ದಾವಣಗೆರೆ: ವಿವಿಯ ವಿ.ವಿ. ಶಿವಗಂಗೋತ್ರಿ ಆವರಣದಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಬೆಡಗಿಯರು ಪದಕಗಳನ್ನು ಪಡೆದು ಖುಷಿಪಟ್ಟರು. 36 ಪದಕಗಳನ್ನು ಗೆದ್ದ ಹುಡುಗಿಯರೇ ಮೇಲುಗೈ ಸಾಧಿಸಿದ್ದು ವಿಶೇಷ.
45 ವಿದ್ಯಾರ್ಥಿಗಳು 87 ಚಿನ್ನದ ಪದಕಗಳನ್ನು ಪಡೆದರೆ, ಎನ್. ಬಿ. ನಯನ 7 ಪದಕಗಳ ಪಡೆದು ಬಂಗಾರದ ಹುಡುಗಿ ಎಂಬ ಕೀರ್ತಿಗೆ ಭಾಜನರಾದರು.
ಹುಡುಗಿಯರೇ ಮೇಲುಗೈ:
ಪ್ರಸಕ್ತ ಘಟಿಕೋತ್ವದಲ್ಲಿ ಒಟ್ಟು 87 ಸ್ವರ್ಣ ಪದಕಗಳು 45 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಚಿನ್ನ ಗಳಿಕೆಯಲ್ಲಿಯೂ ಮಹಿಳೆಯರೇ ಮುಂಚೂಣಿಯಲ್ಲಿದ್ದು, 35 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 10 ಪದಕಗಳು ಪುರುಷ ವಿದ್ಯಾರ್ಥಿಗಳ ಪಾಲಾಗಿವೆ. ಸ್ನಾತಕ ಪದವಿಯಲ್ಲಿ 11 ಮಹಿಳಾ ಹಾಗೂ 2 ಪುರುಷ ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಸ್ನಾತಕೋತ್ತರ ಪದವಿಯ 32 ವಿದ್ಯಾರ್ಥಿಗಳಲ್ಲಿ 24 ಮಹಿಳಾ ಹಾಗೂ 8 ಪುರುಷ ವಿದ್ಯಾರ್ಥಿಗಳು 65 ಸ್ವರ್ಣ ಪದಕಗಳನ್ನು ಸ್ವೀಕರಿಸಿದರು.
ನಾಲ್ಕು, ಮೂರು ಚಿನ್ನದ ಪದಕ ಪಡೆದವರು:
ಸ್ನಾತಕೋತ್ತರ ಪದವಿಯ ಎಂಬಿಎ ವಿಭಾಗದ ದೀಪಾ ಆರ್. ನಾಲ್ಕು ಸ್ವರ್ಣ ಪದಕ, ಗಣಿತಶಾಸ್ತ್ರ ವಿಭಾಗದ ಕವನ ಪಿ.ಎಂ, ಜೀವರಸಾಯನಶಾಸ್ತ್ರ ವಿಭಾಗದ ರುಚಿತಾ ಡಿ, ಭೌತವಿಜ್ಞಾನ ವಿಭಾಗ ಪುಟ್ಟರಾಜ ಎಂ.ಆರ್, ಪ್ರಾಣಿಶಾಸ್ತ್ರ ವಿಭಾಗ ಪುಷ್ಪಾ ಜೆ, ಇಂಗ್ಲಿಷ್ ವಿಭಾಗದ ವಿಜಯಲಕ್ಷ್ಮೀ ಬಿ.ಎಂ, ಮತ್ತು ಕನ್ನಡ ವಿಭಾಗದ ಅನುಷಾ ಎಂ.ಎಂ. ಅವರು ತಲಾ ಮೂರು ಚಿನ್ನಗಳೊಂದಿಗೆ ಹೆಚ್ಚು ಚಿನ್ನದ ಪದಕ ಪಡೆದವರ ಪಟ್ಟಿಯಲ್ಲಿ ಸ್ಥಾನ ಪಡೆದರು.
ಅರ್ಥಶಾಸ್ತ್ರ ವಿಭಾಗದಲ್ಲಿ ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜಿನ ಕೋನೇನ್ ತಬಸುಮ್, ಪತ್ರಿಕೋದ್ಯಮ ವಿಭಾಗದ ಚಂದನ ವಿ.ಎಂ, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಪ್ರದೀಪಕುಮಾರ ಬಿ, ಸಸ್ಯಶಾಸ್ತ್ರ ವಿಭಾಗದ ಪ್ರಿಯಾ ಎಂ, ಎಂಪಿಇಡಿಯಲ್ಲಿ ಗಗನ ಎ.ಎಂ, ರಸಾಯನಶಾಸ್ತ್ರ ವಿಭಾಗದಲ್ಲಿ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚೌಡೇಶ್ವರಿ ಟಿ, ಗಣಕ ವಿಜ್ಞಾನ ವಿಭಾಗದ ಸುಮತಿ ಎಚ್.ಪಿ, ಆಹಾರ ತಂತ್ರಜ್ಞಾನ ವಿಭಾಗದ ನಿತೀಶ್ ಕೆ.ಗೌಡ, ಸೂಕ್ಷ್ಮವಿಭಾಗದ ಗಾಯತ್ರಿ ದೀಪಿಕಾ ಬಿ ಅವರು ತಲಾ ಎರಡು ಬಂಗಾರದ ಪದಕಗಳನ್ನು ಸ್ವೀಕರಿಸಿದರು.
ಒಂದು ಪದಕ ಪಡೆದವರು:
ಅರ್ಥಶಾಸ್ತ್ರ ವಿಭಾಗದಲ್ಲಿ ಶಿವಗಂಗೋತ್ರಿ ಆವರಣದ ಕಾವ್ಯಾ ಆರ್, ಕನ್ನಡ ವಿಭಾಗದಲ್ಲಿ ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಬೋರಯ್ಯ ಸಿ.ಸಿ, ರಾಜ್ಯಶಾಸ್ತ್ರ ವಿಭಾಗದ ಸಿಂಧು ಎಚ್ ಮತ್ತು ಅಮೂಲ್ಯ ಜಿ.ಎಂ., ಸಮಾಜಶಾಸ್ತ್ರ ವಿಭಾಗದಲ್ಲಿ ಶುಭಾ ಪಿ.ಒ, ಉರ್ದು ವಿಭಾಗದಲ್ಲಿ ಶುಬ್ನಮ್ ಬಳಿಗಾರ, ಎಂಎಸ್‌ಡಬ್ಲ್ಯೂ ವಿಭಾಗದಲ್ಲಿ ಚಿಕ್ಕಮ್ಮ ಎಂ., ಎಂ.ಕಾಂನಲ್ಲಿ ತೇಜರಾಜ ಎಸ್.ಎ, ಎಂಬಿಎ ವಿಭಾಗದಲ್ಲಿ ಪಾವನಿ ಎಸ್, ಪಲ್ಲವಿ ಕೆ.ಎಸ್, ಎಂಇಡಿಯಲ್ಲಿ ಸಮ್ರಿನ್ ಎಂ., ಜೀವರಸಾಯನಶಾಸ್ತ್ರ ವಿಭಾಗದ ಜೈವಿಕ ತಂತ್ರಜ್ಞಾನ ವಿಭಾಗದ ಧನರಾಜ್ ಆರ್.ಕೆ, ಅಪರಾಧಶಾಸ್ತ್ರ ವಿಭಾಗದ ಐಶ್ವರ್ಯ ಒ.ಎಸ್, ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಬಾಳಾಸಾಹೇಬ ಸುರಪುರ ಅವರು ಒಂದೊಂದು ಚಿನ್ನದ ಪದಕ ಪಡೆದರು.
ಸ್ನಾತಕ ಕಲಾ ಪದವಿ(ಬಿಎ)ಯಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ ಡಿ.ಆರ್., ವಾಣಿಜ್ಯ (ಬಿ.ಕಾಂ) ಪದವಿಯಲ್ಲಿ ದಾವಣಗೆರೆ ಎಜಿಬಿ ಪ್ರಥಮ ದರ್ಜೆ ಕಾಲೇಜಿನ ಕೀರ್ತನಾ ಎಸ್ ಮತ್ತು ಶಿಕ್ಷಣ (ಬಿಇಡಿ) ಪದವಿಯಲ್ಲಿ ದಾವಣಗೆರೆಯ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಕಾಲೇಜಿನ ಹಜ್ಮಾ ಜೆ. ಅವರು ತಲಾ ಮೂರು ಚಿನ್ನದ ಪದಕಗಳನ್ನು ಸ್ವೀಕರಿಸಿದರು.
ದೃಶ್ಯಕಲಾ ಮಹಾವಿದ್ಯಾಲಯದ ಐಶ್ವರ್ಯ ಎಲಿಗಾರ, ಬಿಸಿಎ ಪದವಿಯಲ್ಲಿ ಇಂಟರ್‌ಫೇಸ್ ಕಂಪ್ಯೂಟರ್ ಅಪ್ಲಿಕೇಶನ್ ಕಾಲೇಜಿನ ಪಿ.ವೆಂಕಟದುರ್ಗಾ ಪ್ರಸಾದ, ಬಿಎಸ್‌ಸಿಯಲ್ಲಿ ಎ.ವಿ.ಕಮಲಮ್ಮ ಕಾಲೇಜಿನ ಹಬೀಬಾ ಮಿಸ್ಬಾ ಅವರು ತಲಾ ಎರಡು ಚಿನ್ನ ಪದಕ ಸ್ವೀಕರಿಸಿದರು. ಬಿಪಿಇಡಿಯಲ್ಲಿ ಮಲ್ಲಾಡಿಹಳ್ಳಿಯ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜಿನ ನಾಗವೇಣಿ ಬಿ., ಬಿಬಿಎನಲ್ಲಿ ಆರ್‌ಜಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ದಿಶಾ ಜೈನ್, ಗಣಿತಶಾಸ್ತ್ರದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಡಿಆರ್‌ಎಂ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ದೃಶ್ಯ ಕಲಾ ಕಾಲೇಜಿನ ನವ್ಯ ಎ.ಆರ್. ತಲಾ ಒಂದು ಚಿನ್ನದ ಪದಕ ಸ್ವೀಕರಿಸಿ ಸಂಭ್ರಮ ಪಟ್ಟರು.





Leave a comment