Home ದಾವಣಗೆರೆ ಮನರೇಗಾ ಮೇಲೆ ಬುಲ್ಡೋಜರ್‌ ಓಡಿಸಿರುವ ಕೇಂದ್ರ ಸರ್ಕಾರದ ದಾಳಿ ಎದುರಿಸಲು ಸಿದ್ಧ: ಬಿ. ಕೆ. ಹರಿಪ್ರಸಾದ್
ದಾವಣಗೆರೆನವದೆಹಲಿಬೆಂಗಳೂರು

ಮನರೇಗಾ ಮೇಲೆ ಬುಲ್ಡೋಜರ್‌ ಓಡಿಸಿರುವ ಕೇಂದ್ರ ಸರ್ಕಾರದ ದಾಳಿ ಎದುರಿಸಲು ಸಿದ್ಧ: ಬಿ. ಕೆ. ಹರಿಪ್ರಸಾದ್

Share
Share

ಬೆಂಗಳೂರು: ಗ್ರಾಮೀಣ ದುಡಿಯುವ ಜನರ ಕ್ರಾಂತಿಕಾರಿ ಯೋಜನೆಯಾಗಿರುವ “ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ”ಯಿಂದ “ಮಹಾತ್ಮಾ ಗಾಂಧಿ” ಅವರ ಹೆಸರನ್ನೇ ಕೈ ಬಿಡುವ ನರೇಂದ್ರ ಮೋದಿ ಸರ್ಕಾರದ ದ್ವೇಷ ನಿರ್ಧಾರದ ಕುರಿತು, ದೇಶದ ಜನತೆಗೆ ನನ್ನ ಅಚ್ಚುಮೆಚ್ಚಿನ ನಾಯಕಿ, ಕಾಂಗ್ರೆಸ್ ಸಂಸದೀಯ ಸಮಿತಿ ಅಧ್ಯಕ್ಷರೂ ಆಗಿರುವ ಶ್ರೀಮತಿ ಸೋನಿಯಾ ಗಾಂಧಿ ಅವರು ಅತ್ಯಂತ ಭಾವನಾತ್ಮಕ ಸಂದೇಶವನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

ಯುಪಿಯ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ 20 ವರ್ಷಗಳ ಹಿಂದೆ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಮಹತ್ತರ ಉದ್ದೇಶದಿಂದ ಸಂಸತ್ತಿನಲ್ಲಿ ಅವಿರೋಧವಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾನೂನನ್ನು ಜಾರಿಗೆ ತಂದ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದೇಶದ ಬಡಜನರು, ದಲಿತರು, ಶೋಷಿತರು, ಹಿಂದುಳಿದವರು ಸೇರಿದಂತೆ ವಂಚಿತ ಸಮುದಾಯದ ಕೋಟ್ಯಾಂತರ ದುಡಿಯುವ ಜನರಿಗೆ ಮನರೇಗಾ ಉದ್ಯೋಗ ನೀಡುವ ಮೂಲಕ ಜೀವನೋಪಾಯದ ಭರವಸೆಯಾಗಿದೆ. ಉದ್ಯೋಗಕ್ಕಾಗಿ ಜನರು, ತಮ್ಮ ನೆಲ, ಊರು, ಕುಟುಂಬವನ್ನೇ ತೊರೆದು ವಲಸೆ ಹೋಗುತ್ತಿದ್ದ ಜನರ ಪರಿಸ್ಥಿತಿ ಮನರೇಗಾದಿಂದ ನಿಲ್ಲುವಂತಾಯಿತು ಎಂದಿದ್ದಾರೆ.

ಮನರೇಗಾ ಮೂಲಕ ಮಹಾತ್ಮ ಗಾಂಧೀಜಿಯ ಕನಸಿನ ಗ್ರಾಮಸ್ವರಾಜ್ಯದ ಭಾರತದತ್ತ ಒಂದು ದೃಢ ಹೆಜ್ಜೆಯಿಡಲು ಸಾಧ್ಯವಾಯಿತು. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಶಕ್ತಿಯೂ ದೊರಕಿತು. ಉದ್ಯೋಗ ನೀಡುವುದು ಕೇವಲ‌ ಕಾರ್ಯಕ್ರಮವಾಗದೆ ಕಾನೂನನ್ನಾಗಿ, ಜನರ ಹಕ್ಕನ್ನಾಗಿ ಸಂಸತ್ತು ಅಧಿಕಾರ ನೀಡಿತು. ಕೋರೊನಾ ಸಂದರ್ಭದಲ್ಲಿ ಮನರೇಗಾ ಬಡವರ ಪಾಲಿಗೆ ಸಂಜೀವಿನಿಯೇ ಆಗಿತ್ತು ಎಂದು ಹೇಳಿದ್ದಾರೆ.

ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರವು ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು, ಬಡವರು ಮತ್ತು ವಂಚಿತರ ಹಿತವನ್ನು ಕಡೆಗಣಿಸಿ, ಮನರೇಗಾವನ್ನು ದುರ್ಬಲಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ದುರದೃಷ್ಟವಶಾತ್, ಮೋದಿ ಸರ್ಕಾರ ಮನರೇಗಾದ ಮೇಲೆ ಈಗಂತೂ ಬುಲ್ಡೋಜರ್‌ ನಡೆಸಿದೆ. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿದಷ್ಟೇ ಅಲ್ಲ, ಯಾವುದೇ ಚರ್ಚೆ ಇಲ್ಲದೆ, ಸಲಹೆಯೂ ಇಲ್ಲದೆ, ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮನಬಂದಂತೆ ಮನರೇಗಾದ ರೂಪ–ಸ್ವರೂಪವನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಮನರೇಗಾ ಜಾರಿ ಮಾಡುವಲ್ಲಿ ಯುಪಿಎ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ಮಹತ್ತರ ಪಾತ್ರವನ್ನು ಪಕ್ಷ ಎಂದೂ ದುರಪಯೋಗ ಮಾಡಿಕೊಳ್ಳಲಿಲ್ಲ. ಜನಹಿತ ಹಾಗೂ ದೇಶದ ಹಿತದ ಜನಪರ ಯೋಜನೆಯಾಗಿಯೇ ಭಾವಿಸಲಾಯಿತು. ಆದರೆ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರ ದೇಶದ ಕೋಟ್ಯಾಂತರ ರೈತರು, ಕಾರ್ಮಿಕರು ಮತ್ತು ಭೂಹೀನ ಗ್ರಾಮೀಣ ಬಡವರ ಹಿತದ ಮೇಲೆ ದಾಳಿ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಈ ದಾಳಿಯನ್ನು ಎದುರಿಸಲು ನಾವು ಎಲ್ಲರೂ ಸಿದ್ಧರಾಗಿದ್ದೇವೆ. 20 ವರ್ಷಗಳ ಹಿಂದೆ ನಮ್ಮ ದೇಶದ ಬಡ ಸಹೋದರ–ಸಹೋದರಿಯರಿಗೆ ಉದ್ಯೋಗದ ಹಕ್ಕು ದೊರಕಿಸಿಕೊಡುವ ಹೋರಾಟದಲ್ಲಿ ನಾನೂ ಭಾಗವಹಿಸಿದ್ದೆ. ಈ ಕಪ್ಪು ಕಾಯ್ದೆಯ ವಿರುದ್ಧ ಹೋರಾಡಲು ನಾನು ಇಂದೂ ಕೂಡ ಸಂಪೂರ್ಣವಾಗಿ ಬದ್ಧಳಾಗಿದ್ದೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ನನ್ನಂತೆಯೇ ಕಾಂಗ್ರೆಸ್‌ನ ಎಲ್ಲಾ ನಾಯಕರು ಮತ್ತು ಲಕ್ಷಾಂತರ ಕಾರ್ಯಕರ್ತರು ನಿಮ್ಮೊಂದಿಗೆ ನಿಂತಿದ್ದಾರೆ ಎಂದು ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles