SUDDIKSHANA KANNADA NEWS/ DAVANAGERE/ DATE:12-08-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ಮುಂದುವರಿಸಿದ್ದಾರೆ. ಮಣಿಪುರ ಹಿಂಸಾಚಾರ ಘಟನೆ ಸಂಬಂಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದಲ್ಲಿ ಹಿಂಸಾಚಾರ ತಾರಕಕ್ಕೇರಿದೆ. ಅದನ್ನು ನಿಯಂತ್ರಿಸುವ ಬದಲು ಹಾಸ್ಯ ಚಟಾಕಿ ಹಾರಿಸುತ್ತಾ ವಿರೋಧಪಕ್ಷಗಳನ್ನು ವ್ಯಂಗ್ಯವಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಅವಿಶ್ವಾಸ ನಿಳುವಳಿ ಚರ್ಚೆಯಲ್ಲಿ ಪ್ರಧಾನಿ ಮೋದಿ ಭಾಷಣದ ಕುರಿತು ಬೇಸರ ವ್ಯಕ್ತಪಡಿಸಿದ್ದು ಅತ್ಯಾಚಾರ, ಹಿಂಸಾಚಾರ ಹತ್ಯೆಗಳಿಂದ ಮಣಿಪುರ ತತ್ತರಿಸುತ್ತಿದ್ದರೂ ಪ್ರಧಾನಿ ಮೋದಿ ಮಾತ್ರ ಸಂಸತ್ ನಲ್ಲಿ ನಗುತ್ತಾ ಜೋಕ್ ಗಳನ್ನು ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ:
Komal Story: ನಟ ಕೋಮಲ್ ಕೇತುದೆಸೆ ಮತ್ತೆ ಶುರುವಾಗಿದ್ದು ಯಾವಾಗಿನಿಂದ…? ಜೈಲರ್ ಬಿಡುಗಡೆಯಿಂದ ನಮೋ ಭೂತಾತ್ಮ-2ಗೆ ಆಗಲ್ವಂತೆ ತೊಂದರೆ… ಹೇಗೆ…?
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಪ್ರಧಾನಿ ಬಳಿ ಸಾಕಷ್ಟು ಅವಕಾಶಗಳಿದ್ದರೂ ಏಕೆ ಬಳಸಿಲ್ಲ. ಸೇನೆಯನ್ನು ಕಳಿಸಿ ಎರಡರಿಂದ ಮೂರು ದಿನಗಳಲ್ಲಿ ಶಾಂತಿ ಸ್ಥಾಪಿಸಬಹುದು. ಅದನ್ನೇಕೆ ಮಾಡುತ್ತಿಲ್ಲ? ಹಾಗಾದರೆ ಅವರಿಗೆ ಮಣಿಪುರ ಹಿಂಸಾಚಾರದಿಂದ ನಲುಗುತ್ತಿರಬೇಕು. ಅಲ್ಲಿನ ಜನರು ಸಂಕಷ್ಟದಲ್ಲಿರಬೇಕಾ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಎರಡು ಗಂಟೆ 13 ನಿಮಿಷಗಳ ಕಾಲ ಭಾಷಣ ಮಾಡಿದ್ದು ಆದರೆ ಇದರಲ್ಲಿ ಮಣಿಪುರದ ಬಗ್ಗೆ ಮಾತನಾಡಿದ್ದು ಕೇವಲ ಎರಡು ನಿಮಿಷ ಮಾತ್ರ. ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ
ಹಿಂಸಾಚಾರದ ಬಗ್ಗೆ ಪ್ರಧಾನಿ ಮರೆತಂತಿದೆ. ಈ ಹಿಂದೆ ಎಷ್ಟೋ ಪ್ರಧಾನಿಗಳನ್ನು ನಾನು ನೋಡಿದ್ದೇನೆ, ಆದರೆ ಈ ಮಟ್ಟಕ್ಕೆ ಇಳಿದು ಮಾತಾಡಿದ ಪ್ರಧಾನಿಯನ್ನು ನೋಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಹ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಮಣಿಪುರದಲ್ಲಿ ಶಾಂತಿ ಕಾಪಾಡಲು ಬಿಜೆಪಿ ಸರ್ಕಾರಕ್ಕೆ ಸಾದ್ಯವಾಗಿಲ್ಲ. ಕೇಂದ್ರ ಸರ್ಕಾರವೂ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.