SUDDIKSHANA KANNADA NEWS/ DAVANAGERE/ DATE:30-07-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕ್ಷೀಣಿಸಿದೆ. ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ತಗ್ಗಿದೆ. ಭದ್ರಾ ಡ್ಯಾಂ(Bhadra Dam)ಗೆ ಹರಿದು ಬರುತ್ತಿದ್ದ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದ ಭದ್ರಾ ಡ್ಯಾಂ(Bhadra Dam)ಗೆ 20 ಅಡಿ ನೀರು ಹರಿದು ಬಂದಿತ್ತು. ಆದ್ರೆ, ಕಳೆದ ಮೂರು ದಿನಗಳಿಂದ ಮಳೆ ಕುಂಠಿತಗೊಂಡಿದ್ದರೂ 161ರ ಅಡಿಗೂ ಹೆಚ್ಚು ನೀರು ಭದ್ರಾ ಡ್ಯಾಂನಲ್ಲಿ ಸಂಗ್ರಹವಾಗಿದೆ.

ಶನಿವಾರ 13659 ಕ್ಯೂಸೆಕ್ ಒಳಹರಿವಿತ್ತು. ಆದ್ರೆ, ಭಾನುವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಕಡಿಮೆಯಾಗಿದೆ. ವೇಗವಾಗಿ ಡ್ಯಾಂ ತುಂಬುತಿತ್ತು. ಮಳೆ ಕಡಿಮೆಯಾದ ಕಾರಣ ಇನ್ ಫ್ಲೋ ಕಡಿಮೆಯಾಗಿದೆ. ಕೇವಲ ಮುಕ್ಕಾಲು ಅಡಿ ಮಾತ್ರ ನೀರು ಬಂದಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಡ್ಯಾಂಗೆ ಬರುತ್ತಿರುವ ನೀರಿನ ಪ್ರಮಾಣವೂ ದಿನಕಳೆದಂತೆ ಕಡಿಮೆಯಾಗುತ್ತಿದೆ. ಭದ್ರಾ ಡ್ಯಾಂ (Bhadra Dam) ತುಂಬಲು ಇನ್ನು24.4 ಅಡಿ ನೀರು ಬೇಕು. ಶನಿವಾರ 13 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಇರುವ ಇದ್ದರಿಂದ ಸ್ವಲ್ಪ ಮಟ್ಟಿಗೆ ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ ಏರಿಕೆಯಾಗಿತ್ತು. ಆದ್ರೆ, 8394 ಕ್ಯೂಸೆಕ್ ಗೆ ಒಳಹರಿವು ಇಳಿದಿದೆ.
ಈ ಸುದ್ದಿಯನ್ನೂ ಓದಿ:
College: ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ವಿಡಿಯೋ ವೈರಲ್: ನೊಂದು ನೇಣಿಗೆ ಶರಣಾಗಿ ಸಾವಿಗೆ ಶರಣಾದ ಪ್ರೇಮಿಗಳು..!
ವರುಣನ ಆರ್ಭಟ ಕಡಿಮೆಯಾದ ಪರಿಣಾಮ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳಿಗೆ ಹರಿಯುತ್ತಿದ್ದ ನೀರು ಕಡಿಮೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಇಳಿಕೆಯಾಗಿದೆ. ಹೊರ ಹರಿವು 188 ಕ್ಯೂಸೆಕ್ ಇದೆ.
ಕಳೆದ ವರ್ಷ ಇಷ್ಟೊತ್ತಿಗೆ ಡ್ಯಾಂ ಬಹುತೇಕ ತುಂಬಿ ತುಳುಕುತಿತ್ತು. ಆದ್ರೆ, ಈ ವರ್ಷ ಇನ್ನೂ 24.4 ಅಡಿ ನೀರು ಹರಿದು ಬರಬೇಕು. ಕಳೆದ ಎರಡ್ಮೂರು ದಿನಗಳಿಂದ ಸುಮಾರು 20 ಅಡಿ ನೀರು ಡ್ಯಾಂಗೆ ಹರಿದು ಬಂದಿದೆ. ಮಳೆ ಉತ್ತಮವಾಗಿ ಸುರಿದರೆ ಮತ್ತಷ್ಟು ನೀರು ಅಣೆಕಟ್ಟಿಗೆ ಬರುತ್ತದೆ. ಸದ್ಯದ ಮಾಹಿತಿ ಪ್ರಕಾರ ಭದ್ರಾ ಜಲಾನಯನ ಪ್ರದೇಶದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ. ಆದ್ರೆ, ಮಳೆ ಸುರಿಯುವ ಪ್ರಮಾಣ ತುಂಬಾನೇ ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ 184.1 ಅಡಿ ಇತ್ತು,
ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ:
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ: 30- 07 -2023
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 161.6 ಅಡಿ
ಎಂಎಸ್ ಎಲ್ : 2133.50 Ft
ಕೆಪಾಸಿಟಿ: 44.234= 40.144 Tmc
ಒಳಹರಿವು: 8394 ಕ್ಯೂಸೆಕ್
ಒಟ್ಟು ಹೊರಹರಿವು: 188 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 184.1 ಅಡಿ
ಕೆಪಾಸಿಟಿ: 69.190 Tmc
Bhadra Dam, Bhadra Dam Water, Bhadra Dam InFlow, Bhadra Dam OutFlow, Bhadra Dam Water Level Today, Davanagere News, Davanagere News Updates