ನೋಡಲು ತುಂಬಾ ಗುಂಡಗೆ ಹಾಗೂ ರುಚಿಕರವಾಗಿರುವ ಕ್ಯಾಪ್ಸಿಕಂನ್ನು ದಿನನಿತ್ಯ ಅಡುಗೆಯಲ್ಲಿ ಬಳಸುವುದ ರಿಂದ, ಮಧಮೇಹ, ಸಂಧಿವಾತ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುತ್ತವೆ.
ನೈಸರ್ಗಿಕವಾಗಿ ಸಿಗುವ ಒಂದೊಂದು ತರಕಾರಿಯಿಂದ ಒಂದೊಂದು ಬಗೆಯ ಪೌಷ್ಟಿಕ ಸತ್ವಗಳು ನಮ್ಮ ಆರೋಗ್ಯ ಕ್ಕೆ ಸಿಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಬೀಟ್ರೋಟ್ ಸೇವಿಸಿದರೆ, ದೇಹಕ್ಕೆ ಹೆಚ್ಚು ರಕ್ತ ಸೇರುತ್ತದೆ, ಅದೇ ರೀತಿ ಕ್ಯಾರೆಟ್ ಸೇವನೆ ಮಾಡುವುದರಿಂದ ಬುದ್ಧಿ ಚುರುಕಾಗುತ್ತದೆ, ಹಾಗೂ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಇದೇ ಗುಂಪಿಗೆ ವಿವಿಧ ಬಣ್ಣಗಳಲ್ಲಿ ದೊರೆಯುವ ಕ್ಯಾಪ್ಸಿಕಂ ಅಥವಾ ದೊಡ್ಡ ಮೆಣಸಿನಕಾಯಿ ಕೂಡ ಸೇರುತ್ತದೆ.
ಸ್ವತಃ ಆರೋಗ್ಯ ತಜ್ಞರು ಹೇಳುವಂತೆ, ತನ್ನಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಒಳಗೊಂಡಿರುವ ದಪ್ಪ ಮೆಣಸಿನ ಕಾಯಿಯನ್ನು, ವಿವಿಧ ತರಕಾರಿಗಳ ಜೊತೆಗೆ, ಅಡುಗೆಗಳಲ್ಲಿ ಬಳಸುವುದರಿಂದ, ಅಡುಗೆಯ ಸ್ವಾದ ಹೆಚ್ಚಾಗುವುದು ಮಾತ್ರವಲ್ಲದೆ, ಸಂಧಿವಾತ, ಮಧುಮೇಹ, ಹೃದಯಕ್ಕೆ ಸಂಬಂಧ ಪಟ್ಟ ದೀರ್ಘಕಾಲದ ಕಾಯಿಲೆ ಗಳನ್ನು ತಡೆಯುತ್ತದೆ. ಬನ್ನಿ ಇಂದಿನ ಲೇಖನಲ್ಲಿ ಆರೋಗ್ಯ ವೃದ್ಧಿಸುವ ಈ ಕ್ಯಾಪ್ಸಿಕಂನಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಅಡಗಿವೆ ಎನ್ನುವುದರ ಬಗ್ಗೆ ನೋಡೋಣ…
ಹೃದಯದ ಕಾಯಿಲೆ ಇದ್ದವರಿಗೆ
ನಮಗೆಲ್ಲಾ ಗೊತ್ತೇ ಇರುವ ಹಾಗೆ ಹೃದಯ ಕಾಯಿಲೆಗಳು ಅಥವಾ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ವಿಶ್ವ ದಾದ್ಯಂತ ಸಾವಿನ ಸಂಖ್ಯೆ ಹೆಚ್ಚಿಸಲು ಕಾರಣವಾಗುವ ಭಯಾನಕ ಕಾಯಿಲೆ.
ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲಿ, ಈ ಕಾಯಿಲೆ ಕಂಡು ಬರುತ್ತಿರುವುದು, ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಈ ಕಾಯಿಲೆಯಿಂದ ದೂರವಿರ ಬೇಕೆಂದ್ರೆ, ಸರಿಯಾದ ಜೀವನ ಶೈಲಿಯ ಜೊತೆಗೆ ಕಟ್ಟು ನಿಟ್ಟಿನ ಆರೋಗ್ಯಕಾರಿ ಆಹಾರ ಪದ್ಧತಿಯನ್ನು ಅನುಸರಿಸ ಬೇಕು.
ಕ್ಯಾಪ್ಸಿಕಂ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯ
ಈ ನಿಟ್ಟಿನಲ್ಲಿ ನೋಡುವುದಾದರೆ, ಕ್ಯಾಪ್ಸಿಕಂ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯ ತರಕಾರಿ ಎಂದು ಹೇಳ ಬಹುದು. ಯಾಕೆಂದ್ರೆ ಈ ತರಕಾರಿಯಲ್ಲಿರುವ ಹಲವಾರು ಬಗೆಯ ಪೋಷಕಾಂಶಗಳು ಹೃದಯವನ್ನು ಆರೋಗ್ಯಕರ ವಾಗಿರಿಸಲು ಸಹಾಯ ಮಾಡುತ್ತದೆ.
ಸ್ವತಃ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕ್ಯಾಪ್ಸಿಕಂ ಅಥವಾ ದೊಡ್ಡ ಮೆಣಸಿನಕಾಯಿನಲ್ಲಿ, ಮನುಷ್ಯನ ಹೃದಯದ ಪ್ರಮುಖ ಭಾಗಗಳಾದ ರಕ್ತನಾಳಗಳ ಹಾಗು ಅಪಧಮನಿಗಳನ್ನು ಕೊಬ್ಬಿನಾಂಶ ಅಥವಾ ಕೆಟ್ಟ ಕೊಲೆ ಸ್ಟಾಲ್ ಅಂಶದಿಂದ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುವ ಆರೋಗ್ಯಕಾರಿ ಗುಣ ಲಕ್ಷಣಗಳು ಕಂಡು ಬರುತ್ತದೆ.
ಇದರಿಂದ ಹೃದಯಕ್ಕೆ ರಕ್ತ ಸಂಚಾರ ಸರಾಗವಾಗಿ ನಡೆ ಯುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಗಳು ದೂರ ವಾಗುತ್ತದೆ.
ಹೀಗಾಗಿ ಈಗಾಗಲೇ ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇರುವವರು, ತಮ್ಮ ದೈನಂ ದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.
ತೂಕ ಇಳಿಸುವವರಿಗೆ
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸು ವವರು, ಈ ತರಕಾರಿಯನ್ನು ಯಾವುದಾದರೂ ಒಂದು ರೂಪದಲ್ಲಿ, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಒಳ್ಳೆಯದು.
ಯಾಕೆಂದ್ರೆ ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶ ಗಳನ್ನು ಒಳಗೊಂಡಿರುವ ಈ ತರಕಾರಿ, ದೇಹದಲ್ಲಿ ಶೇಖರಣೆಗೊಂಡಿರುವ ಕೊಬ್ಬಿನಾಂಶವನ್ನು ಕರಗಿಸುವ ಜೊತೆಗೆ, ತ್ವರಿತವಾಗಿ ಮೆಟಬೋಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸಿ, ದೇಹದಿಂದ ವಿಷಕಾರಿ ಅಂಶವನ್ನು ಹೊರ ಹಾಕುವಲ್ಲಿ ಸಹಾಯ ಮಾಡುತ್ತದೆ.
ಸಂಧಿವಾತ ಸಮಸ್ಯೆ ಇರುವವರು
ಇಂದಿನ ದಿನಗಳಲ್ಲಿ ವಯಸ್ಕರಲ್ಲಿ ಕೂಡ ಮೂಳೆ, ಗಂಟು ಹಾಗೂ ಕೀಲುಗಳ ನೋವಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ.
ಇವೆಲ್ಲಾ ಸಂಧಿವಾತಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಾಗಿ ರುವುದರಿಂದ, ಮನುಷ್ಯನಿಗೆ ದೀರ್ಘಕಾಲದವರೆಗೆ ಕಾಡು ತ್ತದೆ. ಇದಕ್ಕೆ ಮುಖ್ಯ ಕಾರಣ, ಇತ್ತೀಚೆಗೆ ಜನರು ಅನುಸರಿ ಸುತ್ತಿರುವ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಎಂದು ಹೇಳ ಬಹುದು.
ಒಂದು ವೇಳೆ ನೀವೂ ಕೂಡ ದೀರ್ಘಕಾಲದಿಂದ ಈ ಸಮಸ್ಯೆಯಿಂದ ಬಳಲುತ್ತಿರುವಿರಾದರೆ, ಯಾವುದಾ ದರೂ ಒಂದು ರೂಪದಲ್ಲಿ ಆದರೂ ಕ್ಯಾಪ್ಸಿಕಂ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.
ಮಧುಮೇಹ ಇದ್ದವರಿಗೆ
ದೊಣ್ಣೆ ಮೆಣಸು ಅಥವಾ ಕ್ಯಾಪ್ಸಿಕಂ ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿ ಕೊಂಡರೆ, ಅದರಿಂದ ಆರೋಗ್ಯಕ್ಕೆ ತುಂಬಾನೇ ಲಾಭವಿದೆ ಎಂದು ಪರಿಗಣಿಸ ಲಾಗಿದೆ.
ಅದರಲ್ಲೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ನಿಯಂತ್ರಣ ದಲ್ಲಿಡಲು, ಹಸಿರು ಕ್ಯಾಪ್ಸಿಕಂಗಿಂತಲೂ ಹಳದಿ ಕ್ಯಾಪ್ಸಿಕಂ ಅನ್ನು ಯಾವುದಾದರೂ ಒಂದು ರೂಪದಲ್ಲಿ ಸೇವನೆ ಮಾಡಿದರೆ, ಇದರಿಂದ ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸಹಾಯ ವಾಗುವುದು ಎಂದು ಅಧ್ಯಯನಗಳು ಹೇಳಿವೆ.
ಕ್ಯಾನ್ಸರ್ ನಂತಹ ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ
ಕ್ಯಾಪ್ಸಿಕಂನಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಅಂಶ ಗಳು, ದೇಹದಲ್ಲಿ ಕಂಡು ಬರುವ ಫ್ರೀ ರಾಡಿಕಲ್ ಅಂಶ ಗಳ ವಿರುದ್ಧ ಹೋರಾಡಿ, ಕ್ಯಾನ್ಸರ್ನಂತಹ ಕಾಯಿಲೆ ಯನ್ನು ನಮ್ಮಿಂದ ದೂರವಿರಿಸುತ್ತದೆ.
ಇದರ ಜೊತೆಗೆ ಈ ತರಕಾರಿಯಲ್ಲಿ ವಿಟಮಿನ್ ಸಿ ಅಂಶದ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನಿಮ್ಮನ್ನು ರೋಗ ಮುಕ್ತರನ್ನಾಗಿ ಮಾಡುವಲ್ಲಿ ಸಹಾಯ ಮಾಡುತ್ತದೆ.