ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹಿಜ್ಬುಲ್ಲಾ ಮೇಲೆ ಮತ್ತೊಂದು ಸ್ಟ್ರೈಕ್‌ – ವಾಕಿಟಾಕಿಗಳ ಸ್ಫೋಟ:14 ಸಾವು, 300 ಕ್ಕೂ ಹೆಚ್ಚು ಮಂದಿಗೆ ಗಾಯ

On: September 19, 2024 10:09 AM
Follow Us:
---Advertisement---

ಬೈರುತ್‌:ಲೆಬನಾನ್​ನಲ್ಲಿ ಹಿಜ್ಬುಲ್ಲಾಗಳು ಬಳಸುತ್ತಿದ್ದ ಪೇಜರ್​ಗಳ ಸ್ಫೋಟ ಬೆನ್ನಲ್ಲೇ ಅವರ ವಾಕಿ-ಟಾಕಿಗಳು ಕೂಡ ಸ್ಫೋಟ ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟಗಳು ದಕ್ಷಿಣ ಲೆಬನಾನ್ ಮತ್ತು ಬೈರುತ್‌ನ ಉಪನಗರಗಳಲ್ಲಿ ಸಂಭವಿಸಿವೆ.

ಮಧ್ಯಪ್ರಾಚ್ಯ ದೇಶದಾದ್ಯಂತ ಪೇಜರ್‌ಗಳು ಸ್ಫೋಟಗೊಂಡು 12 ಜನರು ಮೃತಪಟ್ಟು, ಸುಮಾರು 3,000 ಜನರು ಗಾಯಗೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಎಷ್ಟು ವಾಕಿ-ಟಾಕಿಗಳುಸ್ಫೋಟಗೊಂಡವು ಎಂಬುದು ತಿಳಿದು ಬಂದಿಲ್ಲ. ಆದರೆ ಎಣಿಕೆಯು ನೂರಾರು ಎಂದು ಅಂದಾಜಿಸಲಾಗಿದೆ. ಪೂರ್ವ ಲೆಬನಾನ್‌ನ ವಿವಿಧ ಸ್ಥಳಗಳಲ್ಲಿ ಸ್ಥಿರ ದೂರವಾಣಿಗಳು ಸಹ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.

ಕೈಯಲ್ಲಿ ಹಿಡಿದಿರುವ ವೈರ್‌ಲೆಸ್ ರೇಡಿಯೊ ಸಾಧನಗಳು ಅಥವಾ ವಾಕಿ-ಟಾಕಿಗಳನ್ನು ಸುಮಾರು ಐದು ತಿಂಗಳ ಹಿಂದೆ ಖರೀದಿಸಲಾಗಿದೆ. ಅದೇ ಸಮಯದಲ್ಲಿ ಪೇಜರ್‌ಗಳನ್ನು ಖರೀದಿಸಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿನ್ನೆಯ ಪೇಜರ್ ಸ್ಫೋಟಗಳಲ್ಲಿ ಸಾವನ್ನಪ್ಪಿದ ಸದಸ್ಯರಿಗೆ ಹಿಜ್ಬುಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆ ಸ್ಥಳದಲ್ಲೂ ಒಂದು ಸ್ಫೋಟ ಸಂಭವಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

Join WhatsApp

Join Now

Join Telegram

Join Now

Leave a Comment