SUDDIKSHANA KANNADA NEWS/ DAVANAGERE/ DATE:03-08-2023
ದಾವಣಗೆರೆ (Davanagere): ಪ್ರತಿಯೊಬ್ಬರಿಗೂ ಮಕ್ಕಳ ಹುಟ್ಟುಹಬ್ಬ ವಿಶೇಷವೇ ಸರಿ. ಎಷ್ಟೇ ಶ್ರೀಮಂತರಾದರೂ ಪುತ್ರನ ಜನುಮದಿನ ಅಂದರೆ ಸಂತಸಕ್ಕೆ ಪಾರವೇ ಇರೋದಿಲ್ಲ. ಬಿಜೆಪಿ ಯುವ ನಾಯಕ, ಮಾಯಕೊಂಡ ಕ್ಷೇತ್ರದ ಕೇಸರಿ ಪಡೆಯ ಕಣ್ಮಣಿ, ಯುವಕರ ಆಶಾಕಿರಣ, ಭವಿಷ್ಯದ ಜನಪ್ರತಿನಿಧಿ ಜಿ. ಎಸ್. ಶ್ಯಾಮ್ ಬಿ. ಟಿ. ಸಿದ್ಧಪ್ಪರ ಪುತ್ರನ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸಮಾಜಮುಖಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಅರ್ಥಪೂರ್ಣ ಆಚರಣೆಗೆ ಮುನ್ನುಡಿ ಬರೆದರು.
ತನ್ನ ಪುತ್ರನ ಬರ್ತ್ ಡೇ ಆಚರಣೆಗೆ ಮುನ್ನ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸದುದ್ದೇಶ ಹೊಂದಿದ್ದ ಜಿ. ಎಸ್. ಶ್ಯಾಮ್ ಅವರು ಬಡಮಕ್ಕಳು, ಅಂಧಮಕ್ಕಳು, ವೃದ್ಧರಿಗೆ ನೆರವಾಗುವ ಮೂಲಕ ಮಾದರಿಯಾಗಿ ಜನುಮ
ದಿನ ಆಚರಣೆ ನಡೆಸುತ್ತಿದ್ದಾರೆ.
ಬಿ. ಟಿ. ಸಿದ್ಧಪ್ಪ ಅವರು ಸಹ ಕಷ್ಟಪಟ್ಟು ಮೇಲೆ ಬಂದವರು. ಬಡವರು, ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದವರು, ಮಾಯಕೊಂಡ ಕ್ಷೇತ್ರದ ಜನರಿಗೆ ನೆರವಾಗುತ್ತಲೇ ಬಂದಿದ್ದಾರೆ. ಅದೇ ರೀತಿಯಲ್ಲಿಯೂ ಜಿ. ಎಸ್. ಶ್ಯಾಮ್
ಸಹ ಮುಂದುವರಿದಿದ್ದಾರೆ. ರಾಜಕಾರಣಿಯಾಗಿ ಬ್ಯುಸಿಯಾಗಿದ್ದರೂ ಮಗನ ಜನುಮದಿನ ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಸಂಕಲ್ಪ ತೊಟ್ಟವರು ಜಿ. ಎಸ್. ಶ್ಯಾಮ್ ದಂಪತಿ.
ಸಮಾಜಮುಖಿ ಕಾರ್ಯ:
ದಾವಣಗೆರೆ: ಮಾಯಕೊಂಡ ಬಿಜೆಪಿ ಯುವ ಮುಖಂಡ ಜಿ. ಎಸ್. ಶ್ಯಾಮ್ ಬಿ. ಟಿ. ಸಿದ್ಧಪ್ಪ ಅವರ ಪುತ್ರ ರಾಜ್ ಶ್ಯಾಮ್ ಮೊದಲ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಕಾರ್ಯಗಳ ಮೂಲಕ ನೆರವು ನೀಡಲಾಯಿತು. ಬಾಡಾ ಕ್ರಾಸ್ ಅಂಧ ಮಕ್ಕಳು, ಡಿಸಿಎಂನಲ್ಲಿನ ಬುದ್ದಿಮಾಂದ್ಯ ಮಕ್ಕಳು, ವೃದ್ಧಾಶ್ರಮದ ನಿರಾಶ್ರಿತರಿಗೆ ನೆರವು ನೀಡುವ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆಗೆ ಚಾಲನೆ ನೀಡಲಾಯಿತು.
ಈ ವೇಳೆ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಬುದ್ದಿಮಾಂದ್ಯ ಮಕ್ಕಳಿಗೆ ಪರಿಕರಗಳನ್ನು ವಿತರಿಸಲಾಯಿತು. ವೃದ್ಧಾಶ್ರಮದಲ್ಲಿ ವೃದ್ಧರಿಗೆ ಊಟದ ವ್ಯವಸ್ಥೆ ಮಾಡಿ ಪುತ್ರನಿಗೆ ಆಶೀರ್ವಾದ ಮಾಡುವಂತೆ ಜಿ. ಎಸ್. ಶ್ಯಾಮ್ ಬಿ. ಟಿ. ಸಿದ್ದಪ್ಪ ಕೋರಿದರು.
ಮಕ್ಕಳ ಹುಟ್ಟುಹಬ್ಬವನ್ನು ಬಡವರು, ನಿರಾಶ್ರಿತರು, ಬಡ ಮಕ್ಕಳಿಗೆ ನೆರವು ನೀಡುವ ಮೂಲಕ ಹುಟ್ಟುಹಬ್ಬ ಆಚರಣೆಗೆ ಚಾಲನೆ ಕೊಟ್ಟಿದ್ದು ಖುಷಿ ಕೊಟ್ಟಿದೆ. ಕಷ್ಟದಲ್ಲಿರುವವರಿಗೆ ನೆರವಾಗಬೇಕು, ಮಕ್ಕಳ ಓದಿಗೆ ಸಹಕಾರ ಆಗಬೇಕು. ವೃದ್ಧರು ತನ್ನ ಪುತ್ರನಿಗೆ ಆಶೀರ್ವದಿಸಿದರೆ ಅದೇ ನಮಗೆ ಶ್ರೀರಕ್ಷೆ. ನನ್ನ ಪುತ್ರ ರಾಜ್ ಶ್ಯಾಮ್ ಗೆ ಒಂದನೇ ವರ್ಷದ ಜನುಮದಿನದ ಸಂಭ್ರಮ. ಅದ್ಧೂರಿ ಆಚರಣೆಯ ಜೊತೆಗೆ ಸಮಾಜಮುಖಿ ಕೆಲಸ ಮಾಡಬೇಕೆಂಬ ಸದುದ್ದೇಶದಿಂದ ಸಾಮಾಜಿಕ ಕಾರ್ಯ ನಡೆಸಲಾಯಿತು ಎಂದು ಹೇಳಿದರು.
ನನ್ನ ತಂದೆ ತಾಯಿ, ಪತ್ನಿ, ಸಹೋದರರ ಸಲಹೆಯಂತೆ ಈ ಕಾರ್ಯಕ್ರಮ ನಡೆಸಲಾಯಿತು. ಪುತ್ರ ರಾಜ್ ಶ್ಯಾಮ್ ನಿಗೆ ಆಶೀರ್ವಾದ ಕೋರಿ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ಇದು ಇಂದಿಗೆ ನಿಲ್ಲುವುದಿಲ್ಲ. ಮುಂದೆಯೂ ಸಾಗುತ್ತದೆ ಎಂದು ಶ್ಯಾಮ್ ಹೇಳಿದರು. ಈ ವೇಳೆ ಜಿ. ಎಸ್. ಶ್ಯಾಮ್ ಅಭಿಮಾನಿಗಳ ಬಳಗದ ಪ್ರಮುಖರಾದ ಸೋಮಶೇಖರ್, ಅಣಜಿ ತಿಪ್ಪೇಸ್ವಾಮಿ, ರಾಘವೇಂದ್ರ, ಲೋಕಿಕೆರೆ ರಾಮಸ್ವಾಮಿ, ಅಣಜಿ ನಾಗರಾಜ್, ಖಾಜಿಪುರ ಸಿದ್ಧಪ್ಪ, ಗುಮ್ಮನೂರು ಶ್ರೀನಿವಾಸ್, ಗಿರಿಯಾಪುರ ತಿಪ್ಪೇಶಿ, ಅಣಜಿ ತಿಪ್ಪೇಸ್ವಾಮಿ, ಪ್ಯಾಟೆ ಹನುಮಂತಪ್ಪ, ಬಸಾಪುರ ರಮೇಶ್, ಮೆಳಕಟ್ಟೆ ನಾಗರಾಜ್ ಮತ್ತಿತರರು ಹಾಜರಿದ್ದರು.
ಮಮ್ಮಲ ಮರಗುತ್ತಿರುವ ಬಿಜೆಪಿ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಜಿ. ಎಸ್. ಶ್ಯಾಮ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಗೆಲುವು ಆಗುತಿತ್ತು. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡದಿದ್ದರೂ ಇಂದಿಗೂ ನಮ್ಮ
ಜೊತೆಗಿದ್ದಾರೆ. ಪ್ರತಿ ಕಾರ್ಯಗಳಲ್ಲಿಯೂ ಕ್ಷೇತ್ರದ ಜನರಿಗೆ ಸ್ಪಂದಿಸುತ್ತಿದ್ದಾರೆ. ತನ್ನ ಪುತ್ರನ ಜನುಮದಿನಕ್ಕೂ ನಮಗೆ ಆಹ್ವಾನ ಕೊಟ್ಟಿದ್ದಾರೆ. ಮಾಯಕೊಂಡ ಬಿಜೆಪಿ ಭದ್ರಕೋಟೆಯಾಗಿತ್ತು. ಶ್ಯಾಮಣ್ಣನಿಗೆ ಟಿಕೆಟ್ ಕೊಟ್ಟಿದ್ದರೂ
ಖಂಡಿತವಾಗಿಯೂ ಜಯಭೇರಿ ಬಾರಿಸುತ್ತಿದ್ದರು. ಆದ್ರೆ, ಬಿಜೆಪಿಯವರು ಈಗ ಶ್ಯಾಮ್ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದರು ಎನ್ನುತ್ತಾರೆ. ಬಿಜೆಪಿ ನಾಯಕರು ಮಾಡಿದ ತಪ್ಪಿಗೆ ಬಿಜೆಪಿ ಸೋಲು ಅನುಭವಿಸಬೇಕಾಯಿತು.
ಮಾಯಕೊಂಡ ಕ್ಷೇತ್ರ ಬಿಜೆಪಿ ಕೈ ತಪ್ಪುತ್ತಿರಲಿಲ್ಲ. ಈಗ ಬಿಜೆಪಿಯವರಿಗೆ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಈಗ ಅರಿವಾಗಿದೆ. ಈಗಲೂ ಶ್ಯಾಮಣ್ಣ ಅಂದರೆ ನಮಗೆಲ್ಲಾ ಅಚ್ಚುಮೆಚ್ಚು ಎನ್ನುತ್ತಾರೆ ಮಾಯಕೊಂಡ ಕ್ಷೇತ್ರದ
ಜನರು.
ಪ್ರೀತಿ ಹೆಚ್ಚುತ್ತಲೇ ಇದೆ ಶ್ಯಾಮಣ್ಣರಿಗೆ:
ಇನ್ನು ಜಿ. ಎಸ್. ಶ್ಯಾಮ್ ಟಿಕೆಟ್ ಸಿಗಲಿಲ್ಲ ಎಂದು ಕೊರಗಿ ಕುಳಿತಿಲ್ಲ. ಈಗಲೂ ಜನರ ಮಧ್ಯೆ ಓಡಾಡುತ್ತಿದ್ದಾರೆ. ಜೊತೆಗೆ ಪ್ರೀತಿ ಸಂಪಾದನೆ ಮಾಡುತ್ತಲೇ ಇದ್ದಾರೆ. ಈಗಲೂ ಶ್ಯಾಮಣ್ಣ ನಿನಗೆ ಟಿಕೆಟ್ ಕೊಟ್ಟಿದ್ದರೆ ಎಂಎಲ್ ಎ ಆಗಿ ನೋಡುತ್ತಿದ್ದೆವು. ಆದ್ರೆ, ನಿಮ್ಮ ಪಕ್ಷದವರು ಮಾಡಿದ ಯಡವಟ್ಟಿಗೆ ಈಗ ಕೊರಗುವಂತಾಗಿದೆ. ನಿಮ್ಮ ಪುತ್ರನ ಜನುಮದಿನವನ್ನು ನಮ್ಮನ್ನೆಲ್ಲಾ ಪ್ರೀತಿಯಿಂದ ಆಹ್ವಾನ ಕೊಟ್ಟಿದ್ದೀರಾ. ಕ್ಷೇತ್ರದ ಪ್ರತಿಯೊಬ್ಬರಿಗೂ ಬಂದು ನೀವು ಆಮಂತ್ರಣ ಕೊಡಲು ಆಗದು. ಸಾಮಾಜಿಕ ಜಾಲತಾಣ, ವ್ಯಾಟ್ಸಪ್ ಮೂಲಕ ನಮ್ಮನ್ನು ಕರೆದಿದ್ದೀರಿ. ನಿಮ್ಮ ಪ್ರೀತಿಗೆ ನಾವೆಲ್ಲರೂ ಸದಾ ಚಿರಋಣಿಯಾಗಿರುತ್ತೇವೆ ಎನ್ನುತ್ತಾರೆ ಮಾಯಕೊಂಡ ಕ್ಷೇತ್ರದ ಜನರು.
ರಾಜಕಾರಣಿ ಇದ್ದರೆ ಶಾಮಣ್ಣರಂತೆ ಇರಬೇಕು:
ರಾಜಕಾರಣಿಗಳು ಇದ್ದರೆ ಶಾಮಣ್ಣರಂತೆ ಇರಬೇಕು. ಈಗಲೂ ಜನರೊಂದಿಗೆ ಬೆರೆಯುವ, ಮನೆ ಮನೆ ಕಾರ್ಯಕ್ರಮಗಳಿಗೆ ಕರೆದರೆ ಬರುತ್ತಾರೆ. ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಜನರಿಂದ ದೂರ ಆಗಿಲ್ಲ. ಇನ್ನು ಹತ್ತಿರ ಆಗುತ್ತಲೇ ಇದ್ದಾರೆ. ಕಷ್ಟ ಎಂದರೆ ಸ್ಪಂದಿಸುತ್ತಾರೆ, ನುಡಿದಂತೆ ನಡೆಯುತ್ತಿದ್ದಾರೆ. ಜನರೊಟ್ಟಿಗೆ ಶಾಮಣ್ಣ ಈಗಲೂ ಹಿಂದಿನಂತೆಯೇ ಇದ್ದಾರೆ. ಅವರು ರಾಜಕೀಯವಾಗಿ ಮತ್ತಷ್ಟು ಬೆಳೆಯಬೇಕು. ಅವರ ಪುತ್ರನಿಗೆ ಕ್ಷೇತ್ರದ ಜನರು, ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ಎಲ್ಲರೂ ಜನುಮದಿನದ ಶುಭಾಶಯ ಕೋರುತ್ತೇವೆ ಎಂದು ಹೇಳಿದ್ದಾರೆ.