Home ದಾವಣಗೆರೆ ಆರ್ ಎಸ್ ಎಸ್ ಮುಸ್ಲಿಂ ವಿರೋಧಿ ಅಲ್ಲ, ತಪ್ಪು ಗ್ರಹಿಕೆ ಹೋಗಬೇಕು: ಮೋಹನ್ ಭಾಗವತ್
ದಾವಣಗೆರೆನವದೆಹಲಿಬೆಂಗಳೂರು

ಆರ್ ಎಸ್ ಎಸ್ ಮುಸ್ಲಿಂ ವಿರೋಧಿ ಅಲ್ಲ, ತಪ್ಪು ಗ್ರಹಿಕೆ ಹೋಗಬೇಕು: ಮೋಹನ್ ಭಾಗವತ್

Share
Share

ನವದೆಹಲಿ: ಆರ್‌ಎಸ್‌ಎಸ್ ಯಾವುದೇ ಮುಸ್ಲಿಂ ವಿರೋಧಿ ಭಾವನೆಯನ್ನು ಹೊಂದಿರುವ ಸಂಘಟನೆಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದ್ದು, ಆರ್‌ಎಸ್‌ಎಸ್ ಯಾವಾಗಲೂ ಪಾರದರ್ಶಕತೆಯಿಂದ ಕೆಲಸ ಮಾಡಿದೆ. ಸಂದೇಹವಿರುವ ಯಾರಾದರೂ ಅದನ್ನು ಪರಿಶೀಲಿಸಬಹುದು ಎಂದಿದ್ದಾರೆ.

“ನಾವು ಮುಸ್ಲಿಂ ವಿರೋಧಿಗಳು ಎಂಬ ತಪ್ಪು ಗ್ರಹಿಕೆ ಇದೆ. ಇದು ಸರಿಯಲ್ಲ. ನಾನು ಹೇಳಿದಂತೆ, ಆರೆಸ್ಸೆಸ್ ಕೆಲಸ ಪಾರದರ್ಶಕವಾಗಿರುತ್ತದೆ. ನೀವು ಯಾವಾಗ ಬೇಕಾದರೂ ಬಂದು ನೋಡಬಹುದು. ಅಂತಹದ್ದೇನಾದರೂ ನಡೆಯುವುದನ್ನು ನೀವು ನೋಡಿದರೆ, ನೀವು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು ಎಂದಿದ್ದಾರೆ.

ಮುಸ್ಲಿಂ ವಿರೋಧಿಗಳಲ್ಲ ಎಂದರೂ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ನೀವು ನಮ್ಮನ್ನು ನೋಡಿದಾಗ ನಿಮ್ಮ ಅಭಿಪ್ರಾಯಗಳನ್ನು ಬದಲಾಯಿಸಬಹುದು. (ಆರ್‌ಎಸ್‌ಎಸ್ ಬಗ್ಗೆ) ಅರ್ಥಮಾಡಿಕೊಳ್ಳಲು ಬಹಳಷ್ಟಿದೆ, ಆದರೆ ನೀವು ಅರ್ಥಮಾಡಿಕೊಳ್ಳಲು ಬಯಸದಿದ್ದರೆ, ಯಾರೂ ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಮೋಹನ್ ಭಾಗವತ್ ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles