Home ಕ್ರೈಂ ನ್ಯೂಸ್ ಭ್ರಷ್ಟಾಚಾರದ ಕಲ್ಯಾಣವೇ ಹೊರತು, ಸಮಾಜ ಕಲ್ಯಾಣವಲ್ಲ: ಹೆಚ್. ಸಿ. ಮಹಾದೇವಪ್ಪ ಇದೇನಿದು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಭ್ರಷ್ಟಾಚಾರದ ಕಲ್ಯಾಣವೇ ಹೊರತು, ಸಮಾಜ ಕಲ್ಯಾಣವಲ್ಲ: ಹೆಚ್. ಸಿ. ಮಹಾದೇವಪ್ಪ ಇದೇನಿದು?

Share
Share

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಡಲಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ 2023–24 ರಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ದಸರಾ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಹಣದಿಂದಲೇ ರೂ. 47 ಲಕ್ಷ ಖರ್ಚು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಮಹದೇವಪ್ಪ ರವರೇ….ಇದು ಸಮಾಜ ಕಲ್ಯಾಣವೇ? ಅಥವಾ ಪರಿಶಿಷ್ಟರ ಕಲ್ಯಾಣದ ಹೆಸರಿನಲ್ಲಿ ಸಾರ್ವಜನಿಕ ಹಣದ ದುರುಪಯೋಗವೇ? ಉತ್ತರ ನೀಡಿ ಎಂದು ಪ್ರಶ್ನಿಸಿದೆ.

ಪರಿಶಿಷ್ಟ ವರ್ಗಗಳ ಬದುಕನ್ನು ಸುಧಾರಿಸುವ ಬದಲು, ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಭ್ರಷ್ಟಾಚಾರದ ಕಲ್ಯಾಣವೇ ಹೊರತು, ಸಮಾಜ ಕಲ್ಯಾಣವಲ್ಲ..!! ಎಂದು ಕಿಡಿಕಾರಿದೆ.

Share

Leave a comment

Leave a Reply

Your email address will not be published. Required fields are marked *