Home ದಾವಣಗೆರೆ ಆದಾಯ ತೆರಿಗೆ ನಿಯಮ 2026: ಸಂಬಳ ಪಡೆಯುವವರಿಗೆ ಭರ್ಜರಿ ಸಿಹಿ ಸುದ್ದಿ; ಶಿಕ್ಷಣ ಮತ್ತು ವಸತಿ ಭತ್ಯೆಯಲ್ಲಿ ಭಾರಿ ಏರಿಕೆ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಆದಾಯ ತೆರಿಗೆ ನಿಯಮ 2026: ಸಂಬಳ ಪಡೆಯುವವರಿಗೆ ಭರ್ಜರಿ ಸಿಹಿ ಸುದ್ದಿ; ಶಿಕ್ಷಣ ಮತ್ತು ವಸತಿ ಭತ್ಯೆಯಲ್ಲಿ ಭಾರಿ ಏರಿಕೆ!

Share
ಆದಾಯ ತೆರಿಗೆ
Share

ಬೆಂಗಳೂರು: ದೇಶದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ‘ಆದಾಯ ತೆರಿಗೆ ಕಾಯ್ದೆ 2025’ರ ಅನ್ವಯ, ಇದೀಗ ‘ಕರಡು ಆದಾಯ ತೆರಿಗೆ ನಿಯಮಗಳು 2026’ (Draft Income Tax Rules 2026) ಅನ್ನು ಬಿಡುಗಡೆ ಮಾಡಲಾಗಿದ್ದು, ಇದು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ.

ಈ ಹೊಸ ನಿಯಮಗಳು ಮಧ್ಯಮ ವರ್ಗದ ಉದ್ಯೋಗಿಗಳಿಗೆ ದೊಡ್ಡ ಮಟ್ಟದ ತೆರಿಗೆ ವಿನಾಯಿತಿ ನೀಡುವ ಮುನ್ಸೂಚನೆ ನೀಡಿವೆ.

ಪ್ರಮುಖ ಬದಲಾವಣೆಗಳು:

ಮಕ್ಕಳ ಶಿಕ್ಷಣ ಭತ್ಯೆ (Children Education Allowance):

ಈ ಹಿಂದೆ ಪ್ರತಿ ಮಗುವಿಗೆ ತಿಂಗಳಿಗೆ ಕೇವಲ ₹100 ಇದ್ದ ತೆರಿಗೆ ವಿನಾಯಿತಿ ಮಿತಿಯನ್ನು ಈಗ ₹3,000 ಕ್ಕೆ ಏರಿಸಲು ಪ್ರಸ್ತಾಪಿಸಲಾಗಿದೆ.

ಹಾಸ್ಟೆಲ್ ಭತ್ಯೆ (Hostel Allowance):

ಮಕ್ಕಳ ಹಾಸ್ಟೆಲ್ ವೆಚ್ಚದ ವಿನಾಯಿತಿ ಮಿತಿಯನ್ನು ತಿಂಗಳಿಗೆ ₹300 ರಿಂದ ₹9,000 ಕ್ಕೆ ಹೆಚ್ಚಿಸಲಾಗಿದೆ.

HRA ವಿನಾಯಿತಿ:

ಇಲ್ಲಿಯವರೆಗೆ ದೆಹಲಿ, ಮುಂಬೈ ಸೇರಿದಂತೆ 4 ಮೆಟ್ರೋ ನಗರಗಳಿಗೆ ಮಾತ್ರ ಇದ್ದ ಶೇ. 50ರಷ್ಟು HRA ವಿನಾಯಿತಿಯನ್ನು ಈಗ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ ನಗರಗಳಿಗೂ ವಿಸ್ತರಿಸಲಾಗಿದೆ.

PAN ನಿಯಮಗಳಲ್ಲಿ ಸಡಿಲಿಕೆ:

ಬ್ಯಾಂಕ್‌ಗಳಲ್ಲಿ ದಿನಕ್ಕೆ ₹50,000 ನಗದು ಜಮಾ ಮಾಡಲು ಪ್ಯಾನ್ ಕಡ್ಡಾಯವಾಗಿತ್ತು. ಆದರೆ ಹೊಸ ನಿಯಮದಂತೆ ವರ್ಷಕ್ಕೆ ಒಟ್ಟು ₹10 ಲಕ್ಷ ಮೀರಿದರೆ ಮಾತ್ರ ಪ್ಯಾನ್ ಕಾರ್ಡ್ ಕಡ್ಡಾಯವಾಗಲಿದೆ.

ಉಡುಗೊರೆ ಮತ್ತು ಊಟದ ಭತ್ಯೆ: ಉದ್ಯೋಗದಾತರಿಂದ ಪಡೆಯುವ ತೆರಿಗೆ ಮುಕ್ತ ಉಡುಗೊರೆ ಮಿತಿಯನ್ನು ₹5,000 ದಿಂದ ₹15,000 ಕ್ಕೆ ಮತ್ತು ಪ್ರತಿ ಊಟದ ಭತ್ಯೆಯನ್ನು ₹50 ರಿಂದ ₹200 ಕ್ಕೆ ಏರಿಸಲಾಗಿದೆ.

ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕರು ಫೆಬ್ರವರಿ 22, 2026 ರೊಳಗೆ ತಮ್ಮ ಅಭಿಪ್ರಾಯ ಅಥವಾ ಸಲಹೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles