Home ದಾವಣಗೆರೆ ಅಡಿಕೆ ಸಿಪ್ಪೆ ಇನ್ನು ‘ಕಸವಲ್ಲ’ ರಸವತ್ತಾದ ಗೊಬ್ಬರ! ತರಳಬಾಳು ಕೃಷಿ ವಿಜ್ಞಾನಿಗಳ ವಿನೂತನ ಪ್ರಯೋಗಕ್ಕೆ ರೈತರ ಫಿದಾ
ದಾವಣಗೆರೆಬೆಂಗಳೂರುವಾಣಿಜ್ಯ

ಅಡಿಕೆ ಸಿಪ್ಪೆ ಇನ್ನು ‘ಕಸವಲ್ಲ’ ರಸವತ್ತಾದ ಗೊಬ್ಬರ! ತರಳಬಾಳು ಕೃಷಿ ವಿಜ್ಞಾನಿಗಳ ವಿನೂತನ ಪ್ರಯೋಗಕ್ಕೆ ರೈತರ ಫಿದಾ

Share
ಅಡಿಕೆ
Share

ಭದ್ರಾವತಿ: ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವವು ಕೇವಲ ಸಾಂಸ್ಕೃತಿಕ ಹಬ್ಬವಾಗಿಯಷ್ಟೇ ಉಳಿಯದೆ, ರೈತರ ಬದುಕಿಗೆ ಆಸರೆಯಾಗುವ ‘ಜ್ಞಾನ ದಾಸೋಹ’ವಾಗಿ ಮಾರ್ಪಟ್ಟಿರುವುದು ಹೆಮ್ಮೆಯ ವಿಷಯ.ಅಡಿಕೆ ಸಿಪ್ಪೆ ಇನ್ನು ‘ಕಸವಲ್ಲ’ ರಸವತ್ತಾದ ಗೊಬ್ಬರ. ತರಳಬಾಳು ಕೃಷಿ ವಿಜ್ಞಾನಿಗಳ ವಿನೂತನ ಪ್ರಯೋಗಕ್ಕೆ ರೈತರ ಫಿದಾ ಆಗಿದ್ದಾರೆ.

ತರಳಬಾಳು ಹುಣ್ಣಿಮೆ ಮಹೋತ್ಸವ ಎಂದರೆ ಹತ್ತು ಹಲವು ವೈವಿಧ್ಯಗಳ ಮಹಾ ಸಂಗಮ. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರೈತ ಹಿತ ಕಾಯುವ ಯೋಜನೆಗಳ ಅನುಷ್ಠಾನ, ವೀರ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು, ಸಮಕಾಲೀನ ಚಿಂತನೆ ಹೀಗೆ 9 ದಿನಗಳ ಜ್ಞಾನ ದಾಸೋಹದ ದಿವ್ಯ ದೀವಿಗೆ.

ತರಳಬಾಳು ಹುಣ್ಣಿಮೆಯು ಅನೇಕ ದಶಕಗಳ ಕಾಲದಿಂದ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವುದು ಭಾವೈಕ್ಯತೆ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆ. 9 ದಿನಗಳ ಹುಣ್ಣಿಮೆಯ ಸಂದರ್ಭದಲ್ಲಿ ಮುಖ್ಯ ವೇದಿಕೆಯಲ್ಲಿ ಚರ್ಚೆಗೆ ಒಳಪಡುತ್ತಿದ್ದ ವಿಷಯಗಳಾದ ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಮತ್ತು ಕೌಶಲ್ಯ ಅಭಿವೃದ್ಧಿ, ಇವುಗಳ ಜೊತೆಗೆ ಆಡಳಿತದ ಭಾಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವಿಷಯಗಳು ಕೂಡ ಚರ್ಚೆಗೆ ಒಳಪಡುತ್ತಿದ್ದವು.

ಈ ವಿಷಯಗಳು ಬರೀ ಭಾಷಣ ರೂಪದಲ್ಲಿ ಇರದೆ, ಅವುಗಳ ವಸ್ತುಸ್ಥಿತಿ ಪ್ರದರ್ಶನ ರೂಪದಲ್ಲಿ ಇರಬೇಕು ಎಂದು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕಳೆದ ವರ್ಷ ಭರಮಸಾಗರದಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಪ್ರದರ್ಶನ ರೂಪದಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಭಾಗಿಯಾಗಿ ಮೇಲ್ಕಂಡ ವಿಷಯಗಳ ಬಗ್ಗೆ ವೇದಿಕೆಯಲ್ಲಿ ಚರ್ಚೆಯಾಗಿ ಮತ್ತು ಪ್ರದರ್ಶನದಲ್ಲೂ ತಿಳುವಳಿಕೆ ಮೂಡಿಸಿದ್ದು ಒಂದು ವಿನೂತನ ಪ್ರಯೋಗವಾಗಿತ್ತು.

ಪ್ರಮುಖ ಮುಖ್ಯಾಂಶಗಳು:

ತ್ಯಾಜ್ಯದಿಂದ ಸಂಪತ್ತು:

ರಾಜ್ಯದಲ್ಲಿ ಪ್ರತಿ ವರ್ಷ ವ್ಯರ್ಥವಾಗುವ ಸುಮಾರು 10 ಲಕ್ಷ ಟನ್ ಅಡಿಕೆ ಸಿಪ್ಪೆಯನ್ನು ಸುಟ್ಟು ಪರಿಸರ ಹಾಳು ಮಾಡುವ ಬದಲು, ಅದನ್ನು ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವನ್ನಾಗಿ ಮಾಡುವ ವೈಜ್ಞಾನಿಕ ವಿಧಾನವನ್ನು ವಿಜ್ಞಾನಿಗಳು ರೈತರಿಗೆ ಮನದಟ್ಟು ಮಾಡುತ್ತಿದ್ದಾರೆ.

ತಜ್ಞರ ಮಾರ್ಗದರ್ಶನ:

ತೋಟಗಾರಿಕೆ ತಜ್ಞರಾದ ಶ್ರೀ ಬಸವನಗೌಡ ಎಂ. ಹಾಗೂ ತಂಡದವರು ಮಣ್ಣಿನ ಆರೋಗ್ಯ, ಹನಿ ನೀರಾವರಿ ಮತ್ತು ರಸಾವರಿ ಪದ್ಧತಿಯ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿದ್ದಾರೆ.

ಗಣ್ಯರ ಭೇಟಿ:

ಈ ವಸ್ತುಪ್ರದರ್ಶನವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಉದ್ಘಾಟಿಸಿ, ರೈತ ಸ್ನೇಹಿ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ.

ಶ್ರೀ ತರಳಬಾಳು ಜಗದ್ಗುರುಗಳ ಆಶಯದಂತೆ ಕೃಷಿ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಈ ಮೇಳದಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಂಡು ತಾಂತ್ರಿಕ ಜ್ಞಾನ ಪಡೆಯುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ವಿಶೇಷವಾಗಿ ಅಡಿಕೆ ಸಿಪ್ಪೆಯನ್ನು ಸುಡುವ ಬದಲು ಅದನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸುವ ತಂತ್ರಜ್ಞಾನದ ಬಗ್ಗೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡುತ್ತಿರುವ ಮಾಹಿತಿ ರೈತರಿಗೆ ವರದಾನವಾಗಲಿದೆ.

ಕೃಷಿ ಮೇಳದ ಪ್ರಮುಖ ಆಕರ್ಷಣೆಗಳು:

ಅಡಿಕೆ ಸಿಪ್ಪೆ ನಿರ್ವಹಣೆ: ರಾಜ್ಯದಲ್ಲಿ ವ್ಯರ್ಥವಾಗುತ್ತಿರುವ ಸುಮಾರು 10 ಲಕ್ಷ ಟನ್ ಅಡಿಕೆ ಸಿಪ್ಪೆಯನ್ನು ಪರಿಸರ ಸ್ನೇಹಿ ಗೊಬ್ಬರವನ್ನಾಗಿ ಮಾಡುವ ವಿಧಾನ, ನೀರಾವರಿ ಯೋಜನೆಗಳ ಮಾಹಿತಿ ನೀಡಲಾಗುತ್ತಿದೆ.

ಶ್ರೀ ಜಗದ್ಗುರುಗಳು ಹಮ್ಮಿಕೊಂಡಿರುವ ವಿವಿಧ ನೀರಾವರಿ ಯೋಜನೆಗಳ ಸಮಗ್ರ ಚಿತ್ರಣ.ತಂತ್ರಜ್ಞಾನದ ಬಳಕೆ: ಕೃಷಿ ಯಂತ್ರೋಪಕರಣಗಳು, ಹನಿ ನೀರಾವರಿ ಮತ್ತು ರಸಾವರಿ (Fertigation) ಪದ್ಧತಿಗಳ ಬಗ್ಗೆ ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತಿದೆ.

ವಿಜ್ಞಾನಿಗಳ ತಂಡ:

ಕೆ.ಪಿ. ಬಸವರಾಜಪ್ಪನವರ ಮಾರ್ಗದರ್ಶನದಲ್ಲಿ, ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ. ಹಾಗೂ ತಂಡವು ಮಣ್ಣಿನ ಆರೋಗ್ಯ ಮತ್ತು ನಿಖರ ಕೃಷಿ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ರೈತರು ಅಡಿಕೆ ಸಿಪ್ಪೆಯನ್ನು ಗೊಬ್ಬರ ಮಾಡುವುದರಿಂದ ಆಗುವ ಲಾಭಗಳು, ವಿವರಣೆ, ಮಣ್ಣಿನ ಫಲವತ್ತತೆ, ಸಿಪ್ಪೆಯಲ್ಲಿರುವ ಪೋಷಕಾಂಶಗಳು, ಮಣ್ಣನ್ನು ಸೇರಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಿಸುತ್ತದೆ.

ಪರಿಸರ ಸಂರಕ್ಷಣೆ

ಸಿಪ್ಪೆ ಸುಡುವುದರಿಂದ ಆಗುವ ವಾಯು ಮಾಲಿನ್ಯ ಮತ್ತು ಜಲಮೂಲಗಳ ಕಲುಷಿತಗೊಳ್ಳುವಿಕೆಯನ್ನು ತಡೆಯಬಹುದು.ಆರ್ಥಿಕ ಉಳಿತಾಯ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗಿ ಖರ್ಚು ಉಳಿಯುತ್ತದೆ.

ರೈತರು ಈ ಅಮೂಲ್ಯ ಅವಕಾಶವನ್ನು ಬಳಸಿಕೊಂಡು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ತಮ್ಮ ತೋಟಗಳಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ.

Share

Leave a comment

Leave a Reply

Your email address will not be published. Required fields are marked *

Related Articles