ಶಿವಮೊಗ್ಗ: ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾವತಿ ಅಮೀರ್‌ಜಾನ್ ಕಾಲೋನಿ ಹೊಳೆಹೊನ್ನರು ರಸ್ತೆಯಲ್ಲಿರುವ ಹೈದರ್ ಆಲಿ ಮನೆಯ ಆಲೆಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀರುನ್ನೀಸಾ ಡಿ. 16 ರಂದು ಹೊರಗಡೆ ಹೋದವರು ಈತನಕ ವಾಪಾಸ್ಸಾಗಿರುವುದಿಲ್ಲ.
ಈಕೆಯ ಚಹರೆ 4.5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಡ ಮೊಣಕೈ ಹತ್ತಿರ ಗೋಲಿ ಗಾತ್ರದ ಗಂಟು ಇದೆ. ಉರ್ದು, ಹಿಂದಿ, ಅಸ್ಸಾಂ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ಸುಳಿವು ಸಿಕ್ಕಲ್ಲಿ ಭದ್ರಾವತಿ ಹಳೆಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9620348689 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ತಾಯಿ, ಮಗಳು ಕಾಣೆ:
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಗೆ, ಚಿಲಕಾದ್ರಿ ವಾಸಿ ಅವಿನಾಶ್ ಎಂಬುವವರ ಪತ್ನಿ 32 ವರ್ಷದ ವೀಣಾ ಎಂಬುವವರು ತನ್ನ 7 ವರ್ಷದ ಮಗಳು ಚೈತನ್ಯಳನ್ನು ಕರೆದುಕೊಂಡು ಡಿ. 3 ರಂದು ಮನೆಯಿಂದ ಎಂಗೆಜ್‌ಮೆಂಟ್‌ಗೆ ಹೋದವರು ಈವರೆಗೆ ಮನೆಗೆ ವಾಪಾಸ್ಸಾಗಿರುವುದಿಲ್ಲ.
ವೀಣಾರ ಚಹರೆ; 5 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಎಡಕಣ್ಣಿನ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ. ಮನೆಯಿಂದ ಹೋಗುವಾಗ ಆಕಾಶ್ ನೀಲಿ ಬಣ್ಣದ ಡ್ರೆಸ್ ಧರಿಸಿರುತ್ತರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಚೈತನ್ಯಾಳ ಚಹರೆ: 3.5 ಅಡಿ ಎತ್ತರ, ಕೋಲುಮುಖ, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಫ್ರಾಕ್ ಧರಿಸಿರುತ್ತಾರೆ. ಈ ತಾಯಿ-ಮಗಳ ಕುರಿತು ಸುಳಿವು ದೊರೆತಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.





Leave a comment