Home ಕ್ರೈಂ ನ್ಯೂಸ್ ಷಡ್ಯಂತ್ರದಿಂದ 74,000 ಮತಗಳ ಅಮಾನ್ಯಗೊಳಿಸಿ ಡಾ. ಬಿ. ಆರ್. ಅಂಬೇಡ್ಕರ್ ರನ್ನ 14,000 ಮತಗಳಿಂದ ಸೋಲಿಸಿದ್ದು “ವೋಟ್ ಚೋರಿ” ಅಲ್ಲವೇ ರಾಹುಲ್ ಗಾಂಧಿ?
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಷಡ್ಯಂತ್ರದಿಂದ 74,000 ಮತಗಳ ಅಮಾನ್ಯಗೊಳಿಸಿ ಡಾ. ಬಿ. ಆರ್. ಅಂಬೇಡ್ಕರ್ ರನ್ನ 14,000 ಮತಗಳಿಂದ ಸೋಲಿಸಿದ್ದು “ವೋಟ್ ಚೋರಿ” ಅಲ್ಲವೇ ರಾಹುಲ್ ಗಾಂಧಿ?

Share
Share

SUDDIKSHANA KANNADA NEWS/DAVANAGERE/DATE:12_12_2025

ಬೆಂಗಳೂರು: ಮತಗಳ್ಳತನ ಎಂಬ ಕಪಟ ನಾಟಕವಾಡುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೇ “ವೋಟ್‌ ಚೋರಿ” ಎಂಬುದು ಕಾಂಗ್ರೆಸ್‌ನ ಅಕ್ರಮಕ್ಕೆ ಹುಟ್ಟಿದ “ಪಾಪದ ಕೂಸು” ಎಂಬುದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ದಾಖಲಾಗಿರುವುದು ಸ್ಪಷ್ಟ ಎಂದು ಬಿಜೆಪಿ ಕಿಡಿಕಾರಿದೆ.

1952ರಲ್ಲಿ ನಡೆದ ದೇಶದ ಮೊದಲ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು, ನಿಮ್ಮ ಮುತ್ತಾತ ನೆಹರು ನೇತೃತ್ವದ ಕಾಂಗ್ರೆಸ್‌ ಎಂಬುದು ಕೂಡ ಜಗಜ್ಜಾಹೀರು. ಅಂದಿನ ಚುನಾವಣೆಯಲ್ಲಿ 74 ಸಾವಿರ ವೋಟ್‌ಗಳನ್ನು ಷಡ್ಯಂತ್ರದಿಂದ ಅಮಾನ್ಯಗೊಳಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರನ್ನು 14 ಸಾವಿರ ಮತಗಳಿಂದ ಸೋಲಿಸಿದ್ದು “ವೋಟ್‌ ಚೋರಿ” ಅಲ್ಲವೇ ಮಿಸ್ಟರ್‌ ರಾಹುಲ್‌ ಗಾಂಧಿ ಎಂದು ಪ್ರಶ್ನಿಸಿದೆ.

ದಲಿತ ಸಮುದಾಯದ ಮಹಾನ್ ನಾಯಕ ಅಂಬೇಡ್ಕರ್‌ ಅವರನ್ನೇ “ವೋಟ್‌ ಚೋರಿ”ಯಿಂದ ಸೋಲಿಸಿ ದ್ರೋಹ ಬಗೆದಿದ್ದು, 1971ರ ಚುನಾವಣೆಯಲ್ಲಿ ನಿಮ್ಮ ಅಜ್ಜಿ ಇಂದಿರಾ ಗಾಂಧಿ ಅವರು “ವೋಟ್‌ ಚೋರಿ” ಮೂಲಕ ಗೆದ್ದಿರುವುದನ್ನು ಅಲಹಾಬಾದ್ ಹೈಕೋರ್ಟ್ ಅನರ್ಹಗೊಳಿಸಿದ್ದನ್ನು ಅರಿಯದಂತೆ ನಾಟಕವಾಡುತ್ತಿರುವುದು ದೇಶದ ಜನತೆಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದೆ.

ರಾಹುಲ್ ಗಾಂಧಿ ಅವರೇ, ಸುಳ್ಳಿನಕೋಟೆ ಸತ್ಯದ ಎದುರು ಬೀಳುವುದು ಗ್ಯಾರಂಟಿ.! ಎಂದು ಬಿಜೆಪಿ ಟ್ವೀಟ್ ಮಾಡಿದೆ.

Share

Leave a comment

Leave a Reply

Your email address will not be published. Required fields are marked *