(Coffee board) ಕಾಫಿ ಬೆಳೆಯುವ ರೈತರಿಗೆ ಕಾಫಿ ಮಂಡಳಿಯಿಂದ ವಿವಿಧ ಕಾರ್ಯಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕಾಫಿ ಬೆಳೆಯುವ ರೈತರಿಗೆ ಯಾವ ಯಾವ ಕಾರ್ಯಗಳಿಗೆ ಸಹಾಯಧನ ನೀಡಲಾಗುತ್ತಿದೆ? ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು? ಎಂಬ ಮಾಹಿತಿ ಸೇರಿದಂತೆ ಕಾಫಿ ಮಂಡಳಿಯು ರೈತರಿಗೆ ಸಹಾಯಧನ ನೀಡುತ್ತಿರುವ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ..
ಯಾವೆಲ್ಲ ಕಾರ್ಯಗಳಿಗೆ ಕಾಫಿ ಮಂಡಳಿಯಿಂದ ಸಹಾಯಧನ ನೀಡಲಾಗುತ್ತಿದೆ?:
ಕಾಫಿ ಬೆಳೆಯುವ ರೈತರಿಗೆ ಕಾಫಿ ಮಂಡಳಿಯಿಂದ ಕಾಫಿ ಮರು ನಾಟಿ, ನೀರಾವರಿ ಯೋಜನೆ ಅಡಿ ಕೆರೆ, ಕಾಫಿ ತೋಟದಲ್ಲಿ ಬಳಸಬಹುದಾದ ವಿವಿಧ ಯಂತ್ರಗಳನ್ನು ಖರೀದಿಸಲು, ಕಾಫಿ ಗೌಡನ್, ರಿಂಗ್ ಬಾವಿ ಸ್ಪ್ರಿಂಕ್ಲೇರ್ ಇರಿಗೇಶನ್, ಮರ ಕಟಾವು ಮಾಡುವ ಮಷೀನ್ ಖರೀದಿಸಲು ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಯಾವೆಲ್ಲ ರೈತರು ಅರ್ಹರು?:
ಕಾಫಿ ಮಂಡಳಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಯಾವ ರೈತರು ಅರ್ಹರು ಎಂದು ನೋಡುವುದಾದರೆ, ಕಾಫಿ ಬೆಳೆಯುವ ಎಲ್ಲಾ ರೈತರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ ಎಂದು ಕಾಫಿ ಮಂಡಳಿಯು ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
ಅರ್ಹರಿರುವ ಎಲ್ಲಾ ರೈತರು ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ನಿಗದಿಪಡಿಸಿದ ದಿನಾಂಕ ಸಪ್ಟೆಂಬರ್ 30, 2024ರ ಒಳಗಾಗಿ ನಿಗದಿತ ದಾಖಲಾತಿಗಳೊಂದಿಗೆ ಹತ್ತಿರದ ಕಾಫಿ ಮಂಡಳಿ ಕಚೇರಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಬಹುದು.
ಮೂಡಿಗೆರೆ:
2024-25 ನೇ ಸಾಲಿಗೆ ಕಾಫಿ ಮಂಡಳಿಯ ವತಿಯಿಂದ ರೈತರ ಕಾಫಿ ತೋಟದ ಸಂಪೂರ್ಣ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಿವಿಧ ಯೋಜನೆಗಳ ಮಾಹಿತಿ ತಿಳಿಯಲಿ ಎಂಬ ಕಾರಣದಿಂದಾಗಿ ಜೆ ಸಿ ಐ ಕಾರ್ಯದರ್ಶಿ ಜಗತ್ ಬಿ ಎಂ ಅವರು ಕಾರ್ಯಗಾರವನ್ನು ಆಯೋಜಿಸಿ, ಸರ್ಕಾರದಿಂದ ಕಾಫಿ ಬೆಳೆಯುವ ರೈತರಿಗೆ ಇರುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ತಿಳಿಸಿಕೊಟ್ಟರು. ಇತ್ತೀಚಿಗೆ ಹೆಚ್ಚಾಗುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ವಿವಿಧ ಕೊಳೆ ರೋಗಕ್ಕೆ ತುತ್ತಾಗುತ್ತಿದ್ದು, ಮುಂಗಾರಿನ ಸಮಯದಲ್ಲಿ ಬೋಡಸಿಂಪಡೆನೆಯಿಂದ ಹಾಗೂ ಅತಿಯಾದ ನೀರು ಹೊಡೆಯುವುದು ಈ ರೋಗಕ್ಕೆ ಕಾರಣವಾಗಿದೆ ಎಂದು ತಿಳಿಸಿಕೊಟ್ಟರು.
ಕಾಫಿ ಬೆಳೆಗಳಿಗೆ ಬರುವ ಕೊಳೆ ರೋಗವನ್ನು ಹೇಗೆ ಹತೋಟಿಗೆ ತರಬಹುದು?:
ವಿವಿಧ ಕಾರಣಗಳಿಂದಾಗಿ ಕಾಫಿ ಬೆಳೆಗೆ ಬರುವ ಕೊಳೆ ರೋಗವನ್ನು ನಾವು ವಿವಿಧ ರೀತಿಯಲ್ಲಿ ಹತೋಟಿಗೆ ತರಬಹುದಾಗಿದ್ದು, ಕೊಳೆರೋಗ ಬಂದಿರುವ ಕಾಫಿ ಗಿಡದ ಕಾಫಿಯನ್ನು ಉದುರಿಸಿ ಅದನ್ನು ಬೇರೆ ಕಡೆ ಹಾಕುವುದರಿಂದ ಈ ರೋಗವನ್ನು ಹತೋಟಿಗೆ ತರಬಹುದು ಎಂದು ಕಾರ್ಯಗಾರದಲ್ಲಿ ಎಲ್ಲಾ ರೈತರಿಗೆ ತಿಳಿಸಿಕೊಡಲಾಯಿತು.
ರೈತರು ಇಂತಹ ಕಾರ್ಯಗಾರದಲ್ಲಿ ಭಾಗವಹಿಸುವುದರಿಂದ, ಸರ್ಕಾರದಿಂದ ರೈತರಿಗೆ ಇರುವ ವಿವಿಧ ಯೋಜನೆಗಳ ಸಂಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ರೈತರು ಇಂತಹ ಕಾರ್ಯಗಾರವನ್ನು ತಪ್ಪದೇ ಭಾಗವಹಿಸುವುದರಿಂದ ಹಲವು ಲಾಭವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಕಾಫಿ ಬೆಳೆಯುವ ಎಲ್ಲಾ ರೈತರು ಇಂತಹ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ತಿಳಿದುಕೊಂಡು ಅಥವಾ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು.