ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶುರುವಾಗ್ತಿದೆ ಕಾಂಟ್ರಾಕ್ಟ್ ಮದುವೆಯನ್ನೊಳಗೊಂಡ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ…!

On: September 26, 2024 12:10 PM
Follow Us:
---Advertisement---

ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಆದರೆ ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು ವೀಕ್ಷಕರಿಗೆ ಹೇಳಲು ಸಜ್ಜಾಗಿದೆ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ.

ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ ಮಾರುವವಳಾಗಿದ್ದು, ಪೊಲೀಸ್ ಕಾನ್ಸ್ಟೇಬಲ್ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ.

ಇನ್ನು ಈ ಕಥೆಯ ನಾಯಕ ಆದಿತ್ಯ, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮುಂದೆ, ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಆದಿ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್ ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.  ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ.

ಶುರುವಾಗ್ತಿದೆ ಹೊಚ್ಚ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Join WhatsApp

Join Now

Join Telegram

Join Now

Leave a Comment