ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ರಸ್ತೆಯಲ್ಲಿ ಹೋಗೋರಿಗೆ ಬೀಳ್ತಿತ್ತು ಚಟೀರ್, ಪಟೀರ್: 30ಕ್ಕೂ ಹೆಚ್ಚು ಜನರಿಗೆ ಯಾಕ್ ಬಿತ್ತು ಹೊಡ್ತಾ…. ಕೊನೆಗೇನಾಯ್ತು ಗೊತ್ತಾ…?

On: July 28, 2023 12:28 PM
Follow Us:
HUCHHATA
---Advertisement---

SUDDIKSHANA KANNADA NEWS/ DAVANAGERE/ DATE:28-07-2023

ದಾವಣಗೆರೆ (Davanagere): ಬೆಳ್ಳಂಬೆಳಿಗ್ಗೆ ವಾಯು ವಿಹಾರ ಮಾಡುವವರು, ಬೈಕ್ ನಲ್ಲಿ ಹೋಗುವವರು, ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಶಾಕ್ ಕಾದಿತ್ತು. ವ್ಯಕ್ತಿಯೊಬ್ಬ ಬಂದು ಮುಖ ನೋಡುತ್ತಾ ಇದ್ದಕ್ಕಿದ್ದ ಹಾಗೆ ಚಟೀರ್, ಪಟೀರ್ ಹೊಡೆತಾ ಕೊಡ್ತಾ ಇದ್ದ. ಕೆಲವೊಬ್ಬರು ಮಾನಸಿಕ ಅಸ್ವಸ್ಥನಿರಬಹುದು ಎಂದುಕೊಂಡು ಸುಮ್ಮನಾದರು. ಅಲ್ಲಿಂದ ಓಡಿಸಿದರು. ಆದ್ರೆ, ಎಲ್ಲೇ ಹೋದರೂ ಇದೇ ರೀತಿಯ ವರ್ತನೆ ಮಾಡ್ತಾ ಇದ್ದ. ನೋಡುವ ತನಕ ನೋಡಿದ ಜನರು ಆಮೇಲೆ ಸಖತ್ತಾಗಿಯೇ ಗೂಸಾ ಕೊಟ್ಟರು.

ಈ ಘಟನೆ ನಡೆದಿದ್ದು ದಾವಣಗೆರೆ (Davanagere) ಕೆ. ಬಿ. ಬಡಾವಣೆಯ ಲಾಯರ್ ರಸ್ತೆಯಲ್ಲಿ. ನಾಯ್ಡು ಹೊಟೇಲ್ ಎದುರಿನ ಗುಳ್ಳಮ್ಮನ ದೇವಸ್ಥಾನದಲ್ಲಿ ಬೆಳಿಗ್ಗೆ ಕ್ಯಾನ್ ನಲ್ಲಿ ನೀರು ತೆಗೆದುಕೊಂಡು ಹೋಗಲು ಬಂದಿದ್ದರು. ಬೆಳ್ಳಂಬೆಳಿಗ್ಗೆಯೇ ಬಂದ ವ್ಯಕ್ತಿಯೊಬ್ಬ ನೋಡ್ತಾ ನೋಡ್ತಾನೇ ಕಪಾಳಕ್ಕೆ ಬಾರಿಸಿಬಿಟ್ಟ. ಅದರಲ್ಲಿಯೂ ಕೆಲ ಅಮಾಯಕರು ಅಲ್ಲಿಂದ ಕಾಲ್ಕಿತ್ತರು.

ಸುಮಾರು 30ಕ್ಕೂ ಹೆಚ್ಚು ಜನರಿಗೆ ಇದೇ ರೀತಿ ಕೆನ್ನೆಗೆ ಬಾರಿಸಿದ್ದಾನೆ. ಆಮೇಲೆ ಲಾಯರ್ ರಸ್ತೆಯಲ್ಲಿನ ಟೀ ವ್ಯಾಪಾರಿಗೂ ಕೆನ್ನೆಗೆ ಬಾರಿಸಿದ್ದಾನೆ. ಅವರು ಸಹ ತಾಳ್ಮೆ ವಹಿಸಿ ಅಲ್ಲಿಂದ ಕಳುಹಿಸಿದ್ದಾರೆ. ಮತ್ತೆ ಲಾಯರ್ ರಸ್ತೆಗೆ ಬಂದ ಬೈಕ್ ನಲ್ಲಿ ಹೋಗುವ ಹಿಂಬದಿ ಕುಳಿತವರಿಗೂ ತಲೆಗೆ ಬಾರಿಸಿದ್ದಾನೆ. ಇದೇ ರೀತಿಯ ವರ್ತನೆ ತೋರಿದ ವ್ಯಕ್ತಿಗೆ ಸಖತ್ತಾಗಿಯೇ ಪಾಠ ಕಲಿಸಿದ್ದಾರೆ.

ಜನರ ಕಪಾಳಕ್ಕೆ ಬಾರಿಸುತ್ತಿದ್ದ ವ್ಯಕ್ತಿ
ಜನರ ಕಪಾಳಕ್ಕೆ ಬಾರಿಸುತ್ತಿದ್ದ ವ್ಯಕ್ತಿ

ಈ ಸುದ್ದಿಯನ್ನೂ ಓದಿ:

Rain: ಮಳೆ ಮಳೆ… ಮಳೆನಾಡಾದ ಬೆಣ್ಣೆನಗರಿ, ಈ ಕ್ರಮಗಳ ಅನುಸರಿಸಿದರೆ ರೋಗಗಳಿಂದ ದೂರ ದೂರ ಗ್ಯಾರಂಟಿ… ಹಾಗಾದ್ರೆ ಓದಿ ಅನುಸರಿಸಿ ತಡಮಾಡ್ಬೇಡಿ…

ಕೆಲ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನೋಡ್ತಾ ಇದ್ದ. ಅವರಿಗೂ ಹೊಡೆಯಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಕೆಲ ಯುವಕರು ಆತನನ್ನು ಹಿಡಿದಿದ್ದಾರೆ. ಅವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾತ್ರವಲ್ಲ, ತನ್ನನ್ನು ಬಿಟ್ಟುಬಿಡಿ ತಾನೇನೂ ತಪ್ಪು ಮಾಡಿಲ್ಲ ಎಂದು ಬಡಾಬಡಾಯಿಸಿದ್ದಾನೆ. ಹೊಡೆತ ತಿಂದ ಕೆಲವರು ಅಲ್ಲಿಗೆ ಬಂದು ಆತನ ಹುಚ್ಚಾಟ ವಿವರಿಸಿದ್ದಾರೆ. ಆಗ ಅಲ್ಲಿದ್ದವರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಆ ಬಳಿಕವೂ ಬಡಾಬಡಾಯಿಸುತ್ತಿದ್ದ. ಬಿಟ್ಟುಬಿಡಿ, ನಾನು ಹೋಗಬೇಕು. ನಾನು ಯಾರಿಗೂ ಹೊಡೆದಿಲ್ಲ ಎನ್ನತೊಡಗಿದ್ದಾನೆ.

ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರಿಗೂ ಏನೇನೋ ಹೇಳಲು ಹೊರಟ. 112ಗೆ ಕರೆ ಮಾಡಿ ತಿಳಿಸಿದ್ದರಿಂದ ಸ್ಥಳಕ್ಕೆ ಪೊಲೀಸ್ ವಾಹನದೊಂದಿಗೆ ಬಂದ ಪೊಲೀಸ್ ಸಿಬ್ಬಂದಿ ನೀನು ಎಲ್ಲಿಯವನು? ಇಲ್ಲಿಗೆ ಯಾಕೆ ಬಂದೆ? ಯಾಕೆ ಜನರಿಗೆ ಹೊಡೆಯುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಆಗ ನನ್ನ ಹೆಸರು ನಿರಂಜನ್. ಚಿಕ್ಕಮಗಳೂರು ಜಿಲ್ಲೆಯ ಕಡೂರಿನವನು ಎಂದಿದ್ದಾನೆ.

ಆಮೇಲೆ ನಾನು ಉಪನ್ಯಾಸಕ ಎಂದು ಹೇಳತೊಡಗಿದ್ದ. ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಅಲ್ಲಿಯೂ ಇದೇ ರೀತಿಯ ದುರ್ವರ್ತನೆ ತೋರಿದ್ದಾನೆ. ಅವರ ಕೆನ್ನೆಗೂ ಬಾರಿಸಿದ್ದಾನೆ. ಪೊಲೀಸರು ಎಲ್ಲಿಯವನು ಹೇಳುತ್ತೀಯೋ ಇಲ್ಲವೋ ಎಂದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದರು. ಆಗ ನಾನು ಇಲ್ಲಿಯವನೇ ಎಂದಿದ್ದಾನೆ.

ಸ್ಥಳದಲ್ಲಿ ಜಮಾಯಿಸಿದ್ದವರು ಸರ್, ಈತ ರಸ್ತೆಯಲ್ಲಿ ಹೋಗುವವರ ಕೆನ್ನೆಗೆ ಸುಖಾಸುಮ್ಮನೆ ಹೊಡೆದಿದ್ದಾನೆ. ಹುಚ್ಚನಂತೆ ವರ್ತಿಸುತ್ತಿದ್ದಾನೆ. ಒಮ್ಮೊಮ್ಮೆ ಏನೇನೋ ಹೇಳುತ್ತಾನೆ. ಸುಮಾರು 30ಕ್ಕೂ ಹೆಚ್ಚು ಜನರಿಗೆ ಇದೇ ರೀತಿಯ ಕಾಟ ಕೊಟ್ಟಿದ್ದಾನೆ ಎಂದು ಮಾಹಿತಿ ನೀಡಿದರು. ಆಗ ಪೊಲೀಸರು ಯಾಕೆ ಈ ರೀತಿ ವರ್ತನೆ ಮಾಡುತ್ತೀಯಾ ಎಂದಿದ್ದಕ್ಕೆ ನಾನು ಜಗಳವಾಡಿಕೊಂಡಿದ್ದೆ. ಅವರಿಗಷ್ಟೇ ಬಾರಿಸಿದೆ. ಬೇರೆ ಯಾರಿಗೂ ಹೊಡೆದಿಲ್ಲ ಎಂದು ಸುಳ್ಳ ಹೇಳತೊಡಗಿದ. ಆಗ ಸ್ಥಳದಲ್ಲಿದ್ದವರು ಸುಳ್ಳು ಹೇಳುವ ಈತನನ್ನು ಠಾಣೆಗೆ ಕರೆದುಕೊಂಡು ಹೋಗಿ. ಆಗ ಸತ್ಯ ಬಾಯಿಬಿಡುತ್ತಾನೆ ಎಂದಿದ್ದಾರೆ.

ಆರಂಭದಲ್ಲಿ ಪೊಲೀಸರಿಗೂ ಬಗ್ಗದ ಅಸಾಮಿ ಆ ಬಳಿಕ ಪೊಲೀಸ್ ಭಾಷೆಯಲ್ಲಿ ಕೇಳಿದಾಗ ಮೆತ್ತಗಾದ. ಒಟ್ಟಿನಲ್ಲಿ ಬೆಳಿಗ್ಗೆ ಈತ ತೋರಿದ ವರ್ತನೆಯಿಂದ ಕೆಲವರು ಬೆಸ್ತು ಬಿದ್ದರೆ, ಮತ್ತೆ ಕೆಲವರು ಆತನಿಗೆ ಗೂಸಾ ಸಹ ಕೊಟ್ಟರು ಎನ್ನಲಾಗಿದೆ.
ಕೆ. ಬಿ. ಬಡಾವಣೆಯಲ್ಲಿ ನಡೆದ ಈ ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಪೊಲೀಸರು ಬಂದು ಜೀಪಿನಲ್ಲಿ ಕರೆದುಕೊಂಡು ಹೋದ ಬಳಿಕ ನಿರುಮ್ಮಳರಾದರು.

Davanagere News, Davanagere News Updates, Davanagere Suddi, Davanagere People Fear, Davanagere Suddi Update, Davanagere

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment