SUDDIKSHANA KANNADA NEWS/DAVANAGERE/DATE:08_12_2025
ಬೆಳಗಾವಿ: ಬಿಜೆಪಿ ಕೆಲ ಪದಾಧಿಕಾರಿಗಳು ಮತ್ತು ಮುಖಂಡರು ಬಡವರ ಅಕ್ಕಿ ಕದ್ದು ವಿದೇಶಕ್ಕೆ ರಫ್ತು ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು ಬಡವರ ಹಸಿವು ನೀಗಿಸಲು ಗ್ಯಾರಂಟಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಬಿಜೆಪಿಯಲ್ಲಿರುವ ಕೆಲವು ಪದಾಧಿಕಾರಿಗಳು, ಮುಖಂಡರು, ಬಡವರ ಅಕ್ಕಿಯನ್ನು ಕಳ್ಳತನ ಮಾಡಿ ವಿದೇಶಕ್ಕೆ ರಫ್ತು ಮಾಡಿದ್ದಾರೆ ಎಂದು ಆರೋಪಿಸಿದರು.
ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಐಡಿ ವಹಿಸಿದಾಗ ಅಚ್ಚರಿಯ ಫಲಿತಾಂಶ ಹೊರಬಿದ್ದಿತ್ತು. ಆದರೆ ಇದರ ಕುರಿತು ಬಿಜೆಪಿಗರು ದನಿ ಎತ್ತದಿರುವುದು ಅಚ್ಚರಿ ಎಂದು ಕಿಡಿಕಾರಿದರು.
ಯಾದಗಿರಿ ಅಕ್ಕಿ ಕಳ್ಳತನದಲ್ಲಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ ಫಾರ್ಮ್ ಪಡೆದವರು ಸಿಕ್ಕಿಬಿದ್ದಿದ್ದಾರೆ. ಆದರೆ ಬಿಜೆಪಿ ನಾಯಕರು ಇದರ ಬಗ್ಗೆ ತುಟಿ ಬಿಚ್ಚದಿರುವುದು ನಾಚಿಕೆಗೇಡು ಎಂದು ಟೀಕಾಪ್ರಹಾರ ನಡೆಸಿದ್ದಾರೆ.





Leave a comment