೇಂದ್ರಗಳಲ್ಲಿ (CSC e-Governance Services India Ltd) ಖಾಲಿ ಇರುವ ಒಟ್ಟು 253 ಆಧಾರ್ ಸೂಪರ್ ವೈಸರ್ ಮತ್ತು ಆಪರೇಟರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಈ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಪ್ರಮುಖ ವಿವರಗಳು:

  • ಸಂಸ್ಥೆಯ ಹೆಸರು: ಆಧಾರ್ ಸೇವಾ ಕೇಂದ್ರ (CSC SPV)

  • ಹುದ್ದೆಯ ಹೆಸರು: ಆಧಾರ್ ಸೂಪರ್ ವೈಸರ್ / ಆಪರೇಟರ್

  • ಒಟ್ಟು ಹುದ್ದೆಗಳು: 253

  • ಕರ್ನಾಟಕದಲ್ಲಿರುವ ಹುದ್ದೆಗಳು: ಅಂದಾಜು 34

  • ಉದ್ಯೋಗದ ಅವಧಿ: ಗುತ್ತಿಗೆ ಆಧಾರಿತ (Contractual – 1 Year)

ಅರ್ಹತೆ ಮತ್ತು ಮಾನದಂಡಗಳು:

  1. ವಿದ್ಯಾರ್ಹತೆ: ಅಭ್ಯರ್ಥಿಗಳು 12ನೇ ತರಗತಿ (ಪಿಯುಸಿ), ಐಟಿಐ (ITI), ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

  2. ಕಡ್ಡಾಯ ಪ್ರಮಾಣಪತ್ರ: ಅಭ್ಯರ್ಥಿಯು UIDAI ನಿಂದ ಮಾನ್ಯತೆ ಪಡೆದ NSEIT ನಡೆಸುವ “Aadhaar Operator/Supervisor Certificate” ಹೊಂದಿರಲೇಬೇಕು.

  3. ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು (01-01-2026 ಕ್ಕೆ ಅನ್ವಯಿಸುವಂತೆ).

  4. ಇತರೆ: ಕಂಪ್ಯೂಟರ್ ನಿರ್ವಹಣೆಯ ಮೂಲಭೂತ ಜ್ಞಾನ ಮತ್ತು ಸ್ಥಳೀಯ ಭಾಷೆಯ ಮೇಲೆ ಹಿಡಿತವಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ career.csccloud.in ಗೆ ಭೇಟಿ ನೀಡಬೇಕು.

  • ಅರ್ಜಿಯೊಂದಿಗೆ ಶೈಕ್ಷಣಿಕ ದಾಖಲೆಗಳು ಮತ್ತು ಆಧಾರ್ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು.

  • ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

  • ಕೊನೆಯ ದಿನಾಂಕ: 10 ಮಾರ್ಚ್ 2026.

Share

Leave a comment

Leave a Reply

Your email address will not be published. Required fields are marked *