ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Marriage: ಅನಾಥೆಯರ ಬಾಳಲ್ಲಿ ಮಾಂಗಲ್ಯಂ ತಂತು ನಾನೇನಾ.. ರಾಜ್ಯ ಮಹಿಳಾ ನಿಲಯದಲ್ಲಿ ಪುರೋಹಿತರಿಲ್ಲದ ಮದುವೆ ಹೇಗೆ ನಡೆಯಿತು…?

On: July 26, 2023 1:24 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:26-07-2023

ದಾವಣಗೆರೆ: ಅವರಿಬ್ಬರು ಅನಾಥೆಯರು. ರಾಜ್ಯ ವಸತಿ ನಿಲಯದಲ್ಲಿ ಆಶ್ರಯ ಪಡೆದವರು ಈಗ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಯಾರೂ ಇಲ್ಲ ಎಂಬ ಕೊರಗು ನೀಗಿದೆ. ಈಗ ಗಂಡನ ಮನೆಗೆ ಹೊರಟರು. ಸಂಬಂಧವಿಲ್ಲದೇ
ಯಾರೂ ಇಲ್ಲದೇ ಬದುಕಿದವರು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟು ನವಬದುಕು ಕಂಡುಕೊಂಡ ಅನಾಥ ಜೀವಗಳ ಸ್ಟೋರಿ ಇದು. ಸಂಪ್ರದಾಯವನ್ನು ಬಿಟ್ಟು ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಜಾತಿ, ಕುಲ, ಮತಗಳೆನ್ನದೇ ಸಿಂಪಲ್ ಆಗಿ ಮದುವೆ (Marriage) ನಡೆಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿನ ಇಂಡಸ್ಟ್ರಿಯಲ್ ಏರಿಯಾದ ಶ್ರೀರಾಮನಗದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಈ ವಿವಾಹ (Marriage) ಮಹೋತ್ಸವನದಲ್ಲಿ ಆಡಂಬರ ಇರಲಿಲ್ಲ. ಮದುವೆ (Marriage) ಗಿಜಿ ಗಿಜಿ ಇದ್ದರೂ ಸರಳವಾಗಿ ನೆರವೇರಿತು.

ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ. ಅರುಣ್ ಅವರು ಆಗಮಿಸಿ ವಧುವರರಿಗೆ ಆಶೀರ್ವದಿಸಿದರು.

ಈ ಸುದ್ದಿಯನ್ನೂ ಓದಿ: ಮದ್ರಾಸ್ ಐ ವೈರಾಣುಗೆ ಪಡಬೇಕಿಲ್ಲ ಭಯ: ಈ ಮುನ್ನೆಚ್ಚರಿಕೆ ವಹಿಸಿದರೆ ಸಾಕು

ರಾಜ್ಯ ಮಹಿಳಾ ನಿಲಯದಲ್ಲಿ 9 ವರ್ಷಗಳ ಕಾಲ ಆಶ್ರಯ ಪಡೆದ 30 ವರ್ಷದ ರಮ್ಯಾ ಮತ್ತು 34 ವರ್ಷದ ವಿನೋದಾ ವಿಶೇಷ ರೀತಿಯಲ್ಲಿ ಸಾಂಪ್ರದಾಯವನ್ನು ಕೈಬಿಟ್ಟು, ಪುರೋಹಿತರನ್ನು ಕರೆಸದೇ ಸರಳ ವಿಧಾನದಲ್ಲಿ ವಿವಾಹ (Marriage)
ಮಹೋತ್ಸವ ನಡೆಯಿತು.

ಆಶ್ರಿತರು ತಮ್ಮ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳಿಗೆ ಒಳಗಾಗಿ ನಮ್ಮ ಸಂಸ್ಥೆಗೆ ಬಂದು ಸಣ್ಣ ಪುಟ್ಟ ತರಬೇತಿ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಇಬ್ಬರೂ ಮಹಿಳೆಯರು ಸ್ವ-ಇಚ್ಛೆಯಿಂದ ಸಂಸ್ಥೆಯಿಂದಲೇ ವಿವಾಹವಾಗಿ ಬಿಡುಗಡೆಯಾಗಲು
ಒಪ್ಪಿದ್ದರಿಂದ ಪೊಲೀಸ್ ವಿಚಾರಣೆ ಮೂಲಕ ವರರ ವ್ಯಕ್ತಿತ್ವ ಹಾಗೂ ಸ್ಥಳ ಪರಿಶೀಲನೆ ನಡೆಸಿದ ನಂತರ ವಿವಾಹದ ಮಾಹಿತಿಯನ್ನು ಇಲಾಖಾ ನಿರ್ದೇಶಕರಿಗೆ ರವಾನಿಸಲಾಗಿದೆ. ಅವರ ಅನುಮೋದನೆ ಹಾಗೂ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ವಿವಾಹ (Marriage)ವನ್ನು ಏರ್ಪಡಿಸಲಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಉಂಬಳಮನೆಯ ನಿವಾಸಿ ನಾಗರಾಜ ಪರಮೇಶ್ವರ ಹೆಗಡೆ ಎಂಬುವವರು ಸಂಸ್ಥೆಯ ನಿವಾಸಿ ರಮ್ಯಳನ್ನು ವರಿಸಿದರು. ಇವರು ಸ್ವಂತ ಅಡಿಕೆ ತೋಟದ ಕೃಷಿ ಚಟುವಟಿಕೆಯಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ಕ್ಯಾಟರಿಂಗ್ ಕೆಲಸ ಮಾಡುತ್ತಾರೆ. ಸಂಸ್ಥೆಯ ನಿವಾಸಿ ವಿನೋದಾ ಅವರನ್ನು ಹರಿಹರ ತಾಲ್ಲೂಕಿನ ದೇವರಬೆಳಕೆರೆ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಯು.ಎಂ ವರಿಸಿದರು. ಇವರು ತಮ್ಮದೇ ಆದ ವ್ಯವಸಾಯ ಭೂಮಿಯನ್ನು ಹೊಂದಿದ್ದು, ಆರ್ಥಿಕವಾಗಿ ಸಧೃಡವಾಗಿದ್ದಾರೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಕೆ ಪ್ರಕಾಶ್, ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸೌಮ್ಯಶ್ರೀ, ರಾಜ್ಯ ಮಹಿಳಾ ನಿಲಯ, ದಾವಣಗೆರೆ ಅಧೀಕ್ಷಕಿ ಶಕುಂತಲಾ ಬಿ ಕೋಳೂರ ಮದುವೆ (Marriage)ಗೆ ಸಾಕ್ಷಿಯಾದರು.

Davanagere News, Davanagere Different Marriage, Marriage, Latest News, Davanagere Latest News, Davanagere News Updates

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment