ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Upendra: ರಿಯಲ್ ಸ್ಟಾರ್ ಉಪೇಂದ್ರ ಗಾದೆ ಮಾತು ಆಡಿ ವಿವಾದ ಮೇಲೆಳೆದುಕೊಂಡುಬಿಟ್ಟರಾ…? ಅಟ್ರಾಸಿಟಿ ಕೇಸ್ ದಾಖಲು: ದಲಿತ ಸಂಘಟನೆಗಳ ರೋಷಾವೇಶ

On: August 13, 2023 3:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-08-2023

ಬೆಂಗಳೂರು: ರಿಯಲ್ ಸ್ಟಾರ್, ನಟ, ನಿರ್ದೇಶಕ ಉಪೇಂದ್ರ (Upendra) ಕೆಲವೊಮ್ಮೆ ಏನು ಮಾತನಾಡಿದರೂ ವಿವಾದ ಆಗಿಬಿಡುತ್ತೆ. ಉಪೇಂದ್ರ ಅವರು ನಿರ್ದೇಶನಕ್ಕೆ ಕೈ ಹಾಕಿಬಿಟ್ಟರೆ ಈ ಚಿತ್ರದಲ್ಲಿನ ಕೆಲ ಅಂಶಗಳು ವಿವಾದ ಆಗುವುದು ಕಾಮನ್. ಆದ್ರೆ, ಈಗ ಉಪೇಂದ್ರ ವಿರುದ್ದ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಇನ್ನು ಅಟ್ರಾಸಿಟಿ ಕೇಸ್ ಕಾನೂನು ಪ್ರಕಾರ ದಾಖಲಾಗಿರುವುದು ಗಮನಾರ್ಹ.

ಕೆಳವರ್ಗದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ (Upendra) ವಿಡಿಯೋ ಒಂದರಲ್ಲಿ ಮಾತನಾಡುತ್ತಾ ನಿಂದಿಸುವಂಥ ಅರ್ಥ ಬರುವ ಗಾದೆಯೊಂದನ್ನು ಬಳಸಿದ್ದರು. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ ನಂತರ ಅದನ್ನು ಡಿಲೀಟ್‌ ಮಾಡಿ ಕ್ಷಮೆ ಕೇಳಿದ್ದರು.

ಈ ಸುದ್ದಿಯನ್ನೂ ಓದಿ: 

Sulekere Big Story: ಕುಡಿಯಲು ಯೋಗ್ಯವಲ್ಲ ಸೂಳೆಕೆರೆ ನೀರು: ಜೀವಜಲಚರ, ಕೃಷಿಗೆ ಕಂಟಕನಾ? ಆತಂಕದಲ್ಲಿ ಮತ್ಸ್ಯ ಪ್ರಿಯರು, ರೈತಾಪಿ ವರ್ಗ…!

ಆದ್ರೂ ಇಲ್ಲಿಗೆ ಪ್ರಕರಣ ಸುಖಾಂತ್ಯವಾಗಿಲ್ಲ. ವಿವಾದದ ಭುಗಿಲೆದ್ದಿದೆ. ಕೆಲವರಂತೂ ಉಪೇಂದ್ರ (Upendra) ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕ್ಷಮೆ ಕೇಳಿದರೆ ಆಗದು, ಕಠಿಣ ಕ್ರಮ ಆಗಲೇಬೇಕು ಎಂದು ಪಟ್ಟುಹಿಡಿದಿದ್ದಾರೆ.

ಉಪೇಂದ್ರ (Upendra) ವಿರುದ್ಧ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್‌ ಎಂಬುವವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಪೇಂದ್ರ ಅವರ ವಿರುದ್ದ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಟ್ರಾಸಿಟಿ ಕೇಸ್ ಆಗಿದೆ. ಉಪೇಂದ್ರ (Upendra)ರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.

ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಬ್ರಾಹ್ಮಣ ಅಧಿಕಾರಿಯ ಮೂಲಕ ದೂರು ಕೊಡಿಸುವ ಮೂಲಕ ಪ್ರಕರವನ್ನು ಹಳ್ಳ ಹಿಡಿಸಲು ಪ್ರಯತ್ನಿಸಲಾಗುತ್ತಿದೆ, ಈ ಹಿಂದೆ ಜೈನ್‌ ಕಾಲೇಜ್‌ ಪ್ರಕರಣದಲ್ಲೂ ಹೀಗೇ ಮಾಡಲಾಗಿತ್ತು ಎಂದು ಹೋರಾಟಗಾರರು ಆರೋಪಿಸಿದ್ದಾರೆ. ದಲಿತ ಹೋರಾಟಗಾರರಾದ ಬಿ ಆರ್‌ ಭಾಸ್ಕರ್‌ ಪ್ರಸಾದ್‌, ಹ ರಾ ಮಹೇಶ್‌ ಮುಂತಾದವರು ಈ ಕೇಸ್ ಸಂಬಂಧ ಹೋರಾಟ ರೂಪಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಆನೇಕಲ್‌ ತಾಲ್ಲೂಕಿನಲ್ಲಿಯೂ ಈ ಸಂಬಂಧ ಡಿ ಎಸ್ ಎಸ್ ಕಂಪ್ಲೆಂಟ್ ಕೊಟ್ಟಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment