Home ನವದೆಹಲಿ ಹೈಕಮಾಂಡ್ ಹೇಳಿದಾಗ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ: ಸಿಎಂ ಸಿದ್ದರಾಮಯ್ಯ!
ನವದೆಹಲಿಬೆಂಗಳೂರು

ಹೈಕಮಾಂಡ್ ಹೇಳಿದಾಗ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ: ಸಿಎಂ ಸಿದ್ದರಾಮಯ್ಯ!

Share
ಸಿದ್ದರಾಮಯ್ಯ
Share

ಬೆಂಗಳೂರು: ಹೈಕಮಾಂಡ್ ಹೇಳಿದಾಗ ಡಿಸಿಎಂ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿದ್ದಾರೆ.

READ ALSO THIS STORY: ಡಿಕೆಶಿಗೆ ಕುರ್ಚಿ ಮೇಲೆ ಕಣ್ಣು: ಸಿದ್ದರಾಮಯ್ಯರಿಗೆ ನಾಟಿ ಚಿಕನ್ ಆನ್ ಮೆನುವಿನ ಮೇಲೆ ಚಿತ್ತ!

ಡಿ. ಕೆ. ಶಿವಕುಮಾರ್ ನಿವಾಸದಲ್ಲಿ ಉಪಾಹಾರ ಸೇವಿಸಿ ಚರ್ಚೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಡಿ. ಕೆ. ಶಿವಕುಮಾರ್ ಯಾವಾಗ ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಈ ಉತ್ತರ ನೀಡಿದರು.

ಹೈಕಮಾಂಡ್ ಹೇಳಿದ ದಿನದಂದೇ ಡಿ. ಕೆ. ಶಿವಕುಮಾರ್ ಗೆ ಪಟ್ಟಾಭಿಷೇಕ ಆಗಲಿದೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ. ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯರ ಈ ಮಾತು ಮಹತ್ವ ಪಡೆದಿದೆ.

ಡಿ. ಕೆ. ಶಿವಕುಮಾರ್ ಮತ್ತು ನಾನು ಜೊತೆಯಲ್ಲೇ ನಡೆಯುತ್ತಿದ್ದೇವೆ. 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಮತ್ತು ಜೆಡಿಎಸ್ ಆಸೆ ಕೈಗೂಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *