ದಾವಣಗೆರೆ: ಅಡಿಕೆ ಧಾರಣೆ ಏರುತ್ತಿದೆ. ಚಿನ್ನದ ಬೆಲೆಯೂ ಬಂದಿದೆ. ಅಡಿಕೆ ಬೆಳೆಗಾರರು ಇದುವರೆಗೆ ತೆರಿಗೆ ಇಲ್ಲದೇ ನೆಮ್ಮದಿಯಾಗಿದ್ದರು. ಆದರೆ ಈಗ ದೊಡ್ಡ ದೊಡ್ಡ ಅಡಿಕೆ ವ್ಯಾಪಾರಿಗಳಷ್ಟೇ ಅಲ್ಲ, ಸಣ್ಣ ವ್ಯಾಪಾರಿಗಳಿಗೂ
ತೆರಿಗೆ ವಿಧಿಸಲಾಗುತ್ತಿದೆ.
READ ALSO THIS STORY: BIG NEWS: ಚಂದ್ರಶೇಖರ್ ಸಂಕೊಳ್ ಸಾಲ ತೀರಿಸುವವರು ಇದ್ದರೂ “ಬೂದಿ”ಯಾಗಿಯೇ ಹೋಗಿಬಿಟ್ಟ: ಸಂಬಂಧಿಕರು ಬಿಚ್ಚಿಟ್ಟ ಸ್ಫೋಟಕ ಮಾಹಿತಿ!
ಹೌದು. ಈ ವಿಷಯವನ್ನು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶಿವಗಂಗಾ ಬಸವರಾಜ್ ಅವರು, ವಾಣಿಜ್ಯ ತೆರಿಗೆ ಇಲಾಖೆಯಿಂದ ವಾರ್ಷಿಕವಾಗಿ 372 ಕೋಟಿ ತೆರಿಗೆ ಸಂಗ್ರಹ ಗುರಿಗೆ ಈಗಾಗಲೇ 344 ಕೋಟಿ ಸಂಗ್ರಹವಾಗಿದೆ. ಆದರೆ ಸಣ್ಣ ಸಣ್ಣ ಸ್ಥಳೀಯ ಅಡಿಕೆ ವ್ಯಾಪಾರಿಗಳ ವಾಹನಗಳನ್ನು ತಡೆದು ತೆರಿಗೆ, ದಂಡ ಹಾಕಲಾಗುತ್ತಿದೆ ಎಂದು ತಿಳಿಸಿದರು.
ಸಣ್ಣ ಸಣ್ಣ ಅಡಿಕೆ ಬೆಳೆಗಾರರು ಈ ವಿಷಯ ತನ್ನ ಗಮನಕ್ಕೆ ತಂದಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ದಂಡ ಹಾಕದಿರಲು ಸೂಚನೆ ನೀಡುವಂತೆ ಮನವಿ ಮಾಡಿದರು.
ಹೊನ್ನಾಳಿ ಶಾಸಕ ಜಿ.ಡಿ.ಶಾಂತನಗೌಡ ಮಾತನಾಡಿ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ಹಾಸ್ಟೆಲ್‍ಗಳನ್ನು ನಗರಕ್ಕೆ ಸ್ಥಳಾಂತರಿಸಬಾರದು, ಇದರಿಂದ ಅಲ್ಲಿನ ಶಾಲೆ, ಕಾಲೇಜುಗಳಿಗೆ ತೊಂದರೆಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕುರಿತು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧಿಕ್ಷಕಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜ್ ಟಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





Leave a comment