ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಮಹಾಸಭಾದ ಕರ್ನಾಟಕ, ಕೇರಳ, ಆಂಧ್ರದ ರಾಜ್ಯಾಧ್ಯಕ್ಷರು ಅವಿರೋಧ ಆಯ್ಕೆ: ಶಂಕರ ಎಂ.ಬಿದರಿ ನೇತೃತ್ವದ ಎಲ್ಲಾ 27 ಅಭ್ಯರ್ಥಿಗಳಿಗೆ ಭರ್ಜರಿ ಜಯ

On: August 27, 2024 8:17 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:27-08-2024

ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾದ ಮಹಾಸಭೆಯ ಕೇಂದ್ರಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಸಮಿತಿ ಸದಸ್ಯರುಗಳ ಚುನಾವಣೆಯು ಮುಕ್ತಾಯಗೊಂಡಿದೆ.

ಈ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ 30, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ತಲಾ 5 ಸದಸ್ಯರಂತೆ ಕೇಂದ್ರ ಕಾರ್ಯಕಾರಿ ಸಮಿತಿಯ ಒಟ್ಟು55 ಸದಸ್ಯರುಗಳು ಮತ್ತು ಕರ್ನಾಟಕ, ಕೇರಳ, ಆಂಧ್ರಪ್ರದೇಶ ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಸಮಿತಿಯಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಆದರೆ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಾಹಕ ಸಮಿತಿಯ27 ಸಾಮಾನ್ಯ ಸದಸ್ಯರುಗಳಿಗೆ ಮಾತ್ರ ಕಳೆದ 25ರಂದು ರಾಜ್ಯದ ಜಿಲ್ಲಾ/ ತಾಲ್ಲೂಕು ಕೇಂದ್ರಗಳಲ್ಲಿ ಮತದಾನ ನಡೆದು ನಮ್ಮಅಂದರೆ ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿಗಳೂ ಆದ ಸಚಿವ ಈಶ್ವರ ಬಿ ಖಂಡ್ರೆ, ನೂತನ ರಾಜ್ಯಾಧ್ಯಕ್ಷ ಶಂಕರ ಎಂ.ಬಿದರಿ ನೇತೃತ್ವದ ಎಲ್ಲಾ 27 ಅಭ್ಯರ್ಥಿಗಳು ಅತಿಹೆಚ್ಚು ಮತಗಳನ್ನು ಗಳಿಸಿ ಜಯಶಾಲಿಗಳಾಗಿದ್ದಾರೆ.

ಮಹಾಸಭೆಯ ಎರಡನೇ ಹಂತದ ಚುನಾವಣೆಯನ್ನು ನಿಯಮಗಳ ಪ್ರಕಾರ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಚುನಾವಣಾಧಿಕಾರಿಗಳಿಗೆ, ಚುನಾವಣಾ ಸಿಬ್ಬಂದಿಗಳಿಗೆ, ಪೋಲೀಸ್ ಸಿಬ್ಬಂದಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ
ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಅಂತೆಯೇ ಈ ಚುನಾವಣೆಯಲ್ಲಿಅವಿರೋಧವಾಗಿ ಹಾಗೂ ಮತದಾನದ ಮೂಲಕ ಆಯ್ಕೆಯಾದ ರಾಜ್ಯಾಧ್ಯಕ್ಷರು ಮತ್ತು ಕೇಂದ್ರ ಹಾಗೂ ರಾಜ್ಯ ಘಟಕಗಳ ಕಾರ್ಯನಿರ್ವಾಹಕ ಸಮಿತಿ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪೂಜ್ಯರುಗಳಿಗೆ, ಸಮಾಜದ ಮುಖಂಡರುಗಳಿಗೆ, ಮಹಾಸಭಾದ ಸದಸ್ಯರುಗಳಿಗೆ ಹಾಗೂ ಸಮಾಜ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment