ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Chikungunya: ಸಾಂಕ್ರಾಮಿಕ ರೋಗಗಳ ಗುಣ ಲಕ್ಷಣಗಳೇನು..? ತುತ್ತಾಗದಿರಲು ಏನು ಮಾಡಬೇಕು…?

On: August 3, 2023 3:33 AM
Follow Us:
Chikungunya
---Advertisement---

SUDDIKSHANA KANNADA NEWS/ DAVANAGERE/ DATE:03-08-2023

ದಾವಣಗೆರೆ: ಮಳೆ ಅಬ್ಬರಿಸಿ ಬೊಬ್ಬಿರಿದು ತಣ್ಣಗಾಗಿದೆ. ಆದ್ರೆ, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗದ ಭಯ ಇದ್ದೇ ಇರುತ್ತದೆ. ಹಾಗಾದರೆ ಸಾಂಕ್ರಾಮಿಕ ರೋಗಗಳ ಲಕ್ಷಣಗಳೇನು..? ತುತ್ತಾಗದಿರಲು ಏನು ಮಾಡಬೇಕು ಎಂಬ ಬಗ್ಗೆ ಕೆಲವರು ಯೋಚನೆ ಮಾಡುತ್ತಾರೆ. ಹಾಗಾದರೆ, ಏನು ಮಾಡಬೇಕು ಎಂಬುದಾಗಿ ವೈದ್ಯರೇ ಹೇಳುತ್ತಾರೆ. ಸೊಳ್ಳೆಯಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ (Chikungunya)

, ಮೆದುಳು ಜ್ವರವು ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ.

ಡೆಂಗ್ಯೂ, ಚಿಕನ್ ಗುನ್ಯಾ (Chikungunya), ಮಲೇರಿಯಾ ಲಕ್ಷಣ:

ತೀವ್ರ ಜ್ವರ, ತಲೆನೋವು, ಗಂಧೆಗಳು, ಕಣ್ಣಿನ ಹಿಂಭಾಗ ನೋವು, ಮೈ ಕೈ ನೋವು, ಕೀಲು ಮೂಳೆ ನೋವು, ಕಾಲು ಬಾವು, ಚಳಿಯ ಹಂತ, ಬಿಸಿ ಜ್ವರದ ಹಂತ, ಬೆವರಿಕೆಯ ಹಂತ ಜೊತೆಗೆ ತಲೆನೋವು, ನಡುಕ.

ಈ ಸುದ್ದಿಯನ್ನೂ ಓದಿ: 

Davanagere: ಸಂಸದ ಸಿದ್ದೇಶ್ವರರ ಸಿಡಿಗುಂಡು ವಾಗ್ಬಾಣಕ್ಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ “ಮಲ್ಲಗುದ್ದಿನೇಟು…”!

ಈ ಲಕ್ಷಣಗಳು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಕಾಣಿಸಿಕೊಳ್ಳಬಹುದು. ಕೆಲವೊಂದು ಪ್ರಕರಣಗಳಲ್ಲಿ ತಲೆನೋವು ಮತ್ತು ಸುಸ್ತು ಮಾತ್ರ ಕಾಣಿಸಿಕೊಳ್ಳಬಹುದು.

ಕ್ಷಯ ರೋಗದ ಲಕ್ಷಣಗಳು:

ಎರಡು ವಾರಕ್ಕಿಂತ ಹೆಚ್ಚು ಕೆಮ್ಮು. ರಾತ್ರಿ ವೇಳೆ ಜ್ವರ . ಬೆವರುವಿಕೆ. ಹಸಿವು ಆಗದಿರುವುದು. ತೂಕ ಕಡಿಮೆ ಆಗಿರುವುದು. ಕಫಾದಲ್ಲಿ ರಕ್ತ ಕಾಣಿಸಿಕೊಳ್ಳುವುದು ಇವುಗಳು ಕ್ಷಯರೋಗದ ಲಕ್ಷಣಗಳಾಗಿರುತ್ತವೆ.

ನಿಯಂತ್ರಣ ಕ್ರಮಗಳು:

ನೀರಿನ ಮೂಲಗಳಾದ ಡ್ರಮ್ಮು, ಬ್ಯಾರೆಲ್, ತೊಟ್ಟಿ, ನೀರಿನ ಗುಂಡಿ, ತೆಂಗಿನಕಾಯಿ ಚಿಪ್ಪು, ಟೀ ಲೋಟ, ಹೂವಿನ ಕುಂಡಲಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು. ಮನೆಯ ಸುತ್ತಮುತ್ತ ಘನ ತ್ಯಾಜ್ಯ ಗಳನ್ನು ಸ್ವಚ್ಛಗೊಳಿಸುವುದು.

ನಿಂತ ನೀರು ಸೊಳ್ಳೆಯ ತವರೂರು, ಸೊಳ್ಳೆಯ ಪರದೆ ಉಪಯೋಗಿಸುವುದು, ಸೊಳ್ಳೆ ನಾಶಕ ದ್ರಾವಣ ಬಳಸುವುದು. ಮುಂಜಾಗ್ರತಾವಾಗಿ ಸೊಳ್ಳೆಯ ಉತ್ಪನ್ನ ತಾಣಗಳನ್ನು ಟೆಮೀಫಾಸ್ ದ್ರಾವಣ ಬಳಸಬೇಕು. ಲಾರ್ವಹಾರಿ ಮೀನುಗಳನ್ನು ದೊಡ್ಡ ತೊಟ್ಟಿಗಳಲ್ಲಿ ಬಿಡುವ ಮೂಲಕ ಸೊಳ್ಳೆ ಲಾರ್ವಗಳನ್ನು ನಾಶಗೊಳಿಸುತ್ತವೆ ಎಂದು ದಾವಣಗೆರೆ ತಾಲೂಕಿನ ಆವರಗೊಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್ ಎಲ್.ಡಿ ಮಾಹಿತಿ ನೀಡಿದ್ದಾರೆ.

Davanagere, Davanagere News, Davanagere Chikungunya News, Chikungunya

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment